Skip to main content

Posts

Showing posts with the label Old ricemill industries not in running

ಕೆಲವು ದಶಕ ಅಕ್ಕಿ ಗಿರಣಿಗಳು ಉತ್ತುಂಗದಲ್ಲಿ ಏರಿ ಈಗ ಸಂಪೂರ್ಣ ನೆಲಕಚ್ಚಿದೆ, ಭತ್ತ ಬೆಳೆಯುವ ಪ್ರದೇಶವೂ ಕಡಿಮೆಆಗಿದೆ, ಜನ ಸಾಮಾನ್ಯರ -ರೈತರ ಅಕ್ಕಿ ಪೂರೈಕೆಗೆ ಹೊಸ ವಿಧಾನಗಳು ಬಂದಿದೆ.

#ಒಂದು_ಕಾಲದ_ರೈತರ_ರೈಸ್_ಮಿಲ್_ಜಮಾನದ_ನೆನಪಾಯಿತು. #ನಮ್ಮದು_ಈ_ಉದ್ಯಮದಲ್ಲಿ_ಮೂರು_ತಲೆಮಾರಿನ_ಅನುಭವ. #ತೌಡು_ತಿನ್ನಿಸಲು_ಪಶುಗಳಿಲ್ಲ_ನುಚ್ಚು_ತಿನ್ನಿಸಲು_ಕೋಳಿ_ಸಾಕುತ್ತಿಲ್ಲ. #ಕೃಷಿ_ಕಾರ್ಮಿಕರಿಗೆ_ನಿತ್ಯ_ಒಂದು_ಸೇರು_ಅಕ್ಕಿ_ನೀಡುವ_ಕಾಲ_ಕಣ್ಮರೆ. #ಭತ್ತ_ಬೆಳೆಯುವವರೂ_ಕಡಿಮೆ_ಅಕ್ಕಿ_ಗಿರಣಿಗಳೂ_ಈಗಿಲ್ಲ ಆಗೆಲ್ಲ ರೈಸ್ ಮಿಲ್ ಮಾಡುವುದು ಸುಲಭವಲ್ಲ 10 ಕಿ ಮಿ ವ್ಯಾಪ್ತಿಯಲ್ಲಿ ಒಂದು ರೈಸ್ ಮಿಲ್ ಇದ್ದರೆ ಇನ್ನೊ೦ದು ಕೊಡುವ ಹಾಗಿರಲಿಲ್ಲ, ನಿರ್ದಿಷ್ಟ ಎಕರೆ ಪ್ರದೇಶಕ್ಕೆ ಮಾತ್ರ ಮತ್ತು ಸ್ಥಳಿಯ APMC ನಿರಾಕ್ಷೇಪಣ ಪತ್ರ APMC ಅದರ ಸಭೆಯಲ್ಲಿ ತೀಮಾ೯ನಿಸಿ ನೀಡಿದ ನಂತರ ತಹಸೀಲ್ದಾರ್, ಎಸಿಯವರಿಂದ ಕಡತ ಜಿಲ್ಲಾಧಿಕಾರಿಗೆ ಅಲ್ಲಿ ಅವರು ಶಿಪಾರಸ್ಸು ಮಾಡಿ ಬೆಂಗಳೂರಿಗೆ ಕಳಿಸಿ ಅಲ್ಲಿ ಸಂಬಂದ ಪಟ್ಟ ಆಹಾರ ಇಲಾಖೆ ಲೈಸೆನ್ಸ್ ನೀಡುತ್ತಿತ್ತು. ಆಗ ಈ ಪರಿ ಲಂಚ ಇರಲಿಲ್ಲ, ಕಾನೂನು ಪಾಲಿಸುತ್ತಿದ್ದರು, ಈಗ ಈ ರೀತಿ ಲೈಸೆನ್ಸ್ ಬೇಕಾಗಿಲ್ಲ, ಯಾರೂ ಅಕ್ಕಿ ಗಿರಣಿ ಪ್ರಾರಂಬಿಸಬಹುದು.   1910 ರಲ್ಲಿ ನಮ್ಮ ಅಜ್ಜಿ ಜನರನ್ನು ಇಟ್ಟುಕೊಂಡು ಒನಕೆಯಲ್ಲಿ ಭತ್ತ ಕುಟ್ಟಿಸಿ, ಕೇರಿಸಿ, ಸಾಣಿಸಿ ಸ್ಥಳಿಯರಿಗೆ ಅಕ್ಕಿ ಮಾಡಿಕೊಡುತ್ತಿದ್ದರಂತೆ, ನಮ್ಮ ತಂದೆ ಮಹಾರಾಷ್ಟ್ರದ ಥಾನ ಜಿಲ್ಲೆಯಿಂದ ಮಿನಿ ಅಕ್ಕಿ ಗಿರಣಿ ( ಶೆಲ್ಲರ್ & ಪಾಲಿಶರ್ ) ತರಿಸಿದ್ದರು ನಂತರ ಇದಕ್ಕೆ ನಮ್ಮ ತಂದೆ ಗೆಳೆಯರಾದ ರೈಸ್ ಮಿಲ್ ಮೆಕಾನಿಕ್ ಹಮೀದ್ ಸಾಬರು (ನಂತರ...