https://youtu.be/lvIMIR2TiiI?feature=shared #ಮಡಿವಾಳನಕಟ್ಟೆ_ಕೆಂಪಣ್ಣನ_ಕೆರೆ #ಸಾಗರ_ತಾಲೂಕಿನ_ಬರೂರು_ಗ್ರಾಮಪಂಚಾಯತಿಯ_ಕುಂದೂರು_ಸಮೀಪ #ಕೆಂಪಣ್ಣನ_ಜೀವಮಾನದ_ಬೇಡಿಕೆ_ಈ_ಕೆರೆ_ನಿರ್ಮಾಣ #ನಾನು_ಆನಂದಪುರಂ_ಜಿಲ್ಲಾ_ಪಂಚಾಯಿತಿ_ಸದಸ್ಯನಾಗಿ_ಈಡೇರಿಸಿದ_ಸ0ತೃಪ್ತಿ #ಕೆಂಪಣ್ಣ_ಈ_ಕೆರೆಗೆ_ಅರುಣಪ್ಪನ_ಕೆರೆ_ಅಂತ_ಕರೆದರೆ #ನಾನು_ಮಾತ್ರ_ಕೆಂಪಣ್ಣನ_ಕೆರೆ_ಅಂತನೆ_ಕರೆದೆ_ಅದೇ_ಶಾಶ್ವತವಾಗಿದೆ #ಶಾಲಾ_ಸಹಪಾಟಿ_ಹೊಸಕೊಪ್ಪದ_ನಾಗಪ್ಪ_ಮಾಸ್ಟರ್_ಅಪರೂಪದ_ಪೋಟೋ_ಕಳಿಸಿದ್ದಾರೆ. ನನ್ನ ಮಾಧ್ಯಮಿಕ ಶಾಲಾ ಸಹಪಾಟಿ ಹೊಸಕೊಪ್ಪದ ನಾಗಪ್ಪ ಮಾಸ್ಟರ್ ಇವತ್ತು ಕಳಿಸಿದ ಪೋಟೋಗಳು 29 ವರ್ಷದ ಹಿಂದಿನ ಕಥೆ ನೆನಪಿಸಿತು. 1995ರಲ್ಲಿ ನಾನು ಆನಂದಪುರಂ ಜಿಲ್ಲಾ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಆಗಿದ್ದೆ ಆಗ ಆನಂದಪುರಂ,ಯಡೇಹಳ್ಳಿ, ಆಚಾಪುರ, ಹೊಸೂರು, ಗೌತಮಪುರ, ಹಿರೇಬಿಲಗುಂಜಿ, ತ್ಯಾಗರ್ತಿ ಮತ್ತು ಬರೂರು ಗ್ರಾಮ ಪಂಚಾಯಿತಿಗಳು ಸೇರಿತ್ತು. ತ್ಯಾಗರ್ತಿ ಭಾಗದ ಚುನಾವಣಾ ಪ್ರಚಾರ ಸ್ಥಳೀಯರಾದ ಕೃಷ್ಣಪ್ಪ, ಗಣಪತಿ, ದಾವೀದ್, ಮೈಲಾರಿಕೊಪ್ಪದ ಹೊಳೆಯಪ್ಪ,ನೀಚಡಿ ವೆಂಕಟೇಶ್ ಹೆಗಡೆ, ಹೊಸಂತೆ ಮಂಜುನಾಥ್, ಕುಮಾರ್ ಗೌಡರು, ಬೆಳಂದೂರು ಲಿಂಗಪ್ಪ, ಬರೂರು ಸದಾಶಿವಪ್ಪ ಗೌಡರು ಮತ್ತು ಅನೇಕರು ಜವಾಬ್ದಾರಿಯಿಂದ ನಡೆಸಿದ್ದರು. ಅಂತಹ ಪ್ರಚಾರದ ದಿನ ತ್ಯಾಗರ್ತಿ ಸಂತೆಯಂದು ತ್ಯಾಗ...