https://youtube.com/shorts/swtbkP_Yebs?feature=shared #ನಿತ್ಯ_ವಾಕಿಂಗ್_ನನ್ನ_ಅನುಭವದ_ಟಿಪ್ಸ್ #ಚೌತಿಹಬ್ಬದ_ಮರುದಿನ #ಬೆಳಿಗ್ಗೆಯೇ_ತುಂತುರು_ಮಳೆ #ನಾನು_ಮತ್ತು_ನನ್ನ_ಪ್ರೀತಿಯ_ಶಂಭೂರಾಮನ_ವಾಕಿಂಗ್ #ನಮ್ಮಿಬ್ಬರ_ಬೆಳಗಿನ_ಜಗತ್ತು. ಬೆಳಗಿನ ಒಂದು ಗಂಟೆಯ ನಡಿಗೆ (ವಾಕಿಂಗ್ ) ನಮ್ಮ ದೇಹವನ್ನು ಬಿಪಿ ಶುಗರ್ ನಿಂದ ನಿಯಂತ್ರಣದಲ್ಲಿಡುವ ಜೊತೆ ಸ್ಥೂಲ ಕಾಯ ನಿವಾರಣೆಗೆ ತುಂಬಾ ಅನುಕೂಲಕರ ಆದರೆ ಬೆಳಿಗ್ಗೆ ಎದ್ದು ವಾಕಿಂಗ್ ಮಾಡಲು ನಮ್ಮ ಮನಸ್ಸು ಮಾತ್ರ ಕುಂಟು ನೆಪ ಹೇಳುವುದರಿಂದ ಅನೇಕರು ಶುರು ಮಾಡುವ ವಾಕಿಂಗ್ ಸ್ವಲ್ಪ ದಿನದಲ್ಲಿ ನಿಲ್ಲಿಸಿ ಬಿಡುತ್ತಾರೆ. ಮೊದಲ ದಿನವೇ ಒಂದು ಗಂಟೆ ವಾಕಿಂಗ್ ಯಾವ ಕಾರಣಕ್ಕೂ ಮಾಡ ಬೇಡಿ, 5 ನಿಮಿಷದ ವಾಕಿಂಗ್ ಪ್ರಾರಂಬಿಸಿ ಪ್ರತಿ ಹತ್ತು ದಿನಕ್ಕೆ ದ್ವಿಗುಣ ಮಾಡುತ್ತಾ ಹೋದರೆ ಒಂದು ಗಂಟೆ ವಾಕಿಂಗ್ ಸಾಮರ್ಥ್ಯಕ್ಕೆ ದೇಹ ತಲುಪುತ್ತದೆ ಮತ್ತು ನಿರಂತರ ವಾಕಿಂಗ್ ಮಾಡಲು ಮನಸ್ಸು ದೇಹ ತಯಾರಾಗಿರುತ್ತದೆ. ಬೆಳಗಿನ ಮತ್ತು ಸಂಜೆಯ ವಾಕಿಂಗ್ ನಲ್ಲಿ ನನ್ನ ಆಯ್ಕೆ ಬೆಳಗಿನದ್ದು ಇದಕ್ಕಾಗಿ ಸಮಯ ಹೊಂದಿಸುವುದು ಸುಲಭ ನಮ್ಮ ಕೆಲಸ ವ್ಯವಹಾರಗಳಿಗೆ ಬೇಗ ಹೋಗ ಬೇಕಾದರೆ ಒಂದು ಗಂಟೆ ಬೇಗ ಎದ್ದರಾಯಿತು. ವಾಕಿಂಗ್ ಮಾಡಲು ರಸ್ತೆ ಆಯ್ಕೆ ಮಾಡಬೇಡಿ ಈಗಿನ ವೇಗದ ವಾಹನಗಳಿಂದ ಅನೇಕ ಪಾದಚಾರಿಗಳು ಅಪಘಾತ ಸಾವುನೋವು ಅನುಭವಿಸಿದ್ದಾರೆ. ವಾಕಿಂ...