ಇವರ ದೊಡ್ಡಪ್ಪಾ ಶ್ರೀ ರವಳಪ್ಪಾ ನವರು ಶಾಂತವೇರಿ ಗೋಪಾಲಗೌಡರ ಸಮಾಜವಾದಿ ಪಕ್ಷದ ಒಡನಾಡಿಗಳು ಆಗಿನ ಶಿವಮೊಗ್ಗದ ಪುರಸಭೆಯಲ್ಲಿ ಜನ ಪ್ರತಿನಿಧಿ ಆಗಿ, ಪದಾದಿಕಾರಿಗಳಾಗಿ ಜನಪ್ರಿಯತೆಗಳಿಸಿದವರು ಅವರ ಸಹೋದರ ಚಂದ್ರಪ್ಪ ಪ್ರಗತಿ ಪರ ರೈತರು ಎಲ್ಲಾ ರಾಜಕೀಯ ದುರೀಣರ ಒಡನಾಟ ಹೊಂದಿದ್ದವರು ಅವರ ಹೆಸರಲ್ಲಿ ಶಿವಮೊಗ್ಗದ ನೆಹರೂ ರಸ್ತೆಯ ಚಂದ್ರು ಸ್ಟುಡಿಯೋ ಕೆಲವು ದಶಮಾನ ಮಿಂಚಿದ ಉದ್ಯಮ ಈಗ ಶಿವಮೊಗ್ಗದ ಕಾಂಗ್ರೆಸ್ ಕಚೇರಿ ಪಕ್ಕದ ಮಹಲಿನ ಮಾಳಿಗೆ ಮೇಲೆ ಇದೆ.
ರವಳಪ್ಪಾರ ತಮ್ಮನ ಮಗ ನಿರಂಜನ ವಿದ್ಯಾವಂತ, ದಾನಿ ಮತ್ತು ಕಾಂಗ್ರೇಸ್ನ ಕಟ್ಟಾಳು ಇವರ ಪೋಟೋ ಸ್ಟುಡಿಯೋ ಈಗಿನ ರಾಜಕೀಯ ಮುಂದಾಳುಗಳಾದ ರಮೇಶ್, ದಿನೇಶ್, ರವಿ ಮುಂತಾದವರ ಕಾಯ೯ ಸ್ಥಾನ ಆಗಿತ್ತು.
ವಿದ್ಯಾಭ್ಯಾಸ ಮಾಡಲು ತೊಂದರೆ ಆದ ಸಾವಿರಾರು ವಿದ್ಯಾಥಿ೯ಗಳಿಗೆ ನಿರಂಜನ ಆತ್ಮವಿಶ್ವಾಸ ತುಂಬಿ ಅವರ ಕನಸು ನನಸು ಮಾಡಿದ್ದನ್ನ ನಾವೆಲ್ಲ ನೋಡಿದ್ದೇವೆ.
ಆದರೆ ಕಾಂಗ್ರೇಸ್ ಪಕ್ಷ ಇಂತವರನ್ನ ಬಳಸಿ ಕೊಳ್ಳುವುದಿಲ್ಲ, ಯಾರಾರಿಗೊ ಸ್ಥಾನ ಮಾನ ನೀಡಿ ಅಹ೯ತೆ ಇರುವ ಇವರನ್ನ ಕಡೆಗಾಣಿಸಿದೆ.
ನನ್ನ ಜಿಲ್ಲಾ ಪಂಚಾಯತ ಸದಸ್ಯ ಅವದಿಯಲ್ಲಿ ನಾನು ಇವರಿಂದ ಅನೇಕ ಸಲಹೆ ಸಹಕಾರ ಪಡೆದಿದ್ದೆ, ಆಗೆಲ್ಲ ರಾಜಕಾರಣಿಗಳ ದಂಡು ಅಲ್ಲಿ ಸೇರುತ್ತಿತ್ತು, ಸಹಾಯ ಕೇಳಿ ಬರುವವರೂ ಕೂಡ ಎಲ್ಲರಿಗೂ ಅಲ್ಲಿ ಗೌರವದ ಸ್ಥಾನ ಮತ್ತು ಸಮಸ್ಯೆಗೆ ಪರಿಹಾರ ಅಲ್ಲಿತ್ತು.
ನಿನ್ನೆ ಮಾತಾಡಿದಾಗ ಅವರು ದೀಘ೯ಕಾಲದ ತಮ್ಮ ಪಕ್ಷ ಕಾಂಗ್ರೇಸ್ ತೊರೆಯುವ ಮಾತಾಡಿದರು, ಏನೇ ಆಗಲಿ ನಿರಂಜನರ ರಾಜಕೀಯ ಜೀವನದಲ್ಲಿ ಯಶಸ್ಸು ಪಡೆಯಲಿ ಎಂದು ಹಾರೈಸುತ್ತೇನೆ.
Comments
Post a Comment