Blog number 1934. ಅರಸೀಕೆರೆ ಕಸ್ತೂರ್ಬಾ ಗಾಂಧಿ ರಾಷ್ಟ್ರೀಯ ಮೆಮೋರಿಯಲ್ ಟ್ರಸ್ಟ್ ನಿಂದ ವಿಧಾಯ ಘೋಷಿಸಿದ 75 ರ ವಯೋಮಾನದ ನಾರಾಯಣ ರಾವ್ ಶರ್ಮಾರ ಸಾರ್ಥಕ ಸೇವೆ ಶ್ಲಾಘನೀಯ ಮತ್ತು ಸ್ಮರಣೀಯ.
#ಅರಸಿಕರೆ_ಕಸ್ತೂರಬಾ_ಆಶ್ರಮದ_ನಾರಾಯಣ_ರಾವ್_ಶರ್ಮ #ದಿನಾಂಕ_14_ಫೆಬ್ರುವರಿ_2024ಕ್ಕೆ_75_ವಷ೯ #ಎಲ್ಲಾ_ಜವಾಬ್ದಾರಿಗಳಿಂದ_ನಿವೃತ್ತಿ_ಘೋಷಿಸಿದ್ದಾರೆ #ಸ್ವಾತಂತ್ರ್ಯ_ಹೋರಾಟಗಾರ_ದಂಪತಿಗಳು_ಮಂತ್ರಿಗಳೂ_ಆಗಿದ್ದ_ಹೆಚ್_ದಾಸಪ್ಪ_ಮತ್ತು_ಯಶೋಧರಮ್ಮ #ಸ್ಥಾಪಿಸಿದ_ಅರಸಿಕೆರೆಯ_ಕಸ್ತೂರಬಾ_ರಾಷ್ಟ್ರೀಯ_ಸ್ಮಾರಕ_ಟ್ರಸ್ಟ್ #ಇಲ್ಲಿ_ಮಹಾತ್ಮಾ_ಗಾಂಧಿ_ಚಿತಾಭಸ್ಮ_ತಂದು_ಗಾಂಧೀಜಿ_ಸಮಾದಿ_ನಿರ್ಮಿಸಿದ್ದಾರೆ. ಇವತ್ತು ಅರಸಿಕೆರೆಯ ಕಸ್ತೂರಬಾ ರಾಷ್ಟ್ರೀಯ ಟ್ರಸ್ಟಿನ ಕಾರ್ಯಕಾರಿ ಸಮಿತಿ ಸದಸ್ಯತ್ವಕ್ಕೆ, ಇಲ್ಲಿನ ಭಾರತೀಯ ಗೋ ಪರಿವಾರ ಚಾರಿಟಬಲ್ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಸ್ಥಾನಕ್ಕೆ ನಾಳೆ ರಾಜಿನಾಮೆ ಸಲ್ಲಿಸಲಿದ್ದೇನೆ ಎಂದು ನಾರಾಯಣ ರಾವ್ ಶರ್ಮಾ ಘೋಷಿಸಿದ್ದಾರೆ. ಇವರ 75ನೇ ಹುಟ್ಟು ಹಬ್ಬ ಇದೇ ಬರುವ ಫೆಬ್ರುವರಿ 14 ಕ್ಕೆ ಇದೆ ಆದರೆ ಅವರು ಅದನ್ನು ಆಚರಿಸುವುದಿಲ್ಲ ಅವರೇ ಬರೆದು ಕೊಂಡಂತೆ ಅವರಿಗೆ 20 ವರ್ಷದ ಪ್ರಾಯ ತಲುಪುವ ತನಕ ಹುಟ್ಟು ಹಬ್ಬದ ಆಚರಣೆ ರಾಷ್ಟ್ರೀಯ ನಾಯಕರು ಮಾತ್ರ ಆಚರಿಸುವುದು ಎಂದು ಬಾವಿಸಿದವರು. ಪೇಸ್ ಬುಕ್ ಗೆಳೆಯರಾಗಿರುವ ಇವರ ಎಲ್ಲಾ ಕಾರ್ಯಚಟುವಟಿಕೆ ಗಮನ ಸೆಳೆಯುತ್ತಿತ್ತು, ಅದರಲ್ಲಿ ವಿಶೇಷವಾಗಿ ಅರಸಿಕೆರೆಯ ಪ್ರಥಮ ಮತ್ತು ಏಕೈಕ ಸಾವಯವ ತರಕಾರಿ ಮಾರಾಟ ಕೇಂದ್ರ ಅಲ್ಲಿ ಟೋಮೋಟೋ ಕಾರ್ಡ್ ಪಡೆದರೆ ವರ್ಷಪೂರ್ತಿ ಕೇವಲ 10 ರೂಪಾಯಿಗೆ ಒಂದು ಕಿಲೋ ಸಾವಯವ ಟೋಮೋಟೋ ಸಿಗುತ್ತದೆ ಮಾರುಕಟ್ಟೆಯಲ್...