ಫೈರ್_ಪ್ರೂಪ್_ವಸ್ತುಗಳಿಂದ_ಮಾತ್ರ_ಇಂಟಿರಿಯರ್_ಡೆಕೋರೇಷನ್_ಮಾಡಿಸಿ. ನೀವು ಯಾವುದೇ ಹೋಟೆಲ್ - ರೆಸ್ಟೋರೆಂಟ್ ಅಥವ ಮನೆ ಪ್ರವೇಶಿಸುವ ಮುನ್ನ ಅಲ್ಲಿನ ಇಂಟೀರಿಯರ್ ಗಮನಿಸಿ ಅದು ಅಗ್ನಿ ನಿರೋಧಕ ಆಗಿಲ್ಲದಿದ್ದರೆ ಪ್ರವೇಶ ಮಾಡಲೇ ಬೇಡಿ. ಹೋಟಲ್ ರೆಸ್ಟೋರೆಂಟ್ ತೆರೆಯುವ ಉದ್ಯಮಿಗಳಲ್ಲಿ ನನ್ನ ವಿನಂತಿ ದಯಮಾಡಿ ಅಗ್ನಿ ಸುರಕ್ಷತೆ ಇಲ್ಲದ ಒಳಾಂಗಣ ವಿನ್ಯಾಸ ಮಾಡಿಸಲೇ ಬೇಡಿ. ಹೋಟೆಲ್ - ರೆಸ್ಟೋರೆಂಟ್ - ಮಾಲ್ ಅಥವ ಮನೆಗಳಲ್ಲಿ ಅದರ ಮಾಲಿಕರುಗಳೇ ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಇಂತಹ ದುರಂತಗಳು ಸಂಭವಿಸಿದಂತೆ ನೋಡಿಕೊಳ್ಳಬೇಕು. ಆದರೆ ಒಳಾಂಗಣ ವಿನ್ಯಾಸಗಾರರು ಮತ್ತು ಪಾಲ್ ಸೀಲಿಂಗ್ ಮಾಡಿಸುವ ಹೆಚ್ಚಿನ ಜನರು ಈ ಬಗ್ಗೆ ಜಾಗ್ರತೆ ವಹಿಸುವುದಿಲ್ಲ. ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಮನೆ ಕಟ್ಟುತ್ತಾರೆ ಆದರೆ ಅಗ್ನಿ ನಿರೋಧಕ ಅಲ್ಲದ ವಸ್ತುವಿನಿಂದ ಒಳಾಂಗಣ ವಿನ್ಯಾಸ ಮತ್ತು ಪಾಲ್ ಸೀಲಿಂಗ್ ಗಳನ್ನ ಮಾಡಿಸುತ್ತಾರೆ. ಕಳೆದೆ ವರ್ಷ ಉಡುಪಿಯ ಬಾರ್ ಮಾಲಿಕ ದಂಪತಿಗಳು ಇಂತಹ ಅಗ್ನಿ ದುರಂತದಲ್ಲಿ ಬಲಿ ಆಗಿದ್ದರು. ನಿನ್ನೆ 2026ರ ಜೂನ್ 15ರ ಸೋಮವಾರ ಸಂಜೆ #ಮೈಸೂರಿನ ದಟ್ಟಗಳ್ಳಿ ರಿಂಗ್ ರಸ್ತೆ (ನಟರಾಜ್ ಸರ್ಕಲ್ ಬಳಿ) ಇರುವ 'ಫಾಕ್ಸ್ ಡೆನ್ ಲಿಕ್ಕರ್ ಗ್ಯಾರೇಜ್' #ರೆಸ್ಟೋ_ಪಬ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಇಬ್ಬರು ದುರ್ಮರಣ...