Blog number 866.ಗೋರಕನಾಥಪುರದ ಯೋಗಿ ಆದಿತ್ಯನಾಥರ ಸುಪರ್ದಿಯ ಕುಂದಾಪುರ ಸಮೀಪದ ಸಿದ್ದಾಪುರದ ಎಡಮೊಗೆಯ ಹಲವಾರಿ ಮಠದ ಗುರುಗಳಾಗಿದ್ದ ಸೋಮನಾಥ ಪೀರ್ ಬಾವೋಜಿ ಮಧ್ಯ ಪ್ರದೇಶದ ಗ್ವಾಲಿಯರ್ ನವರು
#ಸೋಮನಾಥಪೀರ್_ಬಾವೋಜಿ_ಹಲವಾರಿ_ಮಠಾದೀಶರ_ನೆನಪು #ಗೊರಕನಾಥಪುರದ_ಯೋಗಿ_ಆದಿತ್ಯನಾಥರ_ಸುಪರ್ದಿಯ_ಕರ್ನಾಟಕದ_ನಾಥಪಂಥದ_ಮಠ #1978ರಲ್ಲಿ_ಸಾಗರಕ್ಕೆ_ಬಂದ_ಬಾರಾಪಂಥ_ಯಾತ್ರೆ_ನೋಡಿದ್ದೆ #ಆ_ಯಾತ್ರೆಯಲ್ಲಿ_ಬಂದವರೇ_ಸೋಮನಾಥ_ಪೀರ್_ಬಾವೋಜಿ. ಸೋಮನಾಥ ಜೀ ಮೂಲ ಗ್ವಾಲಿಯರ್ (ಮಧ್ಯ ಪ್ರದೇಶ) ಆದರೆ ಅವರ ಜೀವನದ ಬಹುಕಾಲ ಅಂದರೆ 34 ವಷ೯ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಸಿದ್ದಾಪುರ ಸಮೀಪದ ಎಡಮೊಗೆಯಲ್ಲಿ (ಕಮಲಶಿಲೆ ದೇವಾಸ್ಥನಕ್ಕೆ ಸಮೀಪ ) ನಾಥಪಂಥ ಮಠದಲ್ಲಿ ಮಠಾದೀಶರಾಗಿದ್ದರು. ಶ್ರೀ ಕ್ಷೇತ್ರ ಸಿದ್ದ ಪೀಠ ಕೊಡಚಾದ್ರಿ ಉತ್ತರ ಪ್ರದೇಶದ ಗೋ ರಕನಾಥಪುರದ ಯೋಗಿ ಆದಿತ್ಯನಾಥರ (ಈಗಿನ ಮುಖ್ಯಮಂತ್ರಿಗಳು) ಅದೀನದಲ್ಲಿದೆ. ಪ್ರತಿ 12 ವಷ೯ಕ್ಕೆ ಒಮ್ಮೆ ನಾಸಿಕ್ ಕುಂಬ ಮೇಳದ ನಂತರ ಹೊರಡುವ ಬಾರಾ ಪಂಥ ಜೋ೦ಡಿ ಪಾದಯಾತ್ರೆ ಇಲ್ಲಿ ಬಂದು ತಂಗುತ್ತದೆ, ಆಗ ಮಹಾಂತರ ಸಮಿತಿ ಕಳೆದ 12 ವಷ೯ದ ಆಡಳಿತ, ಪೂಜೆ ಇತ್ಯಾದಿ ತಮ್ಮದೆ ಆದ ಮಾನದಂಡದಲ್ಲಿ ಪರಿಶೀಲನೆ ಮಾಡುತ್ತಾರೆ ಆದರಲ್ಲಿ ತೃಪ್ತಿ ಆದರೆ ಹಾಲಿ ಇರುವ ಸ್ವಾಮೀಜಿ ಮುಂದುವರಿಸುತ್ತಾರೆ. ಆಗದಿದ್ದರೆ ತಮ್ಮ ಜೊತೆ ಬಂದ ಯೋಗಿ ಒಬ್ಬರನ್ನ ಅಲ್ಲಿಗೆ ನೇಮಿಸಿ ಮೊದಲಿದ್ದವರನ್ನ ತಮ್ಮ ಜೊತೆ ಮಂಗಳೂರಿನ ಕದ್ರಿ ಮಠಕ್ಕೆ ಕರೆದೊಯ್ಯುತ್ತಾರೆ. 1978ರಲ್ಲಿ ಬಂದ ಜೋ೦ಡಿಯಾತ್ರೆಯಲ್ಲಿ ಶ್ರೀ ಸೋಮನಾಥಜಿ ಇಲ್ಲಿಗೆ ಬಂದವರು, ಆಗ ಸಾಗರದಲ್ಲಿ...