#ಕೊರಾನಾ_ಲಾಕ್_ಡೌನ್_ಡೈರಿ_2020 #ಲೆಟರ್_ನOಬರ್_22 #ದಿನಾ0ಕ_25_ಏಪ್ರಿಲ್_2020 #ಮದುವೆ_ಸ್ವಗ೯ದಲ್ಲಿ_ನಿದಾ೯ರವಾದರೂ_ಕೊರಾನಾ_ವೈರಸ್_ಭೂಮಿ_ಮೇಲೆ_ಬಿಡುತ್ತಿಲ್ಲ!? ನಮ್ಮ ನಿಮ್ಮ ಸುತ್ತಲಲ್ಲಿ ಏಪ್ರಿಲ್ - ಮೇ ತಿಂಗಳಲ್ಲಿ ಪುರುಸೊತ್ತೆ ಇಲ್ಲದಂತೆ ಮದುವೆಗಳು ನಡೆಯುತ್ತಿದ್ದವು, ಮದುವೆಯ ಮನೆಯವರಿಗೆ,ಬಂಗಾರದ ಮಳಿಗೆಗೆ , ಪುರೋಹಿತರಿಗೆ, ಬಾಸಿಂಗ ಮಾಡುವವರಿಗೆ, ಮಂಗಳವಾದ್ಯದವರಿಗೆ, ಬಳೆ ಇಡುವವರಿಗೆ, ಶಾಮಿಯಾನದವರಿಗೆ, ಡೆಕೋರೇಷನ್ ರವರಿಗೆ, ಬ್ಯೂಟಿ ಪಾಲ೯ರ್ ನವರಿಗೆ, ಅಡುಗೆಯವರಿಗೆ, ಹೂವಿನ ವ್ಯಾಪಾರಿಗಳಿಗೆ, ಬಡಿಸುವವರಿಗೆ, ದಿನಸಿ ಮಾರಾಟಗಾರರಿಗೆ, ತರಕಾರಿ ಮಂಡಿಯವರಿಗೆ, ಪೋಟೋ ಗ್ರಾಪರ್ ಗೆ, ಪ್ರಿOಟಿOಗ್ ಪ್ರೆಸ್, ಕಲ್ಯಾಣ ಮ೦ಟಪದವರಿಗೆ, ಲಾಡ್ಜಗಳಿಗೆ, ಟ್ಯಾಕ್ಸಿಗಳಿಗೆ, ಮದರಂಗಿ ಬಿಡಿಸುವವರಿಗೆ, ಚಪ್ಪರ ಹಾಕುವವರಿಗೆ, ಚಪ್ಪಲಿ ಅಂಗಡಿಯವರಿಗೆ, ರೈಲು, ಬಸ್, ವಿಮಾನಗಳಿಗೆ ಮತ್ತು ಪೆಟ್ರೋಲ್ ಪoಪ್ ಹೀಗೆ ಎಲ್ಲರಿಗೂ ಕೈತುಂಬಾ ಕೆಲಸ ಕಾಸು ಇರುತ್ತಿದ್ದ ತಿಂಗಳು ಈ ವಷ೯ ಸಂಪೂಣ೯ ಸ್ಥಬ್ದ ಆಗಿದೆ. ಏಪ್ರಿಲ್ - ಮೆ ತಿಂಗಳಲ್ಲಿ ಪರೀಕ್ಷೆಗಳು ಮುಗಿದು ಶಾಲೆಗಳಿಗೆ ರಜೆ, ವಿವಾಹಕ್ಕೆ ಅನುಕೂಲ ಮಹೂತ೯ಗಳು, ಕೃಷಿ ಕೆಲಸಗಳಿಗೂ ವಿರಾಮ, ಪ್ರಶಸ್ತವಾದ ಹವಾಮಾನಗಳು ಈ ಎರೆಡು ತಿಂಗಳಲ್ಲಿ ಹೆಚ್ಚಿನ ಮದುವೆಗೆ ಕಾರಣ. ಈ ಎರೆಡು ತಿಂಗಳಲ್ಲಿ ಮದುವೆ ಆಗುವವರೆಲ್ಲ ಡಿಸೆಂಬ...