Skip to main content

Posts

Showing posts with the label kunchikal falls India's highest water falls

4009. ಕುಂಚಿಕಲ್ ಫಾಲ್ಸ್

ಕುಂಚಿಕಲ್_ಪಾಲ್ಸ್  ನಮ್ಮ ದೇಶದ ಅತ್ಯಂತ ಎತ್ತರದ ಜಲಪಾತ ಪಶ್ಚಿಮ ಘಟ್ಟದ ಪರ್ವತ ಶ್ರೇಣಿಯಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಉದ್ಭವ ಆಗುವ ವರಾಹಿ ನದಿಯ ಜಲಪಾತ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಸಮೀಪದ ನಿಡುಗೋಡಿ ಗ್ರಾಮದ ಅರಣ್ಯದಲ್ಲಿದೆ.   ವರಾಹಿ ನದಿಗೆ ಯಡೂರಿನ ಸಮೀಪ ವಿದ್ಯುತ್ ಉತ್ಪಾದನೆಗಾಗಿ ಆಣೆಕಟ್ಟು ನಿರ್ಮಾಣವಾಗಿದೆ.     ವರಾಹಿ ನದಿ ಜಲಪಾತವಾಗಿ ಇಲ್ಲಿಂದ ದುಮುಕಿ ಉಡುಪಿ ಜಿಲ್ಲೆಯ ಹೊಸಂಗಡಿಯ ಮೂಲಕ ಕುಂದಾಪುರ ತಾಲೂಕಿನ ಬಸ್ರೂರು,ಗಂಗೊಳ್ಳಿ ಪ್ರದೇಶಗಳಲ್ಲಿ ಹರಿದು ಮುಂದೆ ಸೌಪರ್ಣಿಕಾ, ಕೇದಕ, ಚಕ್ರ ಮತ್ತು ಕುಬ್ಜ ನದಿಗಳನ್ನ ಸಂಗಮಿಸಿ ಅರಬ್ಬಿ ಸಮುದ್ರ ಸೇರುತ್ತದೆ.   ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಸಮೀಪದ ನಿಡುಗೋಡು ಗ್ರಾಮದ ದಟ್ಟ ಅರಣ್ಯದಲ್ಲಿ ವರಾಹಿ ನದಿ ಜಲಪಾತ ಇದೆ.    1445 ಅಡಿ ಇದರ ಎತ್ತರ ಇದು ದೇಶದ ಅತ್ಯಂತ ದೊಡ್ಡ ಜಲಪಾತ ಎಂದು ದಾಖಲು ಆಗಿದೆ.    ಇದಕ್ಕೂ ಮೊದಲು ನಮ್ಮ ದೇಶದ ಅತ್ಯಂತ ಎತ್ತರದ ಜಲಪಾತ 1115 ಅಡಿ ಎತ್ತರದ ಮೇಘಾಲಯ ರಾಜ್ಯದ  #ನೋಹಾಕಾಲಿಕೈ ಜಲಪಾತ ಎಂದಾಗಿತ್ತು.     ಈಗ ವರಾಹಿ ನದಿಯ ನಮ್ಮ ಜಿಲ್ಲೆಯ #ಕುಂಚಿಕಲ್_ಪಾಲ್ಸ್ ನಮ್ಮ ದೇಶದ ಅತ್ಯಂತ ಎತ್ತರದ ಜಲಪಾತ ಎಂಬ ದಾಖಲೆ ನಿರ್ಮಿಸಿದೆ.     ಎರೆಡು ವರ್ಷದ ಹಿಂದೆ ಈ ಬಗ್ಗೆ ನಾನು ಲೇಖನ ಬರೆದಾಗ ಅದ...