Blog number 1276.ದೇಶದ ಜಲಪಾತಗಳ ಪಟ್ಟಿ ಪರಿಷ್ಕರಣೆ ಆಗಿ ಹಿಮಾಚಲ ಪ್ರದೇಶದ ದೇಶದ ಅತ್ಯಂತ ಎತ್ತರದ ಜಲಪಾತ ನೋಹಕಾಲಿಕಾ ಕೈ ಬದಿಗೊತ್ತಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಸಮೀಪದ ನಿಡಗೋಡಿನ ದಟ್ಟ ಅರಣ್ಯದ ಮಧ್ಯದಲ್ಲಿ ಜನರ ದೃಷ್ಟಿಗೆ ಬೀಳದ ಕುಂಚಿಕಲ್ ಪಾಲ್ಸ್ ಸೇರಲಿದೆಯಾ?
#ದಾಖಲೆಯಲ್ಲಿರುವುದು_ಹಿಮಾಚಲಪ್ರದೇಶದ_ನೋಹಕಾಲಿಕೈ_ಜಲಪಾತ.
#ಆದರೆ_ಶಿವಮೊಗ್ಗ_ಜಿಲ್ಲೆಯ_ಮಾಸ್ತಿಕಟ್ಟೆಯ_ನಿಡುಗೋಡಿನ_ಕುಂಚಿಕಲ್_ಪಾಲ್ಸ್_ಅತ್ಯಂತ_ಎತ್ತರ_ಎನ್ನುತ್ತಾರೆ!!.
#ಜೋಗ್_ಪಾಲ್ಸ್_ಗಿಂತ_ಮಾವಿನಗುಂಡಿ_ಹೆಚ್ಚು_ಎತ್ತರ!?
#ದೇಶದ_ನೋಹಾಕಾಲಿಕೈ_
#ಜಲಪಾತಕ್ಕಿಂತ_ಶಿವಮೊಗ್ಗಜಿಲ್ಲೆಯ_ಕುಂಚಿಕಲ್_ಪಾಲ್ಸ್_ಹೆಚ್ಚು_ಎತ್ತರ ?
#ಈ_ಸುದ್ಧಿಗಳ_ಬಗ್ಗೆ_ಸರ್ಕಾರದ_ಉತ್ತರ_ಬೇಕಾಗಿದೆ.
#ಕುಂಚಿಕಲ್_ಪಾಲ್ಸ್_ನೋಡಿದವರು_ಇದ್ದಾರ?
#ಸಾಮಾಜಿಕ_ಜಾಲತಾಣದಲ್ಲಿ_ಹರಿದಾಡುತ್ತಿರುವ_ಚಿತ್ರ_ಕುಂಚಿಕಲ್_ಪಾಲ್ಸ್_ನದ್ದಾ?
#ವರಾಹಿ_ಮುಳುಗಡೆ_ರೈತ_ಕುಣುಬಿ_ಈರಪ್ಪಣ್ಣರ_ಜೊತೆ
#ಕುಂಚಿಕಲ್_ಜಲಪಾತದ_ಅನ್ವೇಷಣೆಗೆ_1990ರಲ್ಲಿ_ನಮ್ಮ_ವಿಪಲ_ಪ್ರಯತ್ನ
#ಈ_ವದಂತಿಗಳು_ಪರಿಶೀಲನೆ_ಆಗಿ_ಸರ್ಕಾರ_ದೃಡೀಕರಿಸಿದರೆ
#ದೇಶದ_ಜಲಪಾತಗಳ_ಪಟ್ಟಿ_ಪರಿಷ್ಕರಣೆ_ಆಗಿ_ನಮ್ಮ_ಜಿಲ್ಲೆಯ_ಕುಂಚಿಕಲ್_ಪಾಲ್ಸ್_ಅಗ್ರಸ್ಥಾನ_ಪಡೆಯಲಿದೆ.
ಕಣ್ಣೆದುರಿಗೇ ಇರುವ ಜೋಗ ಜಲಪಾತದ ಪಕ್ಕದ ಮಾವಿನಗುಂಡಿ ಜಲಪಾತದ ಬಗ್ಗೆ ಮಾಹಿತಿ ಕೊರತೆ ಮತ್ತು ಅದರ ಅಳತೆ ಆಗದ ಬಗ್ಗೆ ಬರೆದ ಲೇಖನ ಓದಿದ ಸಮಾಜವಾದಿ ಗೋಪಾಲಗೌಡರ ಗೆಳೆಯರಾಗಿದ್ದ ಸುಕುಮಾರರ ಪುತ್ರರಾದ ಬಟ್ಟೆಮಲ್ಲಪ್ಪದ #K_S_ಸುಮ೦ಗದ ಅವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಸಮೀಪದ ನಿಡಗೋಡು ವಿಲೇಜ್ ಸಮೀಪದ ಕುಂಚಿಕಲ್ ಪಾಲ್ಸ್ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿನ ಮಾಹಿತಿ ಹಂಚಿಕೊಂಡಿದ್ದರು.
ಈ ಕುಂಚಿಕಲ್ ಪಾಲ್ಸ್ ಎತ್ತರ 455 ಮೀಟರ್ ಅಂದರೆ 1433 ಅಡಿ ಇದೆ ಎಂಬ ಮಾಹಿತಿ ಆ ಪ್ರಕಾರ ಈ ಅಳತೆ ಸರಿ ಇದ್ದರೆ ನಮ್ಮ ದೇಶದ ಅತಿ ಎತ್ತರದ ಜಲಪಾತ ನಮ್ಮ ಜಿಲ್ಲೆಯ ಕುಂಚಿಕಲ್ ಪಾಲ್ಸ್ ಆಗಲಿದೆ.
ಏಕೆಂದರೆ ಈಗ ದಾಖಲೆಯಲ್ಲಿರುವುದು ಹಿಮಾಚಲ ಪ್ರದೇಶದ ನೋಹಲಿ ಕೈ ಪಾಲ್ಸ್ ಇದರ ಎತ್ತರ 340 ಮೀಟರ್ ಅಂದರೆ 1115 ಅಡಿ.
ಹೊಸನಗರ ತಾಲ್ಲೂಕಿನ ಮಾಸ್ತಿಕಟ್ಟೆ ಸಮೀಪದ ನಿಡಗೋಡಿ ವಿಲೇಜ್ ಸಮೀಪ ಒಂದು ತುಂಬಾ ಎತ್ತರದಿಂದ ಧುಮುಕುವ ಜಲಪಾತ ಇದೆ, ಅದು ಹೊರ ಜಗತ್ತಿಗೆ ಪರಿಚಯವಾಗಿಲ್ಲ, ಅದನ್ನು ಅನ್ವೇಷಣೆ ಯಾರೂ ಮಾಡಿಲ್ಲ, ಅದನ್ನು ನೋಡಿದವರು ಸ್ಥಳಿಯ ಕೆಲವೇ ಕೆಲವು ರೈತರು ಅನ್ನುವ ಸುದ್ದಿ 1990ರಲ್ಲಿ ನನ್ನ ಕಿವಿಗೆ ಬಿದ್ದಿತ್ತು.
ಈ ಸಂದರ್ಭದಲ್ಲೇ ನಮ್ಮ ಊರಿನ ಸಮೀಪದ ಘಂಟಿನಕೊಪ್ಪದಲ್ಲಿ ಜಮೀನು ಖರೀದಿಸಿದ ತೀರ್ಥಳ್ಳಿ ತಾಲ್ಲೂಕಿನ ಯಡೂರು ಸಮೀಪದ ಕೆಲವು ವರಾಹಿ ಮುಳುಗಡೆ ರೈತರ ಕುಟುಂಬದಲ್ಲಿ ನನಗೆ ಆತ್ಮೀಯರಾಗಿದ್ದ ಕುಣುಬಿ ಈರಪ್ಪಣ್ಣ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದರು.
ಅವರಿಗೆ ಅವರ ಅಜ್ಜ0ದಿರು ಈ ಜಲಪಾತದ ಬಗ್ಗೆ ತಿಳಿಸಿದ್ದರಂತೆ ನಂತರ ಇವರ ಪ್ರಾಯದ ದಿನಗಳಲ್ಲಿ ಇವರ ಕೆಲವು ಗೆಳೆಯರ ಜೊತೆ ಸೇರಿ ಕಷ್ಟಪಟ್ಟು ಕಾಡಿನಲ್ಲಿ ದಾರಿ ಮಾಡಿಕೊಳ್ಳುತ್ತಾ ಈ ಜಲಪಾತ ವೀಕ್ಷಿಸಿದ್ದರಂತೆ.
ಆ ಸಂದರ್ಭದಲ್ಲಿ ಕಾಳಿ೦ಗ ಸರ್ಪ ಬಿದಿರು ಎಲೆಗಳ ಗುಡ್ಡೆ ಮಾಡಿ ಮೊಟ್ಟೆಗೆ ಕಾವು ನೀಡುವ ಅನೇಕ ಜಾಗಗಳು ಅವರಿಗೆ ಎದುರಾಗಿತ್ತಂತೆ.
ನಾವೊಂದಿಷ್ಟು ಗೆಳೆಯರು ಈ ಜಲಪಾತ ಅನ್ವೇಷಿಸಿದ ಮೊದಲಿಗರಾಗಬೇಕೆಂಬ ಹುಚ್ಚಿಗೆ ಬಿದ್ದು ಎಲ್ಲಾ ತಯಾರಿ ಮಾಡಿಕೊಂಡಿದ್ದೆವು, ಕುಣುಬಿ ಈರಪ್ಪಣ್ಣರ ನೇತೃತ್ವದಲ್ಲಿ ಅವರ ಯಡೂರು ಸಮೀಪದ ಕೆಲ ಗೆಳೆಯರು ಬಂದೂಕುಗಳ ಜೊತೆ, ದಾರಿ ಮಾಡಿಕೊಳ್ಳಲು ಕತ್ತಿ ಮತ್ತು ಕೊಡಲಿ ಜೊತೆ, ದಾರಿಯಲ್ಲಿ ಅಡುಗೆಗಾಗಿ ವ್ಯವಸ್ಥೆ, ಪೋಟೋ ವಿಡಿಯೋ ಇತ್ಯಾದಿ ತಯಾರಿ ಮಾಡಿದೆವು.
ಈ ಹಿಂದೆ ಈರಪ್ಪಣ್ಣ ಹೇಳಿದ್ದ ಕಾಳಿಂಗ ಸರ್ಪಗಳ ಮೊಟ್ಟೆಗೆ ಕಾವು ನೀಡುತ್ತಿದ್ದ ಕಥೆ ಕೇಳಿದ್ದ ಗೆಳೆಯರು ಒಬ್ಬೊಬ್ಬರೇ ಹಿಂದೆ ಸರಿದು ಕೊನೆಗೆ ಉಳಿದಿದ್ದು ನಾನು ಮತ್ತು ಈರಪ್ಪಣ್ಣ ಮಾತ್ರ ಹೀಗೆ ನಮ್ಮ ದೇಶದ ಅತ್ಯಂತ ಎತ್ತರದ ಜಲಪಾತ? ಅನ್ವೇಷಿಸುವ ಸಾಹಸ ಯಾತ್ರೆ ವಿಪಲವಾಯಿತು.
ಈ ಬಗ್ಗೆ ಬರೆದ ಕಾದಂಬರಿ ಮುಂದೆ ಯಾವತ್ತಾದರೂ ಪ್ರಕಟಿಸಬೇಕು ಅಂತ ಇದ್ದೇನೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಕು೦ಚಿ ಕಲ್ ಪಾಲ್ಸ್ ಪೋಟೋ ನಿಜಕ್ಕೂ ಕುಂಚಿಕಲ್ ಪಾಲ್ಸ್ ನದ್ದಾ?
ದೇಶದ ಅತ್ಯಂತ ಎತ್ತರ ಎನ್ನುವ ಇದರ ಎತ್ತರ 445 ಮೀಟರ್ ಅಂದರೆ 1433 ಅಡಿ ಎನ್ನುವುದು ನಿಖರ ಅಳತೆಯಾ? ಹಾಗಾದರೆ ಇದನ್ನು ಅಳೆದವರು ಯಾರು? ಈ ಪೋಟೋ ತೆಗೆದವರು ಯಾರು? ಎಂಬ ಪ್ರಶ್ನೆಗಳು ಕಾಡದೇ ಇರುವುದಿಲ್ಲ.
ಈ ದುರ್ಗಮ ಪ್ರದೇಶದಲ್ಲಿ ನಿಗೂಡವಾಗಿರುವ ಜಲಪಾತ ಇರುವುದು ಮಾತ್ರ ಸತ್ಯ ಸಂಗತಿ, ಅದರ ಎತ್ತರ ಏನಾದರೂ ಹಿಮಾಚಲ ಪ್ರದೇಶದ 1115 ಅಡಿ ಎತ್ತರದ ನೋಹಲಿ ಕೈ ಪಾಲ್ಸ್ ಗಿಂತ ಎತ್ತರ ಇರುವುದೇ ಆದರೆ ನಮ್ಮ ದೇಶದ ಜಲಪಾತಗಳ ಪಟ್ಟಿಯಲ್ಲಿ ದೇಶದ ಅತ್ಯಂತ ಎತ್ತರದ ಜಲಪಾತ ನಮ್ಮ ರಾಜ್ಯದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ವರಾಹಿ ನದಿಯ ಕುಂಚಿಕಲ್ ಜಲಪಾತ ಸ್ಥಾನ ಪಡೆಯಲಿದೆ.
ಈ ಬಗ್ಗೆ ಅಧಿಕೃತ ಅಳತೆ ಮತ್ತು ಜಲಪಾತದ ಚಿತ್ರವನ್ನು ಸರ್ಕಾರ ಪರಿಶೀಲಿಸಿ ದೃಡಿಕರಿಸಬೇಕು ಈ ಪ್ರದೇಶ ಪ್ರವೇಶಕ್ಕೆ ಅರಣ್ಯ ಇಲಾಖೆ ನಿಷೇದವೂ ಇದೆ ಅಂತೆ.
Comments
Post a Comment