Blog number 1281. ಶಿವಮೊಗ್ಗ ಜಿಲ್ಲೆಯ ವಿಶೇಷ ವ್ಯಕ್ತಿಗಳು ಭಾಗ-1, ತಂಗಚ್ಚನ್ ಆಂಡ್ರೂಸ್ ಎಂಬ 2012 ರಲ್ಲಿ 19 ರಾಜ್ಯ, ಸ್ಪಿಟಿ ವ್ಯಾಲಿಗಳನ್ನು 47 ದಿನದಲ್ಲಿ ತಮ್ಮ ಬುಲೆಟ್ ಬೈಕ್ ನಲ್ಲಿ ಸುತ್ತಿ ಬಂದ ಮೊದಲ ಶಿವಮೊಗ್ಗ ಜಿಲ್ಲೆಯ ರೈಡಿಂಗ್ ಸಾಹಿಸಿ.
https://youtu.be/DmjCJ_rDKms
#ನಮ್ಮ_ಜಿಲ್ಲೆಯ_ವಿಶೇಷ_ವ್ಯಕ್ತಿಗಳು ಭಾಗ-1
#ಇವತ್ತು_ನನ್ನ_ಅತಿಥಿ
#ರಿಪ್ಪನಪೇಟೆಯ_ಬೆನವಳ್ಳಿ_ತಂಗಚ್ಚನ್_ಅಂಡ್ರೂಸ್
#ತಮ್ಮ_ಬುಲೆಟ್_ಬೈಕಿನಲ್ಲಿ_2012ರಲ್ಲಿ_47ದಿನಗಳ_19_ರಾಜ್ಯ_ಸುತ್ತಿದ್ದಾರೆ.
#ಬುಲ್ಸ್_ಆಫ್_ಶಿವಮೊಗ್ಗ_ರೈಡರ್_ಕ್ಲಬ್_ಸದಸ್ಯರು
#ಶಿವಮೊಗ್ಗ_ನೆಹರೂ_ಮೈದಾನದಿಂದ_ಇವರ_ಗೆಳೆಯ_ದೀಪಕ್_ತಿಮ್ಮೋಜಿ_ಕೂಡ_ಅವರ_ಪ್ರತ್ಯೇಕ_ಬೈಕನಲ್ಲಿ_ಜೊತೆಯಾಗಿದ್ದರು
ಈಗಿನ ಯುವ ಜನಾಂಗದಲ್ಲಿ ಬೈಕ್ ನಲ್ಲಿ ದೇಶ ಸುತ್ತುವ ಖಯಾಲಿ ಹೆಚ್ಚಾಗಿದೆ ಅದಕ್ಕೆ ಪೂರಕವಾಗಿ ಅದುನಿಕವಾದ ಮೋಟಾರ್ ಬೈಕ್ ಗಳು, ಎಲ್ಲಾ ಕಡೆ ಪೆಟ್ರೋಲ್ ಪಂಪ್, ಬೈಕ್ ಗಳ ಅಧಿಕೃತ ಸರ್ವಿಸ್ ಸೆಂಟರ್ ಗಳು, ಲಾಡ್ಜ್ ರೆಸ್ಟೊರಾಂಟ್ ಗಳು, ಪೇಸ್ ಬುಕ್-ವಾಟ್ಸಪ್ ಗಳ ಸಾಮಾಜಿಕ ಜಾಲ ತಾಣ, ರೈಡರ್ ಗಳ ಸಾಹಸಮಯ ಯಾತ್ರೆ ಸೆರೆ ಹಿಡಿಯುವ ಆದುನಿಕ ಗೊಪರಾ ಕ್ಯಾಮೆರಾಗಳು, ಬಿದ್ದರೂ ಪೆಟ್ಟಾಗದಂತ ರೈಡಿಂಗ್ ಉಡುಪು, ಹೆಲ್ಮೆಟ್ ಗಳ ರೈಡಿಂಗ್ ಗೇರ್ಸ್, ಎಲ್ಲಿ ಬೇಕೆಂದರಲ್ಲಿ ಹಣ ಡ್ರಾ ಮಾಡಿಕೊಳ್ಳಬಹುದಾದ ಹಣದ ವಹಿವಾಟಿನ Google pay Phone pay ಇತ್ಯಾದಿ ಪೇಯ್ಮೆಂಟ್ ಗೇಟ್ ವೇಗಳು, ಮನೆಯವರಿಗೆ ಇವರ ಪ್ರಯಾಣದ ಕ್ಷಣ ಕ್ಷಣದ ಮಾಹಿತಿ ಒದಗಿಸುವ ಜಿಪಿಎಸ್ ಉಪಕರಣಗಳು ಇದೆ.
ಇದಾವುದೇ ವ್ಯವಸ್ಥೆಗಳು ದೊರೆಯದ ಕಾಲದಲ್ಲಿ 47 ದಿನಗಳ ಕಾಲ ದೇಶದ 19 ರಾಜ್ಯಗಳನ್ನು ತಮ್ಮ ಬುಲೆಟ್ ಬೈಕ್ ನಲ್ಲಿ ತಮ್ಮದೇ ಮೂರು ಸಂದೇಶಗಳ ಸಾರುತ್ತಾ ತಮ್ಮ ಸಹ ರೈಡರ್ ಶಿವಮೊಗ್ಗ ಮೂಲದ ಬೆಂಗಳೂರಿನ ಇಂಜಿನಿಯರ್ ದೀಪಕ್ ತಿಮ್ಮೋಜಿ ಅವರು ಅವರದ್ದೇ ಬೈಕಿನಲ್ಲಿ ಇವರ ಜೊತೆ 2012ರಲ್ಲಿ ಶಿವಮೊಗ್ಗದ ನೆಹರೂ ಸ್ಟೇಡಿಯಂನಿಂದ ಪ್ರಯಾಣ ಪ್ರಾರಂಬಿಸುತ್ತಾರೆ.
ಶಿವಮೊಗ್ಗದ #ಬುಲ್ಸ್_ಆಪ್_ಶಿವಮೊಗ್ಗ ರೈಡರ್ ಕ್ಲಬ್ ನ ಸದಸ್ಯರುಗಳು ಇವರಿಗೆ ಶುಭ ಹಾರೈಸಿ ಬೀಳ್ಕೊಡುತ್ತಾರೆ.
ಪ್ರತಿಯೊಬ್ಬ ರೈಡರ್ಸ್ ನ ಕನಸಾದ ಸ್ಪಿಟಿ ವ್ಯಾಲಿ ತಲುಪಿ ವಾಪಾಸ್ ನೆಹರೂ ಸ್ಟೇಡಿಯಂ ತಲುಪುವಾಗ 47 ದಿನಗಳಾಗಿತ್ತು.
ಇನ್ನೊಂದು ಇವರ ವಿಶೇಷ ರೈಡಿಂಗ್ ಅಂದರೆ ಇವರು ತಮ್ಮ ಪ್ರಯಾಣದಲ್ಲಿ ಎಲ್ಲಿ ತಂಗಬೇಕು, ಎಲ್ಲಿ ಊಟ ಮಾಡಬೇಕು, ಎಷ್ಟು ದಿನ ರೈಡಿಂಗ್ ಇತ್ಯಾದಿ ನಿಗದಿ ಮಾಡದೆ ಅಲೆಮಾರಿ ರೀತಿಯ ಬೈಕ್ ರೈಡಿಂಗ್ ಇವರದ್ದಾಗಿತ್ತು.
ಇವರು ಕೇರಳ ಮೂಲದವರು, ಕೇರಳದಲ್ಲಿ ಬಾಲ್ಯದಲ್ಲಿ ಸೈಕಲ್ ನಲ್ಲಿ, ಬಸ್ಸಿನಲ್ಲಿ ಕೇರಳ ರಾಜ್ಯ ಪೂತಿ೯ಸುತ್ತಿದ್ದಾರೆ, ನಂತರ 1994 ರಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆ ಸಮೀಪದ ಬೆನವಳ್ಳಿಯಲ್ಲಿ ಇವರ ತಂದೆ ಕೃಷಿ ಜಮೀನು ಖರೀದಿಸಿ ರಬ್ಬರ್ - ಅಡಿಕೆ - ಮೀನುಗಾರಿಕೆ ಪ್ರಾರಂಬಿಸಿದರು.
ಇಲ್ಲಿಗೆ ಬಂದ ಮೇಲೆ ಡಿಸೇಲ್ ಬೈಕ್ ನಲ್ಲಿ ಸುಮಾರು 3 ಲಕ್ಷ ಕಿ.ಮಿ. ರೈಡಿಂಗ್ ಮಾಡಿದ್ದಾರೆ, ಕೃಷಿ ವ್ಯಾಪಾರಗಳ ಜೊತೆ ರೋಟರಿ ಸಂಸ್ಥೆಯಲ್ಲೂ ಸಕ್ರಿಯರಾಗಿರುವ ಇವರ ಈ ಬೈಕ್ ರೈಡಿಂಗ್ ಹವ್ಯಾಸ ಈಗಿನ ಯುವ ಜನಾಂಗಕ್ಕೆ ಉತ್ತೇಜಿಸುವಂತಾದ್ದು ಮತ್ತು ಇಂತಹ ಬೈಕ್ ರೈಡಿಂಗ್ ಹವ್ಯಾಸದ ಸ್ಥಳಿಯ ಯುವ ಜನತೆ ಇವರಿಂದ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.
ಇವರ ಸಂಪರ್ಕದ ವಾಟ್ಸಪ್ ನಂಬರ್ 9448628570
Comments
Post a Comment