(ಕೆ.ಅರುಣ್ ಪ್ರಸಾದ್)
(25-ಮಾಚ್೯ - 2020 ರಿಂದ 30 - ಮಾಚ್೯ - 2020)
#ಕರೋನಾವೈರಸ್ #ಭಯದಿOದಮನೋವಿಕಾರ
ಲಾಕ್ ಡೌನ್ 5 ದಿನ ಮುಗಿದು ಈಗ 6ನೇ ದಿನ ಪ್ರಾರಂಭ ಆಗುತ್ತಿದೆ, ಜನ ಸಂಚಾರ 90% ಕಡಿಮೆ ಆಗಿದೆ ಮುಂದೇನು ಅನ್ನುವ ಚಿಂತೆಯ ಮದ್ಯ ಕ್ರಮೇಣ ನಮಗೆ ನಮ್ಮ ದೇಹದಲ್ಲೇ ನೋವು ಬಂದ ಹಾಗಾಗಿ ಜ್ವರ ಬಂತಾ ಅಂತ ಗಾಭರಿ, ಮನೇಲಿ ಯಾರಾದರೂ ಕೆಮ್ಮಿದರೆ ಶೀನಿದರೆ ಭಯ ಇದೆಲ್ಲ ಪ್ರಾರಂಭ ಆಗಲಿದೆ.
ಇದಕ್ಕೆಲ್ಲ ಕಾರಣ ಕರೋನಾ ವೈರಸ್ ಭಯ (phobia) ಇದನ್ನ ನಿವಾರಿಸಲು ಸರಿಯಾದ ಆಪ್ತ ಸಲಹೆ (counseling) ಅವಶ್ಯವಿದೆ.
ಈ ವೈರಸ್ ತನಗೆ ಬಂದಾಗಿದೆ ಅಂತ ಬುದ್ದಿ ಬ್ರಮಣೆ ಆದದ್ದು ಮತ್ತೊಬ್ಬರು ಆತ್ಮಹತ್ಯಮಾಡಿಕೊಂಡಿದ್ದು ಇದೇ ಬ್ರಮಣೆಯಿಂದ.
ಅದಕ್ಕಾಗಿ ಸದ್ಯದ ದೇಶದ ಪರಿಸ್ಥಿತಿಯಲ್ಲಿ ನಮಗೆ ನಾವೇ ಆಪ್ತ ಸಲಹೆ ಹಂಚಿಕೊ೦ಡು ಹೆಚ್ಚು ಜನರಿಗೆ ಜಾಗೃತಿ ಮಾಡಬೇಕಾದ ಅನಿವಾಯ೯ತೆ ಇದೆ.
1. ಒಣ ಕೆಮ್ಮು+ ಶೀನುವುದು= ಎರ್ ಪೊಲುಶನ್ನಿ೦ದ.
2. ಕೆಮ್ಮು+ಕಫ+ ಶೀನುವುದು+ ಮೂಗಿನಲ್ಲಿ ಸತತ ನೀರು ಬರುವುದು=ಸಾಮಾನ್ಯ ನೆಗಡಿಯಿ೦ದ.
3. ಕೆಮ್ಮು+ಕಫ+ ಶೀನು+ ನೀರಿಳಿಯುವ ಮೂಗು+ ದೇಹದಲ್ಲಿ ನೋವು+ನಿಶಕ್ತಿ+ ಸಣ್ಣ ಜ್ವರ= ಪ್ಲೂ ನಿಂದ.
4. ಒಣ ಕೆಮ್ಮು+ ಶೀನು+ ದೇಹದಲ್ಲಿ ನೋವು+ನಿಶಕ್ತಿ+ವಿಪರೀತ ಜ್ವರ+ ಉಸಿರಾಟದ ಕಷ್ಟ= ಕೊರಾನ ವೈರಸ್ ಪರೀಕ್ಷೆ ತಕ್ಷಣ ಮಾಡಿಸುವುದು.
ವಿಶೇಷವಾಗಿ ಗಮನಿಸಿ: ನಮ್ಮ ದೇಹದಲ್ಲಿ ರೋಗ ನಿರೋದಕ ಶಕ್ತಿ ಮತ್ತು ತಕ್ಷಣ ಪರೀಕ್ಷೆ ಮಾಡಿ ಚಿಕಿತ್ಸೆಯಿ೦ದ ಇದು ನಿಯ೦ತ್ರಣಕ್ಕೆ ಬರುತ್ತದೆ.
ಮಾನಸಿಕ ಭ್ರಮೆಯಿ೦ದ ಈ ವೈರಸ್ ಸೋ೦ಕು ಇಲ್ಲದಿದ್ದರೂ ಭಯಪಡುವವರಿಗೆ ಈ ಆಪ್ತ ಸಲಹೆ ಹೆಚ್ಚು ಶೇರ್ ಮಾಡಿ.
Comments
Post a Comment