Skip to main content

Posts

Showing posts with the label My younger friend Mafeer attacked by wild bees

Blog number 1304. ಕಾಡಿನ ಹೆಜ್ಜೇನು ದಾಳಿಗೆ ಒಳಗಾದ ನಮ್ಮ ಊರಿನ ಜನಾನುರಾಗಿ ಗೆಳೆಯ ಮಾಫೀರ್

#ಬೇಸಿಗೆಯಲ್ಲಿ_ಜೇನುಗಳೇಕೆ_ಉಗ್ರವಾಗುವುದು? #ಅಪಾಯದಿಂದ_ಪಾರಾದ_ಜನಾನುರಾಗಿ_ಮಾಪೀರ್    ಮೊನ್ನೆ ರಿಪ್ಪನ್ ಪೇಟೆ ಸಮೀಪದಲ್ಲಿ ಶಾಲೆಗೆ ಸೈಕಲ್ನಲ್ಲಿ ಬರುತ್ತಿದ್ದ ವಿದ್ಯಾಥಿ೯ಗೆ ಜೇನು ಕಚ್ಚಿದ ಬಗ್ಗೆ ಮತ್ತು ಅವನನ್ನು ರಕ್ಷಿಸಲು ಹೋದವರಿಗೂ ಜೇನು ಕಚ್ಚಿ ಆಸ್ಪತ್ರೆ ಸೇರಿಸಿದ ವರದಿ ಪತ್ರಿಕೆಯಲ್ಲಿ ಓದುತ್ತಿರುವಾಗಲೇ ನಮ್ಮ ಗೆಳೆಯ ಜಪ್ರುಲ್ಲಾ ಯಾನೆ ಮಾಪೀರ್ ಸಾಹೇಬರಿಗೆ ಆನಂದಪುರದ ರೈಲ್ವೆ ನಿಲ್ದಾಣದ ರಸ್ತೆಯ ಮರದಲ್ಲಿದ್ದ ಜೇನುಗಳು ಕಚ್ಚಿ ಸಾಗರ ಆಸ್ಪತ್ರೆಗೆ ಒಯ್ದರೆಂದು ಸುದ್ದಿ ಬಂದಾಗ ಬೇಸರ ಆಯಿತು ಮತ್ತು ಆತಂಕ.   ನನ್ನ ಸಹೋದರ ಸಾಗರ ಆಸ್ಪತ್ರೆಗೆ ಹೋಗಿ ನೋಡಿ ಪೋನ್ ಮಾಡಿ ಆತಂಕ ಪಡುವ ಪ್ರಸಂಗ ಇಲ್ಲ ಅಂದಾಗ ನೆಮ್ಮದಿ ಆಯಿತು.   ಇವರ ಹೆಸರು ಜಪರುಲ್ಲಾ ಮನೇನಲ್ಲಿ ಅನೇಕ ದೇವರ ಹರಕೆಯಿಂದ ಹುಟ್ಟಿದ ಗಂಡು ಮಗನಾದ್ದರಿಂದ ಮುಸ್ಲಿಂ ಸಂತರೋವ೯ರ ಮಾಪೀರ್ ಎಂಬ ಹೆಸರೆ ಈಗ ಊರಲ್ಲಿ ಚಾಲ್ತಿ, ಜನಾನುರಾಗಿ, ಕನ್ನಡ ಅಭಿಮಾನಿ, ಸವ೯ದಮ೯ದವರೂ ಇಷ್ಟ ಪಡುವ ಮಾಪೀರ್ ಸಾಹೇಬರು ತಮ್ಮ ಮಕ್ಕಳನ್ನು ಸಕಾ೯ರಿ ಕನ್ನಡ ಶಾಲೆಯಲ್ಲೇ ಓದಿಸುತ್ತಾರಾದ್ದರಿಂದ ನಮ್ಮ ಊರಿನ ಸರ್ಕಾರಿ ಶಾಲಾಭಿವೃದ್ಧಿ ಸಮಿತಿಗೆ ಅವಿರೋದ ಅಧ್ಯಕ್ಷರು ಕೂಡ ಇವರು ನಮ್ಮ ಊರ ಶಾಲೆಗೆ 25 ನೇ ವರ್ಷದ ಆಚರಣೆಯ ಬೆಳ್ಳಿಹಬ್ಬ ಸ್ಪಂತ ಹಣದಿಂದ ಅಮೋಘವಾಗಿ ನಡೆಸಿದ್ದು ದಾಖಲೆ, ಶಾಲಾ ಪ್ರಾರಂಭದಿಂದ ಸಹಕರಿಸಿದ ಜನಪ್ರತಿನಿದಿ, ಶಿಕ್ಷಕರನ್ನು, ಹಳೇ ವಿದ್ಯಾಥಿ೯ಗ...