1999 ರಿಂದ ನನ್ನ ಇವರ ಗೆಳೆತನ,ಇದು ಇಲ್ಲಿಯವರೆಗೂ ಮುಂದುವರಿದಿದೆ. ಅನೇಕ ಕಾನೂನು ಸಲಹೆಗೆ ನಾನು ಇವರ ಮೇಲೆ ಅವಲಂಬಿತ (ಅನೇಕ ವಕೀಲ ವೃತ್ತಿಯ ಗೆಳೆಯರು ಇದ್ದಾರೆ ಆದರೆ ಅವರವರ ಕಾಯ೯ದಲ್ಲಿ ನಿರತರಾದ್ದರಿಂದ ನನಗೆ ಅವರ ಸಮಯ ನೀಡಲು ಸಾಧ್ಯವಿಲ್ಲ ಇರಬಹುದು) ಎಲ್ಲಾ ಸಂದಭ೯ದಲ್ಲೂ ಬೇಸರಿಸದೆ ನನಗೆ ಬೇಕಾದ ಮಾಹಿತಿ ಮತ್ತು ಸಲಹೆ ತಪ್ಪದೆ ನೀಡುವ ಜಾಯಮಾನ ವಕೀಲರಾದ ಕುಬಟಳ್ಳಿ ಕೆ.ವೈ.ರಾಮಚಂದ್ರರದ್ದು.
ನಾನು FB ಯಲ್ಲಿ ಬರೆದ ಉಪ್ಪಿನ ಕಾಯಿ ಲೇಖನ ಓದಿದವರು ಅವರ ಶ್ರೀಮತಿ ತಯಾರಿಸಿದ ಮಿಡಿ ಉಪ್ಪಿನ ಕಾಯಿಯ ಒಂದು ಸಣ್ಣ ಜಾಡಿ ಕೊಡುಗೆ ಆಗಿ ನೀಡಿದ್ದಾರೆ ಅತ್ಯಂತ ರುಚಿಕರವಾಗಿ ತಯಾರಿಸಿದ ಅವರ ಶ್ರೀಮತಿಗೆ ಮತ್ತು ತಲುಪಿಸಿದ ವಕೀಲರಿಗೆ ಟಿಪ್ಪು ಸುಲ್ತಾನರ ಮರಿಮಗಳ ಪ್ರಸ್ತಕ ನೀಡುವ ಕೃತಜ್ಞತೆ ಅಪಿ೯ಸಿದೆ.
ಇರುವಕ್ಕಿ ಕೃಷಿ ವಿಶ್ವವಿದ್ಯಾಲಯದ ಕಾನೂನು ಸಲಹೆಗಾರರೂ ಆಗಿರುವ ಇವರು ಆಳವಾದ ಅಧ್ಯಯನದಿಂದ ಅತ್ಯುತ್ತಮ ವಾಗ್ಮಿಯೂ ಆಗಿದ್ದಾರೆ.
ಮಲೆನಾಡಿನ ರೈತರ, ಬಗರ್ ಹುಕುಂ ರೈತರ, ಆರಣ್ಯ ಒತ್ತುವರಿದಾರರ ಸಮಸ್ಯೆ ಬಗ್ಗೆ ಹೆಚ್ಚು ತಿಳಿದಿದ್ದಾರೆ ಮತ್ತು ಅವರ ಪರಿಹಾರಕ್ಕೆ ಸದಾ ನ್ಯಾಯಾಲಯದಲ್ಲಿ ಹೋರಾಡುತ್ತಿದ್ದಾರೆ.
ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪ, ಮಾಜಿ ಶಾಸಕರಾದ ಪಟಮಕ್ಕಿರತ್ನಾಕರ್, ಸ್ವಾಮಿ ರಾವ್, ಸಮಾಜವಾದಿ ಸಾಹಿತಿ ಕೋಣOದೂರು ವೆoಕಪ್ಪ ಗೌಡರು, ಪ್ರಕೃತಿ ಪುಟ್ಟಯ್ಯ ಮು೦ತಾದವರೊಡನೆ ನಿಕಟ ಸಂಬಂದ ಹೊಂದಿದ್ದರು ಮತ್ತು ಅವರೊಡನೆ ಅನೇಕ ಹೋರಾಟಗಳಲ್ಲಿ ಭಾಗವಹಿಸಿದ್ದರು.
ಶಿಸ್ತಿನ ಜೀವನ ಚೌಕಟ್ಟಿನಲ್ಲಿ ಕೃಷಿ, ವಕೀಲ ವೃತ್ತಿ ಮತ್ತು ಸಮಾಜ ಸೇವೆಯಲ್ಲಿ ನಿರತರಾಗಿರುವ ಗೆಳೆಯ ರಾಮಚಂದ್ರರಿಗೆ ಮುಂದಿನ ದಿನದಲ್ಲಿ ದೊಡ್ಡ ಸ್ಥಾನ ಮಾನ ಸಿಗಲಿ ಎಂದು ಹಾರೈಸುತ್ತೇನೆ
Comments
Post a Comment