Blog number 1309. ಮೀನು ಶಿಕಾರಿಯಲ್ಲಿ ಬಳಸುವ ರೆಡ್ ವಾರ್ಮ್ ಲಿಕ್ವಿಡ್ ಎಂಬ ಕಡು ಕೆಂಪು ಬಣ್ಣದ ದಟ್ಟ ಸುವಾಸನೆಯ ಚೀನಾ ನಿರ್ಮಿತ ದ್ರಾವಣ ಸ್ಥಳಿಯ ಮೀನುಗಾರರಾದ ಕ್ಯಾತರು ಬಳಸುತ್ತಿದ್ದಾರೆ ಇದು ಜಲಚರಗಳಿಗೆ ನೀರಿಗೆ ಹಾನಿಕಾರಕವಲ್ಲ ಮತ್ತು ವಿಷದ ದ್ರಾವಣವಲ್ಲ.
#ಬಲೆ_ಬೀಸಿ_ಮೀನು_ಹಿಡಿಯುವ_ಕ್ಯಾತರು_ಬಳಸುವ_ಕೆಂಪು_ದ್ರಾವಣ_ಯಾವುದು?
#ವಿಷಯುಕ್ತವೇ_ಶುಂಠಿಗೆ_ಬಳಸುವ_ತೀವ್ರ_ವಿಷವೇ ?
#ಈರೀತಿ_ಸಂಶಯಗಳಿಗೆ_ಉತ್ತರ_ಸಿಕ್ಕಿದೆ_ಇದು_ಮೀನು_ಶಿಕಾರಿಗಾಗಿ_ವಿಶ್ವದಾದ್ಯಂತ_ಬಳಸುವ_ರೆಡ್_ವಾರ್ಮ್_ಲಿಕ್ವಿಡ್
#ಚೀನಾದೇಶದ_ಉತ್ಪನ್ನ_ಪ್ಲಿಪ್_ಕಾರ್ಟ್_ಅಮೇಜಾನನಲ್ಲಿ_ಲಭ್ಯ.
ಹಕ್ಕಿಪಿಕ್ಕಿ ಜನರು ಶಿಕಾರಿ ಮಾಡುವ ಕಾಡು ಕೋಳಿಯ ಬಣ್ಣ ಬಣ್ಣದ ಕುತ್ತಿಗೆಯ ಪುಕ್ಕ ಹೆಚ್ಚು ಬೆಲೆಗೆ ಖರೀದಿಸಿ ಒಯ್ಯುವುದರ ರಹಸ್ಯ ಕಂಡು ಹಿಡಿದಿದ್ದ ನನಗೆ (ವಿದೇಶಗಳಲ್ಲಿ ಸಾಲೋಮನ್ ಪಿಶ್ ಹಿಡಿಯಲು ಗಾಣಕ್ಕೆ ಬಳಸುತ್ತಾರೆ) ವನ್ಯಜೀವಿ ಛಾಯಾಗ್ರಹಣ ಮಾಡುತ್ತಿರುವ ಈ ಹಿಂದೆ ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಆನಂದಪುರಂ ಸರ್ಕಾರಿ ಪದವಿಪೂರ್ವ ಕಾಲೇಜು ಸಮಿತಿ ಅಧ್ಯಕ್ಷನಾಗಿದ್ದಾಗ ಉಪನ್ಯಾಸಕರಾಗಿದ್ದ ಕಲೀಮುಲ್ಲಾ ಅವರು ಅವರ ಸುಂದರ ಕೈಬರಹ ಮತ್ತು ಬಡ ವಿದ್ಯಾರ್ಥಿಗಳಿಗೆ ಮಾಡುತ್ತಿದ್ದ ಸಹಾಯದಿಂದ ನನಗೆ ಅವರ ಬಗ್ಗೆ ತುಂಬಾ ಅಭಿಮಾನ.
ಇಲ್ಲಿಂದ ವರ್ಗಾವಣೆ ಆದ ಮೇಲೆ, ನಾನು ರಾಜಕೀಯ ತೊರೆದ ಮೇಲೆ ಗೊತ್ತಾಗಿದ್ದು ಇವರು ಪ್ರಸಿದ್ದ ಸಾಹಿತಿ ರಹಮತ್ ತರೀಕೆರೆ ಇವರ ಸಹೋದರ ಅಂತ.
ಕಳೆದ ವರ್ಷ ಇವರು ಶಿಕಾರಿಪುರದ ಕೆರೆಯಲ್ಲಿ ಬೆಳ್ಳಂಬೆಳಿಗ್ಗೆ ಹಕ್ಕಿಗಳ ಚಿತ್ರಿಕರಣ ಮಾಡಲು ಹೋದಾಗ ಅಲ್ಲಿ ಮೀನು ಹಿಡಿಯುವ ಕ್ಯಾತರು ಕೆಂಪು ದ್ರಾವಣ ಸೋಕುವ ಪೋಟೋ ತೆಗೆದು ಇದ್ಯಾವ ದ್ರಾವಣ? ಎಂದು ಪೇಸ್ ಬುಕ್ ನಲ್ಲಿ ಲೇಖನ ಹಾಕಿದ್ದರು.
ಇದು ಎಲ್ಲರಿಗೂ ಶಾಕಿಂಗ್ ಸುದ್ದಿ ಆಗಿತ್ತು ಕೆಲವರು ಪ್ರತಿಕ್ರಿಯಿಸಿ ಶುಂಠಿ ಬೆಳೆಗೆ ಕೀಟನಾಶಕವೆ? ಎ೦ಬ ಅನುಮಾನ ವ್ಯಕ್ತಪಡಿಸಿದ್ದರಿಂದ ಮತ್ಸ್ಯಹಾರಿಗಳಲ್ಲಿ ಆತಂಗಕ್ಕೆ ಕಾರಣವಾಗಿತ್ತು.
ಈ ಬಗ್ಗೆ ನಾನು ಕೂಡ ಬ್ಲಾಗ್ ನಲ್ಲಿ ಲೇಖನ ಒಂದು ಬರೆದಿದ್ದೆ ಇಲ್ಲಿ ಕ್ಲಿಕ್ ಮಾಡಿ ಓದಿ https://arunprasadhombuja.blogspot.com/2022/12/blog-number-1152.html
ಆದರೆ ಈ ಬಗ್ಗೆ ನನ್ನ ಹುಡುಕಾಟಕ್ಕೆ ಅಂತ್ಯವಾಗುವ ಎಲ್ಲಾ ಮಾಹಿತಿ ಈಗ ದೊರೆತಿದೆ.
ಮೀನು ಹಿಡಿಯಲು ಬಳಸುವ ಕೆಂಪು ದ್ರಾವಣದ ಮೂಲ ಗೊತ್ತಾಯಿತು.
ವಿಶ್ವದಾದ್ಯಂತ ಮೀನು ಹಿಡಿಯಲು ಗಾಣಕ್ಕೆ ಎರೆಹುಳ, ಸಣ್ಣ ಮೀನು, ವಿದೇಶದಲ್ಲಿ ನಮ್ಮ ಪಶ್ಚಿಮ ಘಟ್ಟದ ಕಾಡು ಕೋಳಿ ಕುತ್ತಿಗೆಯ ಬಣ್ಣದ ಪುಕ್ಕ,ಗೋದಿ ಉ೦ಡೆ, ಕೃತಕ ಕಪ್ಪೆ ಇತ್ಯಾದಿ ಬಳಕೆಯ ನಂತರದಲ್ಲಿ ಈಗ ಹೆಚ್ಚು ಬಳಕೆ ರೆಡ್ ವಾರ್ಮ್ ಲಿಕ್ವಿಡ್ .
ದಟ್ಟ ಬಣ್ಣ ಮತ್ತು ತೀವ್ರ ವಾಸನೆಯ ದ್ರಾವಣ (ಸೆಂಟ್) ಮೀನುಗಳಿಗೆ ಆಕರ್ಷಣೆ ಆಗುವುದರಿಂದ ಅವುಗಳು ಇದರ ಹತ್ತಿರ ಬರುವುದರಿಂದ ಮೀನು ಶಿಕಾರಿ ಸುಲಭ ಆಗಿದೆ.
ಪರಿಮಳ - ಸುವಾಸನೆ - ಅಮೈನೊ ಆಮ್ಲಗಳ ವಿಶೇಷ ಕಡು ಬಣ್ಣದ ದ್ರಾವಣ ಮೀನುಗಳಿಗೆ ಉತ್ತೇಜಿಸುತ್ತದೆ, ಮೀನುಗಳಿಗೆ ಇದು ಸುರಕ್ಷಾ ವಲಯ ಸೃಷ್ಟಿಸುವುದರಿಂದ ಮೀನುಗಳು ಗುಂಪಾಗಿ ಇದರ ಹತ್ತಿರ ಬರುವುದರಿಂದ ಮೀನು ಶಿಕಾರಿಗಾರರಿಗೆ ಬಲೆ ತು೦ಬಾ ಮೀನಿನ ಸುಲಭ ಶಿಕಾರಿ ಆಗುತ್ತದೆ.
ಇದು ವಿದೇಶಗಳಲ್ಲಿ ಈಗಿನ ದಿನಗಳಲ್ಲಿ ಮೀನು ಶಿಕಾರಿಗೆ ಹೆಚ್ಚು ಬಳಕೆಗೆ ಕಾರಣ ಆಗಿದೆ,ಈ ದ್ರಾವಣ ಹೆಚ್ಚು ಚೀನಾ ದೇಶದಲ್ಲಿ ಉತ್ಪಾದನೆ ಆಗಿ ಪ್ರಪಂಚದಾದ್ಯಂತ ಮಾರಾಟ ಆಗುತ್ತಿದೆ.
ಹಾಗಂತ ಇದು ಜಲಚರಗಳಿಗೆ ಅಥವ ನೀರಿಗೆ ಹಾನಿ ಮಾಡದ ನೈಸರ್ಗಿಕ ದ್ರಾವಣ ಆದ್ದರಿಂದ ಭಯಪಡುವ ಅಗತ್ಯವಿಲ್ಲ.
Comments
Post a Comment