Skip to main content

Posts

Showing posts with the label Sagar MLA restricted entrance ticket of Giant wheel and other shows of sagar Marikamba jatra amusements only Rs 50

Blog number 1234. ಜಾತ್ರಾ ಪ್ರದರ್ಶನದ ಮುಖ್ಯ ಆಕರ್ಷಣೆ ಜೈ೦ಟ್ ವೀಲ್ ಎಂಬ ವಿದ್ಯುತ್ ಚಾಲಿತ ತೊಟ್ಟಿಲುಗಳ ಪ್ರವೇಶ ಧರ ಕೇವಲ 50 ರೂಪಾಯಿಗೆ ನಿಗಧಿ ಮಾಡಿಸಿದ ಸಾಗರದ ಶಾಸಕ ಹರತಾಳು ಹಾಲಪ್ಪ

#ಸಾಗರದ_ಮಾರಿಕಾಂಬಾ_ಜಾತ್ರೆಯ_ಅಮ್ಯುಸಮೆಂಟ್_ಪ್ರವೇಶ_ಧರ_50_ಮಾತ್ರ. #ಜಾತ್ರೆಗಳಲ್ಲಿ_ಇರಲೇಬೇಕಾದ_ಜೈಂಟ್_ವೀಲ್_ತೊಟ್ಟಿಲು. #ವಿಶ್ವದ_ಅತ್ಯಂತ_ಎತ್ತರದ_ಜೈಂಟ್_ವೀಲ್_ಐನ್_ದುಬೈನಲ್ಲಿದೆ. #ಹದಿನೇಳನೆ_ಶತಮಾನದಲ್ಲಿ_ಬಲ್ಗೇರಿಯಾದಿಂದ_ಭಾರತಕ್ಕೆ_ಪರಿಚಯವಾದ_ಸಂತೋಷದ_ಚಕ್ರ #ಇಟಲಿ_ಪ್ರವಾಸಿ_ಪಿಯೋತ್ರ_ಡಲ್ಲಾವಿಲ್ಲೆ_ಪತ್ರದಲ್ಲಿ_ಕಾನ್ಸಟೆಂಟಿನೋಪಲಲ್ಲಿ #ರಂಜಾನ್_ಹಬ್ಬದಲ್ಲಿ_ಇಂತಹ_ವೀಲ್_ಹತ್ತಿದ್ದ_ಉಲ್ಲೇಖವಿದೆ    ಕನ್ನಡದಲ್ಲಿ ತಿರುಗುಣಿ ತೊಟ್ಟಿಲು ಅನ್ನುವ ಎಲ್ಲಾ ಜಾತ್ರೆ - ಪ್ರದರ್ಶನಗಳಲ್ಲಿ ಮುಖ್ಯ ಆಕರ್ಷಣೆ ಆಗಿರುವ ಇಂಗ್ಲೀಷ್‌ನಲ್ಲಿ ಜೈ೦ಟ್ ವೀಲ್ (ಬ್ಬಹತ್ ಗಾತ್ರದ ಚಕ್ರದ ತೊಟ್ಟಿಲು) ಹಿಂದಿಯಲ್ಲಿ ಜೂಲ, ಅಮೇರಿಕಾದಲ್ಲಿ ಪೆರಿಸ್ ವೀಲ್ 1893ರಲ್ಲಿ ಅಮೇರಿಕಾದ ಚಿಕಾಗೋದಲ್ಲಿ ನಡೆದ ಕೊಲ೦ಬಿಯಾ ಪ್ರದರ್ಶನದಲ್ಲಿ ಜಾಜ್೯ ವಾಷಿಂಗ್ಟನ್ ಗೇಲ್ ಪೆಲಿಸ್ ಜೂನಿಯರ್ ಪ್ರಥಮ ಬಾರಿಗೆ ನಿರ್ಮಿಸಿ ಬಳಸಿದರು.   ಇದಕ್ಕೂ ಮೊದಲು ಇದು ಮಾನವ ದೈಹಿಕ ಶಕ್ತಿಯಿಂದ ತಿರುಗಿಸುವ ಮರದ ಸಣ್ಣ ತೊಟ್ಟಿಲುಗಳು ಇದಕ್ಕೆ ಸಂತೋಷದ ಚಕ್ರ (Happy wheel) ಅನ್ನುವ ಹೆಸರು 17ನೇ ಶತಮಾನದಲ್ಲಿ ಬಲ್ಗೇರಿಯದಿಂದ ಭಾರತಕ್ಕೆ ಬಂತು ಎಂಬ ಉಲ್ಲೇಖಗಳಿದೆ.   ಇಟಲಿಯ ಪ್ರವಾಸಿ ಪಿಯೋತ್ರ ಡಲ್ಲಾವಿಲ್ಲೆ ತನ್ನ ಪ್ರವಾಸಿ ಪತ್ರದಲ್ಲಿ ರಂಜಾನ್ ಹಬ್ಬದಲ್ಲಿ ಕಾನ್ಸ್ಟೆಂಟಿನೋಪಲ್ ನಲ್ಲಿ ಇಂತಹ ಚಕ್ರದಲ್ಲಿ...