Skip to main content

Posts

Showing posts with the label Why first Rani chennabyradevi film stopped

4050.ರಾಣಿ_ಚೆನ್ನಬೈರಾದೇವಿ_ಮೊದಲ_ಸಿನಿಮಾ ಸ್ಥಗಿತವಾಯಿತು ಏಕೆ?...

ರಾಣಿ_ಚೆನ್ನಬೈರಾದೇವಿ_ಮೊದಲ_ಸಿನಿಮಾ   2013 ರಲ್ಲಿ ಚಿತ್ರಿಕರಣ ಪ್ರಾರಂಭವಾಗಿ ಅರ್ದಕ್ಕೆ ನಿಂತು ಹೋಗಿತ್ತು,ಆ ಸಿನಿಮಾದಲ್ಲಿ ರಾಣಿ ಚೆನ್ನ ಬೈರಾದೇವಿ ಪಾತ್ರ ನಟಿ #ಶೃತಿ ಆಯ್ಕೆ ಆಗಿದ್ದರು.   ಆಗ ನಮ್ಮ ಗೇರುಸೊಪ್ಪೆಯ ರಾಣಿ ತೆರೆಗೆ ಬರುತ್ತಾರೆಂದು ನಾವೆಲ್ಲ ಆಸೆ ಪಟ್ಟಿದ್ದೆವು ಆದರೆ ಚಿತ್ರಿಕರಣ ಅರ್ಧದಲ್ಲೇ ನಿಂತು ಹೋಯಿತು ಇದು ಇತಿಹಾಸ ಆಸಕ್ತರಿಗೆ ತುಂಬಾ ನಿರಾಸೆ ಮಾಡಿತ್ತು.    ಈಗ 13 ವರ್ಷಗಳ ನಂತರ #ಬಂದನ ಸಿನಿಮಾ ಖ್ಯಾತಿಯ #ರಾಜೇಂದ್ರಸಿಂಗ್_ಬಾಬು ನಟಿ #ರಮ್ಯಾರನ್ನ ರಾಣಿ ಚೆನ್ನ ಬೈರಾದೇವಿ ಪಾತ್ರಕ್ಕೆ ಆಯ್ಕೆ ಮಾಡಿ ಸಿನಿಮಾ ಮಾಡಲಿದ್ದಾರೆ.   ರಾಣಿ ಚೆನ್ನ ಬೈರಾದೇವಿಯ ಎರಡನೆ ಸಿನಿಮಾ ಯಾವುದೇ ಅಡೆ ತಡೆ ಇಲ್ಲದೆ ಚಿತ್ರಿಕರಣ ಮುಗಿಸಿ ತೆರೆಯ ಮೇಲೆ ಬರಲಿ ಎಂದು ಹಾರೈಸೋಣ.   ಕನ್ನಡ ಚಿತ್ರರಂಗದಲ್ಲಿ ಸಾಹಸ ಸಿಂಹ #ವಿಷ್ಣುವರ್ಧನ್ ಅವರ ಆಪ್ತರಾಗಿದ್ದ ಖ್ಯಾತ ನಿರ್ದೇಶಕ #ಬಿ_ರಾಮಮೂರ್ತಿ ಅವರು 2013 ರಲ್ಲಿ #ರಾಣಿ_ಚೆನ್ನಭೈರಾದೇವಿ' ಎಂಬ ಐತಿಹಾಸಿಕ ಸಿನಿಮಾವನ್ನು ನಿರ್ದೇಶಿಸಲು ಯೋಜನೆ ರೂಪಿಸಿದ್ದರು.   ​ಕನ್ನಡದ ಹಿರಿಯ ನಟಿ ಶ್ರುತಿ ಅವರು ಈ ಚಿತ್ರದಲ್ಲಿ ರಾಣಿ ಚೆನ್ನಭೈರಾದೇವಿಯ ಪ್ರಧಾನ ಪಾತ್ರದಲ್ಲಿ ನಟಿಸಲು ಆಯ್ಕೆಯಾಗಿದ್ದರು. ​  ಗೇರುಸೊಪ್ಪೆಯ ರಾಣಿಯಾಗಿದ್ದ ಚೆನ್ನಭೈರಾದೇವಿ ಕರಾವಳಿ ಕರ್ನಾಟಕವನ್ನು ಬರೋಬ್ಬರಿ 54 ವರ್ಷಗಳ ಕಾಲ ಆಳಿದ ಧೀರ ಮಹಿಳೆ.  ...