Blog number 1354. ಲೋಹದ ವಸ್ತು ಮತ್ತು ಪಾತ್ರೆಗಳ ಮೇಲೆ ಅಕ್ಷರ ಕೊರೆಯುವ ಎನ್ ಗ್ರೇವರ್ ಆ ಕಾಲದಲ್ಲಿ ಒಂದು ವಿಸ್ಮಯ ಯಂತ್ರವಾಗಿತ್ತು.
https://youtu.be/Dekt3ylz9Zo
#ಬುದ್ದಿ_ಬಂದ_50_ ವರ್ಷದ_ನಂತರ_ಈಡೇರಿತು
#ಪಾತ್ರೆ_ಅಂಗಡಿಯಲ್ಲಿ_ಪಾತ್ರೆಗೆ_ಹೆಸರು_ಬರೆಯುವ_ ಎನ್ ಗ್ರೇವರ್
#ಇದೊಂದು_ವಿಸ್ಮಯ_ಪೆನ್_ಅನ್ನಿಸಿತ್ತು.
ನಾವೆಲ್ಲ 1970 ರಲ್ಲಿ ಒಂದನೇ ಕ್ಲಾಸಿಗೆ ಸೇರುವಾಗ ನಿದಾನವಾಗಿ ಸ್ಟೀಲ್ ಪಾತ್ರೆಗಳು ಪ್ರಾರಂಭ ಆಗಿತ್ತು, ಆಗ ಈಗಿನಂತೆ ತರಹೇವಾರಿ ಮೌಲ್ಡ್ ಇರಲಿಲ್ಲ ಒಂದೇ ರೀತಿಯ ಡಿಸೈನ್ ನ ತಟ್ಟೆ-ಲೋಟ - ತಂಬಿಗೆ ನಂತರ ಅಡಿಗೆ ಪಾತ್ರೆಗಳು ಬಂದರೂ ಗ್ರಾಮೀಣ ಪ್ರದೇಶದಲ್ಲಿ ಅದರ ಬಳಕೆ ಕಡಿಮೆ ಕಾರಣ ಸೌದೆ ಒಲೆಯ ಮೇಲೆ ಸ್ಟೀಲ್ ಪಾತ್ರೆ ಇಟ್ಟರೆ ಅದರ ಬುಡ ಸುಟ್ಟು ಕಪ್ಪಗಾಗುವುದು ಆಗಿನ ಕಾಲದ ಗೃಹಿಣಿಯರಿಗೆ ಇಷ್ಟವಿಲ್ಲದ ವಿಚಾರ ಆಗಿತ್ತು.
ಇದರ ಮದ್ಯದಲ್ಲಿ ಕಬ್ಬಿಣದ ಪಾತ್ರೆಗಳಿಗೆ ಸ್ಟೀಲ್ ಗಿಲೀಟು ಹಾಕಿ ಹಳ್ಳಿಗಳಲ್ಲಿ ರಾತ್ರೋ ರಾತ್ರಿ ಮಾರಾಟ ಮಾಡಿ ಮೋಸ ಮಾಡುವ ವ್ಯಾಪಾರಿಗಳೂ ಬರುತ್ತಿದ್ದರು.
ಕಂಚು - ಹಿತ್ತಾಳೆ ಪಾತ್ರ ಬಳಸುತ್ತ ಇದ್ದವರು ತಕ್ಷಣ ಅಲ್ಯೂಮಿನಿಯಂ ಅಥವ ಸ್ಟೀಲ್ ಪಾತ್ರೆಗೆ ಬದಲಾಗುತ್ತಿರಲಿಲ್ಲ ಆದರೆ ಆ ಕಾಲದ ಗೃಹಿಣಿಯರಿಗೆ ಅಡಿಗೆ ಮನೆಯಲ್ಲಿ ಸ್ಟೀಲ್ ಪಾತ್ರೆಗೆ ಬದಲಾಗಿ ಆಧುನಿಕ ನಾರಿ ಎಂಬ ಹೆಸರು ಗಳಿಸುವ ತವಕ ಇರುತ್ತಿತ್ತು.
ಆಗೆಲ್ಲ ಸಾಗರದಲ್ಲಿ ಒಂದೆರೆಡು ಸ್ಟೀಲ್ ಪಾತ್ರೆ ಅಂಗಡಿ ಮಾತ್ರ ಇತ್ತು ಅವುಗಳಿಗೆ ಬಿಡುವಿಲ್ಲದ ವ್ಯಾಪಾರ, ಶುಭ ಸಮಾರಂಭಕ್ಕೆ ಸ್ಟೀಲ್ ಪಾತ್ರೆ ಉಡುಗೊರೆ ಕೊಡುವ ಪೈಪೋಟಿಯೂ ಇರುತ್ತಿತ್ತು.
ಅಂತಾ ಸಂದರ್ಭಗಳಲ್ಲಿ ತುಂಬಾ ಚಿಕ್ಕವರಾದ ನನಗೆ ನಮ್ಮ ತಾಯಿ ಜೊತೆ ಸ್ಟೀಲ್ ಪಾತ್ರೆ ಅಂಗಡಿಗೆ ಹೋದಾಗ ಅಲ್ಲಿ ಕರ್ಕಷ ಶಬ್ದದಲ್ಲಿ ಪಾತ್ರೆ ಮೇಲೆ ಹೆಸರು ಕೊರಯುವ ಅಂಗಡಿಯಾತ ಮತ್ರು ಅವರ ಕೈಯಲ್ಲಿನ ಪೆನ್ನಿನಂತ ಯಂತ್ರ ಮಾತ್ರ ವಿಪರೀತ ಆಕರ್ಷಣೆ, ದೊಡ್ಡವನಾದಾಗ ಅಂತಹದ್ದೊಂದು ಖರೀದಿಸಬೇಕೆಂಬ ಉತ್ಕಟ ಆಸೆಯೂ ಇತ್ತು.
ಕೆಲ ಸಂದರ್ಭದಲ್ಲಿ ಅಂತಹ ಪಾತ್ರೆ ಅಂಗಡಿಯಲ್ಲಿ ಎನ್ ಗ್ರೇವರ್ ಎಂಬ ಈ ಯಂತ್ರ ಮಕ್ಕಳು ಮುಟ್ಟಲು ಅಂಗಡಿಯವರು ಬಿಡುತ್ತಿರಲಿಲ್ಲ, ಅತಿ ಉದ್ದದ ಹೆಸರು ಬರೆಯಲೂ ಕಡಾಖಂಡಿತವಾಗಿ ನಿರಾಕರಿಸುತ್ತಿದ್ದರು, ಇದರಿಂದ ನಮಗೆಲ್ಲ ಅನ್ನಿಸಿದ್ದು ಈ ಯಂತ್ರ ಬಾರೀ ದುಭಾರಿ ಸುಲಭಕ್ಕೆ ಸಿಗದದ್ದು ಅಂತ ' ಅಷ್ಟೆ ಅಲ್ಲ ನಮ್ಮ ಪ್ರಾಥಮಿಕ ಶಾಲಾ ಗೆಳೆಯ ಸಂತೋಷ ಹೇಳಿದ್ದು ಈ ಯಂತ್ರದಲ್ಲಿ ಬೆಲೆ ಬಾಳುವ ವಜ್ರ ಇದೆ ಎನ್ನುವ ಸುದ್ಧಿಯಿಂದ ಅಂಗಡಿಯವ ಈ ರೀತಿ ಈ ಎನ್ ಗ್ರೇವರ್ ಕಾಪಾಡಿಕೊಳ್ಳುವುದು ಸರಿ ಅನ್ನೋ ಭಾವನೆ ನನ್ನಲ್ಲಿ ಉಂಟಾಗಿತ್ತು.
ಬುದ್ಧಿ ಬಂದು ಕಲ್ಯಾಣ ಮಂಟಪ, ರೆಸ್ಟೋರಾಂಟ್ ಪ್ರಾರಂಬಿಸಿದ ಮೇಲೂ ಶಿವಮೊಗ್ಗದ ಪ್ರತಿಷ್ಟಿತ #ಶ್ಯಾ೦_ಟ್ರೇಡರ್ಸ್ ಗೆ ಹೋದಾಗೆಲ್ಲ ಈ ಪಾತ್ರೆ ಮೇಲೆ ಹೆಸರು ಬರಿಯುವ ಯಂತ್ರದ ಶಬ್ದಕ್ಕೆ ಕಣ್ಣು ಆ ಕಡೆ ಹೋಗುತ್ತಿತ್ತು ಈ ವಯಸ್ಸಲ್ಲೂ ಆ ಯಂತ್ರ ಮುಟ್ಟಬೇಕು, ಯಾವುದಾದರೂ ಪಾತ್ರೆ ಮೇಲೆ ಹೆಸರು ಬರೆಯಬೇಕು ಅ೦ತ ಮನಸ್ಸು ಚಡಪಡಿಸುತ್ತಿದ್ದದ್ದು ಸುಳ್ಳಲ್ಲ.
ಇವತ್ತು ನಮ್ಮ #ಶ್ರೀಕೃಷ್ಣ_ಸರಸ_ಕನ್ವೆನ್ಷನ್_ಹಾಲ್ ನಲ್ಲಿ ಸುಮಾರು 500 ಊಟದ ಪ್ಲೇಟ್ ಖರೀದಿಸಿದ್ದೆವು ಇವುಗಳ ಮೇಲೆ ಹೆಸರು ಕೊರೆದು ಕೊಡಲು ಹೋಲ್ ಸೇಲ್ ಪಾತ್ರೆ ಅಂಗಡಿ ಅವರು ನಿರಾಕರಿಸಿದರು ಮತ್ತು ರೂ 650 ರೂಪಾಯಿಗೆ ಎನ್ ಗ್ರೇವರ್ ಸಿಗುತ್ತೆ ನೀವೇ ಬರೆದುಕೊಳ್ಳಿ ಅಂತ ಪ್ಲೇಟ್ ಜೊತೆಗೆ ಕಳಿಸಿದ್ದರು.
ಇವತ್ತು ಈ ಪ್ಲೇಟ್ ಗಳಿಗೆ ಹೆಸರು ಕೊರೆಯುವ ಮುಖಾಂತರ ಸುಮಾರು 50 ವರ್ಷದ ದೀರ್ಘ ಕಾಲದ ಬಾಲ್ಯದ ಆಸೆ ನೆರವೇರಿಸಿಕೊಂಡೆ.
Comments
Post a Comment