Blog number 1983. ಸಾಗರ ರೈಲು ನಿಲ್ದಾಣದ ಮರುನಾಮಕರಣಕ್ಕೆ ಆಗಿನ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾನಿ ಅನುಮೋದಿಸಿದರೂ ಕಾಣದ ಕೈಗಳು ತಡೆ ಹಿಡಿದದ್ದು ಯಾಕೆ?
#ಇಪ್ಪತ್ನಾಲ್ಕು_ವರ್ಷದಿಂದ_ಸಾಗರ_ಜಂಬಗಾರು_ರೈಲು_ನಿಲ್ದಾಣದ_ಮರುನಾಮಕರಣ_ವಿಳಂಬ #ಸಾಗರ_ಜಂಬಗಾರು_ರೈಲುನಿಲ್ದಾಣದ_ಮರುನಾಮಕರಣ_ವಿಳಂಭ_ಏಕೆ? #ಡಾ_ರಾಮಮನೋಹರ_ಲೋಹಿಯ_ರೈಲುನಿಲ್ದಾಣ #ದಿನಾಂಕ_12_ಜೂನ್_2000ದಂದು_ನಾಮಪಲಕ_ಅನಾವರಣಗೊಳಿಸಲಾಗಿತ್ತು. #ಆಗಿನ_ಉಪಪ್ರಧಾನಿ_ಲಾಲ್_ಕೃಷ್ಣ_ಅಡ್ವಾನಿ_ವಿಶೇಷ_ಕಾಳಜಿಯಿಂದ_ಮರುನಾಮಕರಣಕ್ಕೆ_ಅನುಮೋದನೆ_ನೀಡಿದ್ದರು. #ಶಿವಮೊಗ್ಗ_ಸಂಸದರಾದ_ರಾಘವೇಂದ್ರ_ಮಾಜಿಮುಖ್ಯಮಂತ್ರಿ_ಯಡೂರಪ್ಪ #ಮಾಜಿ_ವಿದಾನಸಭಾ_ಸದಸ್ಯರಾದ_ಹರತಾಳು_ಹಾಲಪ್ಪರಿಗೆ_ಮನವಿ ಸಂಸದರಾದ ಶ್ರೀ ಬಿ.ವೈ.ರಾಘವೇಂದ್ರರಿಗೆ,ಮಾಜಿ ಮುಖ್ಯಮಂತ್ರಿ ಯಡೂರಪ್ಪನವರಿಗೆ ಮತ್ತು ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಹರತಾಳು ಹಾಲಪ್ಪನವರಿಗೆ ಮನವಿ. ಇತ್ತೀಚಿಗೆ ತಾವು ಹೊಸನಗರ ತಾಲ್ಲೂಕಿನ ಅರಸಾಳು ರೈಲ್ ನಿಲ್ದಾಣಕ್ಕೆ ಶಂಕರ್ ನಾಗ್ ರು ಮಾಲ್ಗುಡಿ ಡೇಸ್ ಸಿರೀಯಲ್ ಶೂಟಿಂಗ್ ಮಾಡಿದ ನೆನಪಿಗಾಗಿ ಮಾಲ್ಗುಡಿ ರೈಲು ನಿಲ್ದಾಣವಾಗಿ ಮರುನಾಮಕರಣ ಮಾಡಿದ್ದೀರಿ ಸ್ವಾಗತ. ಸಾಗರ ರೈಲು ನಿಲ್ದಾಣದ ಪುನರ್ ನಾಮಕರಣಕ್ಕೆ ಆಗಿನ ಉಪ ಪ್ರದಾನ ಮಂತ್ರಿಯಾದ ಶ್ರೀ ಲಾಲ್ ಕೃಷ್ಣ ಅಡ್ವಾನಿಯವರಿಂದ ಅನುಮೋದಿಸಲ್ಪಟ್ಟ #ಡಾII_ರಾಮ್_ಮನೋಹರ್_ಲೋಹಿಯಾ ರೈಲು ನಿಲ್ದಾಣ ಕಾಯ೯ಕ್ರಮ ಕೂಡ ನೆರವೇರಿಸಲು ಒತ್ತಾಯಿಸುತ್ತೇನೆ. ಸಾಗರ ಜಂಬಗಾರು ರೈಲು ನಿಲ್ದಾಣದ ಹೆಸರನ್ನ ಹೆಸರಾಂತ ಸಮಾಜವಾದಿ ಡಾII ರಾಮ ಮನೋಹರ ಲೋಹಿಯಾ ರೈಲು ನಿಲ್ದಾಣ ಎಂದು ಮರು ನಾಮಕರಣ...