(ಕೆ.ಅರುಣ್ ಪ್ರಸಾದ್)
(25-ಮಾಚ್೯ - 2020 ರಿಂದ 31 - ಮಾಚ್೯ - 2020
#ಮದ್ಯ ಪಾನ ಮಾರಾಟ ರದ್ದು ಸರಿಯೇ#
ಇವತ್ತಿಗೆ ಅಂದರೆ 31 ಮಾಚ್ 2020 ರ ಮಧ್ಯರಾತ್ರಿ ತನಕ ಇದ್ದ ಮದ್ಯ ಮಾರಾಟ ನಿಷೇದ ನಾಳೆ ಅಂದರೆ ಏಪ್ರಿಲ್ 1 ರಿಂದ ತೆರವು ಆಗಲಿದೆ ಎಲ್ಲಾ ಸಕಾ೯ರಗಳು ನಿಯಮಿತ ಸಮಯದಲ್ಲಿ ಮಧ್ಯಮಾರಾಟ ಮಾಡಲಿದೆ ಎಂಬ ಆಶಾಭಾವನೆ ಮದ್ಯಪಾನಿಗಳಲ್ಲಿ ಇತ್ತು.
ಇದಕ್ಕೆ ಪೂರಕವಾಗಿ ಕುಡುಕರು ಕೇರಳದಲ್ಲಿ ಆತ್ಮಹತ್ಯ ಮಾಡಿಕೊಂಡಿದ್ದು, ಖ್ಯಾತ ಚಿತ್ರ ನಟರು ರಾಜಕಾರಣಿಗಳು ಮನೋವೈದ್ಯರು ಮದ್ಯಪಾನ ಸಂಪೂಣ೯ ನಿಲ್ಲಿಸುವುದರಿಂದ ಅನೇಕರ ಆರೋಗ್ಯ ಮಾರಕವಾಗಲಿದೆ ಎಂದು ಎಚ್ಚರಿಸಿದ್ದರು.
ಆದರೆ ಏಪ್ರಿಲ್ 14 ರ ವರೆಗೆ ಮದ್ಯ ಮಾರಾಟ ನಿಷೇದ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿದೆ.
ಕೇರಳ ಮತ್ತು ಪಂಜಾಬ್ ರಾಜ್ಯದಲ್ಲಿ ಅವಶ್ಯಕ (Essential) ಆಹಾರ ಪಟ್ಟಿಯಲ್ಲಿ ಮಧ್ಯ ಸ್ಥಾನ ಪಡೆದಿದೆ.
ಇಡೀ ದೇಶದಲ್ಲಿ 2019 ರಲ್ಲಿ ಅಬಕಾರಿ ಆಧಾಯ 90 ಸಾವಿರ ಕೋಟಿ ಅಂದರೆ ಇದರ ವ್ಯವಹಾರದ ವಿಸ್ತಾರ 100 ಲಕ್ಷ ಕೋಟಿಗೂ ಹೆಚ್ಚು ಇದರಿ೦ದ ಸೃಷ್ಟಿ ಆಗುವ ನೇರ ಮತ್ತು ಪರೋಕ್ಷ ಉದ್ಯೋಗ ಇನ್ನೆಷ್ಟು ಯೋಚಿಸಿ.
ಜನತಾ ಕಪ್ಯೂ೯ ಅಂದಾಗಲೆ ಪಂಜಾಬ್ ಮತ್ತು ಉತ್ತರ ಭಾರತೀಯ ರಾಜ್ಯದಲ್ಲಿ ಪ್ರತಿ ಕುಟು೦ಬಗಳು ಒಂದು ತಿಂಗಳಿಗೆ ಬೇಕಾದ ಮಧ್ಯ ದಿನಸಿಯ ಜೊತೆಯಲ್ಲೆ ಶೇಖರಣೆ ಮಾಡಿ ಕೊಂಡಿದೆ.
ಆದರೆ ದಕ್ಷಿಣದ ರಾಜ್ಯಗಳು ಮಾತ್ರ ಪ್ರದಾನ ಮಂತ್ರಿಗಳು ಮಾಚ೯ 24 ರ ರಾತ್ರಿ 8ಕ್ಕೆ 21 ದಿನದ ಲಾಕ್ ಡೌನ್ ಆದೇಶಿಸಿದ ನಂತರ ಅವಶ್ಯ ಮಧ್ಯ ಶೇಖರಣೆಗೆ ಕಾಲಾವಕಾಶ ಸಿಗಲಿಲ್ಲ.
ಗ್ರಾಮೀಣ ಪ್ರದೇಶದಲ್ಲಿ ಈಗಾಗಲೆ ದಿನಸಿ ಅಂಗಡಿಗಳಲ್ಲಿ ಮಾರಾಟ ಮಾಡುವ ಮದ್ಯ ದುಬಾರಿ ಬೆಲೆಯಲ್ಲಿ ಮಾರಾಟಕ್ಕೆ ದೊರಕುತ್ತಿತ್ತು ಈಗ 7 ದಿನದಲ್ಲಿ ಅದೂ ಖಾಲಿ... ಈಗ ಕಳ್ಳಭಟ್ಟಿ ಮದ್ಯದ ಮಾರಾಟ ಪ್ರಾರಂಭವಾದರೂ ಆಶ್ಚಯ೯ ಇಲ್ಲ.
ಇದರಿಂದ ಅಲ್ಲಲ್ಲಿ ದುರಂತ ನಡೆಯುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಗುಜರಾತ್ ಬಿಹಾರ್ ಮಿಜೋರಾಂ ನಾಗಲ್ಯಾಂಡ್ ಲಕ್ಷದ್ವೀಪದಲ್ಲಿ ಈಗಾಗಲೇ ಮದ್ಯಪಾನ ನಿಶೇದ ಜಾರಿ ಇದೆ.
ಒಂದು ಸಮೀಕ್ಷೆ ಪ್ರಕಾರ 16 ಕೋಟಿ ಬಾರತೀಯರು ನಿತ್ಯ ಮದ್ಯಪಾನ ಮಾಡುತ್ತಾರೆ 21 ದಿನ ಸಂಪೂಣ೯ ಲಾಕ್ ಡೌನ್ ನಲ್ಲಿ ತಾತ್ಕಾಲಿಕ ಮಧ್ಯ ಪಾನ ನಿಷೇದದಿಂದ ಇವರ ಮೇಲಿನ ಪರಿಣಾಮ ಏನು? ಎಂದು ತಿಳಿಯಬೇಕಾಗಿದೆ.
Comments
Post a Comment