Skip to main content

Posts

Showing posts with the label taste and aroma will keep constant

Blog number 2134. ಜೇನು ತುಪ್ಪದ ಜಾಡಿಯಲ್ಲಿ ಸಂಸ್ಕರಿಸಿದ ಹಣ್ಣುಗಳು ವರ್ಷಗಟ್ಟಲೆ ತಮ್ಮ ತಾಜಾತನ ಕಾಪಾಡಿಕೊಳ್ಳುವ ಗುಣ ಹೊಂದಿದೆ ಇದು ಪ್ರಾಚೀನ ಕಾಲದಲ್ಲಿ ಆಚರಣೆ ಇದ್ದಿದ್ದ ಹಣ್ಣಿನ ಸಂಸ್ಕರಣೆ ಮತ್ತು ನೈಸರ್ಗಿಕ ಶೆಲ್ಫ್ ಲೈಪ್ ಹೆಚ್ಚಿಸುವ ದೇಶಿ ಆಹಾರ ತಂತ್ರಜ್ಞಾನ,

#ಜೇನು_ತುಪ್ಪದ_ವಿಶೇಷ_ಗುಣಗಳು. #ಈ_ವರ್ಷದ_ಮಾವಿನಹಣ್ಣು_ಜಾಡಿಯಲ್ಲಿ_ಜೇನುತುಪ್ಪದಲ್ಲಿ_ಅದ್ದಿಟ್ಟರೆ #ಮುಂದಿನ_ವರ್ಷದಲ್ಲಿ_ತೆಗೆದು_ತಿಂದರೆ_ಅದೇ_ತಾಜಾತನ_ಇರುತ್ತದಂತೆ. #ಈ_ವರ್ಷ_ನಾನು_ಇದನ್ನು_ಪ್ರಯೋಗ_ಮಾಡಿ_ನೋಡಲಿದ್ದೇನೆ. https://youtube.com/shorts/r7wvbQDxlgs?feature=shared    ಪೈನಾಪಲ್ / ಅನಾನಸ್ ಉತ್ತರ ಕನ್ನಡ ಜಿಲ್ಲೆಯ ಮುಖ್ಯ ಬೆಳೆ ಆದರೆ ಕೇಂದ್ರ ಸರ್ಕಾರ #ಶಿವಮೊಗ್ಗ ಜಿಲ್ಲೆಯನ್ನು #ಪೈನಾಪಲ್ ಮುಖ್ಯ ಬೆಳೆ ಎಂದು ಘೋಷಿಸಿದೆ ಇದರಿಂದ ಪೈನಾಪಲ್ ಬೆಳೆ ಮೌಲ್ಯವರ್ದನೆ ಎಷ್ಟಾಗಿದೆ ಗೊತ್ತಿಲ್ಲ.   ಜೇನುತುಪ್ಪ ನೈಸರ್ಗಿಕ ಪ್ರಿಸರ್ವೇಟಿವ್ ಅದರಲ್ಲಿ ಯಾವುದೇ ಹಣ್ಣು ಹಾಕಿಟ್ಟರೆ ಆ ಹಣ್ಣು ವರ್ಷಾನುಗಟ್ಟಲೆ ತಾಜಾತನ ಉಳಿಸಿಕೊಳ್ಳುತ್ತದಂತೆ.   ಹಿಂದಿನ ಕಾಲದಲ್ಲಿ ಅಪರೂಪದ ಹಣ್ಣುಗಳನ್ನು ಜೇನು ತುಪ್ಪದ ಜಾರುಗಳಲ್ಲಿ ಹಾಕಿಟ್ಟು ಬೇಕಾದಾಗ ಬಳಸುವ ಸಂಪ್ರದಾಯ ಇತ್ತು ಎನ್ನುತ್ತಾರೆ.   ರಾಜರ ಆಸ್ಥಾನಗಳಲ್ಲಿ ಈ ಪದ್ದತಿ ಕಡ್ಡಾಯವಾಗಿ ರಾಜರ ಅಂತಃಪುರದ ಬಾಣಸಿಗರು ಪಾಲಿಸುತ್ತಿದ್ದರೆಂದು ಓದಿದ ನೆನಪು.      ಬಾಲ್ಯದಲ್ಲಿ ಮಾವ ಹೇಳುತ್ತಿದ್ದ ಕಥೆಗಳಲ್ಲಿ ಕರಡಿ ಹಲಸಿನ ಹಣ್ಣಿನ ತೊಳೆ ಬಿಡಿಸಿ ಒಯ್ದು ರಹಸ್ಯವಾದ ಮರದ ಪೊಟರೆಯಲ್ಲಿ ಜೇನುಗೂಡಿನಿಂದ ಕಿತ್ತು ತಂದ ಜೇನುತುಪ್ಪದಲ್ಲಿ ಅದ್ದಿಡುತ್ತದೆ ಹಲಸಿನ ಹಣ್ಣಿನ ಕಾಲ ಮುಗಿದ ಮೇಲೆ ಕರಡಿ ತಾ...