Skip to main content

Posts

Showing posts with the label Shimoga Parliament Election 2019.Part 9

Blog number 1420. ಲೋಕಸಭಾ ಚುನಾವಣಾ ಅಂಕಣ ಭಾಗ-9 ( 18- ಏಪ್ರಿಲ್ -2019)

#ಪ್ರಸಕ್ತ ರಾಜಕಾರಣದ ಒಳಗುಟ್ಟು#  ಲೋಕಸಭಾ ಚುನಾವಣಾ ಅಂಕಣ ಬಾಗ-9. (ಕೆ.ಆರುಣ್ ಪ್ರಸಾದ್ ).  ಬೂತ್ ಮಟ್ಟದ ಸಂಘಟನೆಯಿಂದ ಆಗಿರುವ ಲಾಭ/ ನಷ್ಟ .   ನನ್ನ ಹಿಂದಿನ ಈ ಅಂಕಣ ಓದಿದ ರಾಜಕೀಯ ಪಕ್ಷದ ಚಾಣಕ್ಷರೋವ೯ರು  ಪ್ರತಿಕ್ರಿಯಿಸಿದ್ದು ಏನೇoದರೆ ಚುನಾವಣೆ ಈಗ ಮೊದಲಿನಂತೆ ಇಲ್ಲ, ಹಣ ಇಲ್ಲದ ಪಕ್ಷ ಮತ್ತು ಹಣ ಇಲ್ಲದ ಅಭ್ಯಥಿ೯ ಚುನಾವಣೆಯಲ್ಲಿ ಸ್ಪದಿ೯ಸಲು ಸಾಧ್ಯವೇ ಇಲ್ಲ ಅಂದರು.   ಜಾತಿ, ಪಕ್ಷದ ಅಲೆ, ಅಜೆಂಡಾ ಎಲ್ಲಾ ಆಮೇಲೆ ಮೊದಲು ನಿಮಗೆ ಚುನಾವಣೆಗೆ ಎಷ್ಟು ವಿನಿಯೋಗಿಸಲು ಸಾಧ್ಯ ಎಂಬ ಪರಿಷ್ಕರಣೆ ನಂತರವೇ ಅಭ್ಯಥಿ೯ಯ ಬಾಕಿ ಅಂಶಗಳು ಗಣನೆಗೆ ತೆಗೆದು ಕೊಳ್ಳಲಾಗುತ್ತದೆ.   ಅಭ್ಯಥಿ೯ ಆಥಿ೯ಕವಾಗಿ ಮಜಬೂತ್ ಆಗಿದ್ದರೆ ಪಕ್ಷ ಕೂಡ ಹೆಚ್ಚು ಪಂಡ್ ನೀಡುತ್ತೆ ಎಂದರು.   ಶಿವಮೊಗ್ಗ ಲೋಕ ಸಭಾ ಚುನಾವಣೆಗೆ ಎಷ್ಟು ಹಣ ಬೇಕು? ಎನ್ನುವ ನನ್ನ ಪ್ರಶ್ನೆಗೆ ಅವರ ಉತ್ತರ ಚುನಾವಣಾ ಆಯೋಗ ನಿಗಧಿ ಮಾಡಿರುವುದು 75 ಲಕ್ಷ ಆದರೆ ಇದರ ಗರಿಷ್ಟ ನೂರರಷ್ಟು ಅಂದರೆ 60 ರಿಂದ 75 ಕೋಟಿ ಅಥವ ಕನಿಷ್ಟ ಅಂದರೂ 40 ಕೋಟಿ ಬೇಕೆ ಬೇಕು ಅಂದರು.   ಇಷ್ಟು ಹಣ ಎಲ್ಲಿ ಖಚಾ೯ಗುತ್ತೆ ಅಂದರೆ ಪ್ರಾರಂಭದಲ್ಲಿ ಸ್ಥಳೀಯ ಶಾಸಕ ಅಥವ ಪರಾಜಿತ ಅಭ್ಯಥಿ೯ಗೆ ಟೋಕನ್ ಪಂಡ್ ಅಂತ 25 ರಿಂದ 50 ಲಕ್ಷ (ಇದರ ಖಚಿ೯ನ ಲೆಖ್ಖ ಕೇಳುವ೦ತೆ ಇಲ್ಲ) ಕೊಡಬೇಕು, ಅಜಿ೯ ಹಾಕುವಾಗ ನಡೆಸುವ ರ್ಯಾಲಿಗೆ ಜನ ಸೇರಿಸಲು ಆಗುವ ಖಚು೯ ವೆಚ್ಚ ಭರಿಸ...