#ಅಪಾಯದಿಂದ_ಪಾರಾದ_ಜನಾನುರಾಗಿ_ಮಾಪೀರ್
ಮೊನ್ನೆ ರಿಪ್ಪನ್ ಪೇಟೆ ಸಮೀಪದಲ್ಲಿ ಶಾಲೆಗೆ ಸೈಕಲ್ನಲ್ಲಿ ಬರುತ್ತಿದ್ದ ವಿದ್ಯಾಥಿ೯ಗೆ ಜೇನು ಕಚ್ಚಿದ ಬಗ್ಗೆ ಮತ್ತು ಅವನನ್ನು ರಕ್ಷಿಸಲು ಹೋದವರಿಗೂ ಜೇನು ಕಚ್ಚಿ ಆಸ್ಪತ್ರೆ ಸೇರಿಸಿದ ವರದಿ ಪತ್ರಿಕೆಯಲ್ಲಿ ಓದುತ್ತಿರುವಾಗಲೇ ನಮ್ಮ ಗೆಳೆಯ ಜಪ್ರುಲ್ಲಾ ಯಾನೆ ಮಾಪೀರ್ ಸಾಹೇಬರಿಗೆ ಆನಂದಪುರದ ರೈಲ್ವೆ ನಿಲ್ದಾಣದ ರಸ್ತೆಯ ಮರದಲ್ಲಿದ್ದ ಜೇನುಗಳು ಕಚ್ಚಿ ಸಾಗರ ಆಸ್ಪತ್ರೆಗೆ ಒಯ್ದರೆಂದು ಸುದ್ದಿ ಬಂದಾಗ ಬೇಸರ ಆಯಿತು ಮತ್ತು ಆತಂಕ.
ನನ್ನ ಸಹೋದರ ಸಾಗರ ಆಸ್ಪತ್ರೆಗೆ ಹೋಗಿ ನೋಡಿ ಪೋನ್ ಮಾಡಿ ಆತಂಕ ಪಡುವ ಪ್ರಸಂಗ ಇಲ್ಲ ಅಂದಾಗ ನೆಮ್ಮದಿ ಆಯಿತು.
ಇವರ ಹೆಸರು ಜಪರುಲ್ಲಾ ಮನೇನಲ್ಲಿ ಅನೇಕ ದೇವರ ಹರಕೆಯಿಂದ ಹುಟ್ಟಿದ ಗಂಡು ಮಗನಾದ್ದರಿಂದ ಮುಸ್ಲಿಂ ಸಂತರೋವ೯ರ ಮಾಪೀರ್ ಎಂಬ ಹೆಸರೆ ಈಗ ಊರಲ್ಲಿ ಚಾಲ್ತಿ, ಜನಾನುರಾಗಿ, ಕನ್ನಡ ಅಭಿಮಾನಿ, ಸವ೯ದಮ೯ದವರೂ ಇಷ್ಟ ಪಡುವ ಮಾಪೀರ್ ಸಾಹೇಬರು ತಮ್ಮ ಮಕ್ಕಳನ್ನು ಸಕಾ೯ರಿ ಕನ್ನಡ ಶಾಲೆಯಲ್ಲೇ ಓದಿಸುತ್ತಾರಾದ್ದರಿಂದ ನಮ್ಮ ಊರಿನ ಸರ್ಕಾರಿ ಶಾಲಾಭಿವೃದ್ಧಿ ಸಮಿತಿಗೆ ಅವಿರೋದ ಅಧ್ಯಕ್ಷರು ಕೂಡ ಇವರು ನಮ್ಮ ಊರ ಶಾಲೆಗೆ 25 ನೇ ವರ್ಷದ ಆಚರಣೆಯ ಬೆಳ್ಳಿಹಬ್ಬ ಸ್ಪಂತ ಹಣದಿಂದ ಅಮೋಘವಾಗಿ ನಡೆಸಿದ್ದು ದಾಖಲೆ, ಶಾಲಾ ಪ್ರಾರಂಭದಿಂದ ಸಹಕರಿಸಿದ ಜನಪ್ರತಿನಿದಿ, ಶಿಕ್ಷಕರನ್ನು, ಹಳೇ ವಿದ್ಯಾಥಿ೯ಗಳನ್ನು ಮರೆಯದೇ ಕರೆತಂದು ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಿ ಹಬ್ಬದ ಊಟ ಹಾಕಿಸಿ ಊರ ಹಬ್ಬದಂತೆ ನಡೆಸಿದ್ದರು.
ಶಾಮಿಯಾನ, ಜನರೇಟರ್, ವಿದ್ಯುತ್ ದೀಪಾಲಂಕಾರ, ಸ್ಟೇಜ್, ಕುಚಿ೯, ಡೈನಿಂಗ್ ಟೇಬಲ್ ಮತ್ತು ಅಡುಗೆ ಪಾತ್ರೆಗಳನ್ನು ಬಾಡಿಗೆ ನೀಡುವ ಇವರ ಸಂಸ್ಥೆ ಹೆಸರು VSV ಶ್ಯಾಮಿಯಾನ ಅಂದರೆ ನಮ್ಮ ಊರ ದೇವರಾದ ವರಸಿದ್ಧಿ ವಿನಾಯಕ ನ ಹೆಸರೇ ಇಟ್ಟಿದ್ದಾರೆ.
ಬಡವ ಬಲ್ಲಿದ ನೋಡದೆ ಅವರ ಅಗತ್ಯಕ್ಕೆ ತಕ್ಕಂತೆ ಶ್ಯಾಮಿಯಾನ, ದೀಪಾಲಂಕಾರ, ಸ್ಟೇಜ್ ಕುರ್ಚಿ, ಪಾತ್ರೆ ಜನರೇಟರು ಹಾಕಿ, ಧ್ವನಿವದ೯ಕದಲ್ಲಿ ಅವರ ಇಷ್ಟದ ಸಂಗೀತ ಹಾಕಿ ಕಾಯ೯ಕ್ರಮಯಶಸ್ವಿ ಮಾಡಿ ಬಂದು ಬಿಡುತ್ತಾರೆ ಹಣವೂ ಕೇಳದೇ, ನಂತರ ಮನೆ ಮಾಲಿಕನೇ ಇವರನ್ನ ಹುಡುಕಿ ಸಂತೋಷದಿಂದ ಹಣ ಪಾವತಿ ಮಾಡುತ್ತಾರೆ.
ನಮ್ಮೂರ ಜಾತ್ರೆಗೆ ಇವರ ಸೇವೆ ನಿರಂತರವಾಗಿ ನಡೆಯುತ್ತಿದೆ ಶ್ಯಾಮಿಯಾನ ಪಾತ್ರೆ ಪಡಗ ಉಚಿತ ಸೇವೆ, ವಿದ್ಯುತ್ ದೀಪಾಲಂಕಾರ, ಸ್ಪೇಜ್ ಮತ್ತು ಧ್ವನಿವದ೯ಕಕ್ಕೆ ಹಣ ಜಾತ್ರಾ ಸಮಿತಿಯಿಂದ ನೀಡುತ್ತಾರಾದರು ಕೆಲವೊಮ್ಮೆ ವರ್ಷವಾದರೂ ಹಣ ಪಾವತಿ ಆಗದಿದ್ದರೂ ಸ್ವಲ್ಪ ಕೂಡ ಬೇಸರಿಸದೇ ಮುಂದಿನ ಜಾತ್ರೆ ಯಶಸ್ವಿ ಮಾಡುತ್ತಾರೆ ಅಷ್ಟೇ ಅಲ್ಲ ನಿರಂತರವಾಗಿ ಎಲ್ಲಾ ಜಾತ್ರೆಗೆ ರಶೀದಿ ಪುಸ್ತಕ ಪಡೆದು ಹಣ ಸಂಗ್ರಹಿಸಿ ಕೊಡುತ್ತಾರೆ, ತಮ್ಮ ಶಕ್ತಿಗೆ ತಕ್ಕಂತೆ ಕಾಣಿಕೆ ನೀಡುವುದರಿಂದ ನಮ್ಮ ಊರ ಜಾತ್ರ ಸಮಿತಿ ಸದಸ್ಯರೂ ಇವರನ್ನ ಖಾಯ೦ ಆಗಿ ಜಾತ್ರ ಸಮಿತಿ ಸದಸ್ಯರಾಗಿ ಇಟ್ಟುಕೊಂಡಿದ್ದಾರೆ.
ಹಾಗಾಗಿ ಮಾಫೀರ್ ಗೆ ದಿಡೀರ್ ಆಗಿ ಜೇನು ಕಚ್ಚಿದ್ದು ಸುತ್ತಲಿನ ಸಾಗರ ಮತ್ತು ಹೊಸನಗರ ತಾಲ್ಲೂಕಿನ ಅನೇಕ ಊರಿನ ಇವರ ಅಭಿಮಾನಿಗಳಿಗೆ ಆತಂಕ ಆಗಿತ್ತು, ಇವರ ಶಿಷ್ಯ ಪ್ರವೀಣ್ ಆಚಾರರಿಗೂ ಜೇನು ಕಚ್ಚಿದೆ.
ಕಾಡು ಜೇನಿಗೆ ಗಿಡುಗ ಹೊಡೆದರೆ, ಕಾಗೆ ಅಕಸ್ಮಾತ್ ತಾಗಿದರೆ ಜೇನು ಕೆರಳುತ್ತೆ ಅನ್ನುತ್ತಾರೆ ಮತ್ತೆ ಬಿಸಿಲು ಜಾಸ್ತಿ ಆಗಿ ತಾಪಮಾನ ಬದಲಾದರೆ ಕೂಡ ಈ ರೀತಿ ಕೆರಳುತ್ತಂತೆ ಇದರ ಮಧ್ಯೆ ಕಿಲಾಡಿ ಹುಡುಗರು ಚಾಟರ್ ಬಿಲ್ಲಿನಿಂದ ಜೇನುಗೂಡನ್ನು ಕಲ್ಲಿನಿಂದ ಛೇದಿಸುವ ಹುಚ್ಚಾಟದಿಂದಲೂ ಊರ ಮದ್ಯೆಯಲ್ಲಿ ಇಂತಹ ಅನಾಹುತಕ್ಕೆ ಕಾರಣ ಆಗುತ್ತದೆ.
ಕುರಿ ಉಣ್ಣೆಯ ಕಂಬಳಿ ಮಾತ್ರ ಇಂತಹ ಸಂದಭ೯ದಲ್ಲಿ ಜೇನಿನಿಂದ ರಕ್ಷಣೆ ನೀಡುತ್ತದೆ ಆದರೆ ಈಗ ಯಾರ ಮನೆಯಲ್ಲೂ ಕಂಬಳಿ ಇಲ್ಲ, ಎಲ್ಲೆಲ್ಲೂ ಪ್ಲಾಸ್ಟಿಕ್ ಮಯ ಆಗಿದೆ.
ಜೇನಿನ ಅಕ್ರಮಣದಿಂದ ಗೆಳೆಯರು ಸುದಾರಿಸಿ ಕೊಳ್ಳುತ್ತಿದ್ದಾರೆ ಯಮ ಯಾತನೆಯ ನೋವು ಬಾವು ಕಡಿಮೆ ಆಗಲು ಒಂದೆರೆಡು ವಾರವಾದರೂ ಬೇಕು.
ಇವರ ಸಂಪಕ೯ 09449170199
Comments
Post a Comment