Skip to main content

Blog number 1420. ಲೋಕಸಭಾ ಚುನಾವಣಾ ಅಂಕಣ ಭಾಗ-9 ( 18- ಏಪ್ರಿಲ್ -2019)

#ಪ್ರಸಕ್ತ ರಾಜಕಾರಣದ ಒಳಗುಟ್ಟು#
 ಲೋಕಸಭಾ ಚುನಾವಣಾ ಅಂಕಣ ಬಾಗ-9.
(ಕೆ.ಆರುಣ್ ಪ್ರಸಾದ್ ).
 ಬೂತ್ ಮಟ್ಟದ ಸಂಘಟನೆಯಿಂದ ಆಗಿರುವ ಲಾಭ/ ನಷ್ಟ .
  ನನ್ನ ಹಿಂದಿನ ಈ ಅಂಕಣ ಓದಿದ ರಾಜಕೀಯ ಪಕ್ಷದ ಚಾಣಕ್ಷರೋವ೯ರು  ಪ್ರತಿಕ್ರಿಯಿಸಿದ್ದು ಏನೇoದರೆ ಚುನಾವಣೆ ಈಗ ಮೊದಲಿನಂತೆ ಇಲ್ಲ, ಹಣ ಇಲ್ಲದ ಪಕ್ಷ ಮತ್ತು ಹಣ ಇಲ್ಲದ ಅಭ್ಯಥಿ೯ ಚುನಾವಣೆಯಲ್ಲಿ ಸ್ಪದಿ೯ಸಲು ಸಾಧ್ಯವೇ ಇಲ್ಲ ಅಂದರು.
  ಜಾತಿ, ಪಕ್ಷದ ಅಲೆ, ಅಜೆಂಡಾ ಎಲ್ಲಾ ಆಮೇಲೆ ಮೊದಲು ನಿಮಗೆ ಚುನಾವಣೆಗೆ ಎಷ್ಟು ವಿನಿಯೋಗಿಸಲು ಸಾಧ್ಯ ಎಂಬ ಪರಿಷ್ಕರಣೆ ನಂತರವೇ ಅಭ್ಯಥಿ೯ಯ ಬಾಕಿ ಅಂಶಗಳು ಗಣನೆಗೆ ತೆಗೆದು ಕೊಳ್ಳಲಾಗುತ್ತದೆ.
  ಅಭ್ಯಥಿ೯ ಆಥಿ೯ಕವಾಗಿ ಮಜಬೂತ್ ಆಗಿದ್ದರೆ ಪಕ್ಷ ಕೂಡ ಹೆಚ್ಚು ಪಂಡ್ ನೀಡುತ್ತೆ ಎಂದರು.
  ಶಿವಮೊಗ್ಗ ಲೋಕ ಸಭಾ ಚುನಾವಣೆಗೆ ಎಷ್ಟು ಹಣ ಬೇಕು? ಎನ್ನುವ ನನ್ನ ಪ್ರಶ್ನೆಗೆ ಅವರ ಉತ್ತರ ಚುನಾವಣಾ ಆಯೋಗ ನಿಗಧಿ ಮಾಡಿರುವುದು 75 ಲಕ್ಷ ಆದರೆ ಇದರ ಗರಿಷ್ಟ ನೂರರಷ್ಟು ಅಂದರೆ 60 ರಿಂದ 75 ಕೋಟಿ ಅಥವ ಕನಿಷ್ಟ ಅಂದರೂ 40 ಕೋಟಿ ಬೇಕೆ ಬೇಕು ಅಂದರು.
  ಇಷ್ಟು ಹಣ ಎಲ್ಲಿ ಖಚಾ೯ಗುತ್ತೆ ಅಂದರೆ ಪ್ರಾರಂಭದಲ್ಲಿ ಸ್ಥಳೀಯ ಶಾಸಕ ಅಥವ ಪರಾಜಿತ ಅಭ್ಯಥಿ೯ಗೆ ಟೋಕನ್ ಪಂಡ್ ಅಂತ 25 ರಿಂದ 50 ಲಕ್ಷ (ಇದರ ಖಚಿ೯ನ ಲೆಖ್ಖ ಕೇಳುವ೦ತೆ ಇಲ್ಲ) ಕೊಡಬೇಕು, ಅಜಿ೯ ಹಾಕುವಾಗ ನಡೆಸುವ ರ್ಯಾಲಿಗೆ ಜನ ಸೇರಿಸಲು ಆಗುವ ಖಚು೯ ವೆಚ್ಚ ಭರಿಸಬೇಕು ಇದಕ್ಕೆ ಎಷ್ಟೇ ಖಚಾ೯ದರೂ ಗ್ರಾಂಡ್ & ಸಕ್ಸಸ್ ಮಾಡ ಬೇಕು.
  ನಂತರ ಜಿಪಂ ಸದಸ್ಯರು, ನಗರಸಭಾ, ಪುರಸಭಾ, ಗ್ರಾಮ ಪಂಚಾಯತ್ ಸದಸ್ಯರಿಗೆ ತಲಾ ಇಷ್ಟು ಎಂದು ಪಕ್ಷ ಮತ್ತು ಅಭ್ಯಥಿ೯ ತೀಮಾ೯ನದಂತೆ ಪಾವತಿ ಮಾಡಬೇಕು.
  ನಂತರ ಪ್ರತಿ ಬೂತಿಗೆ   ಪ್ರಚಾರಕ್ಕಾಗಿ ಹಂತ ಹಂತವಾಗಿ ಮತದಾನದ ದಿನದ ತನಕ ಕಂತಿನಲ್ಲಿ ನೀಡಬೇಕಾಗಿದೆ.
  ಇದರ ಮಧ್ಯ ಜಿಲ್ಲಾ, ತಾಲ್ಲೂಕ, ಹೋಬಳಿ, ಗ್ರಾಮಗಳಲ್ಲಿ ನಡೆಯುವ ಸಭೆ ಸಮಾರಂಭದ ವೆಚ್ಚ, ಸಭಿಕರಿಗೆ ತಲಾ ಕೂಲಿ ಹೀಗೆ ತುಂಬಾ ಖಚಾ೯ಗುತ್ತೆ ಅಂದರು.
 ಮುಂದುವರಿದ ಅವರು ಪತ್ರಿಕೆಯವರಿಗೆ, ಜಾಹಿರಾತಿಗೆ, ಕರಪತ್ರಕ್ಕೆ, ತಾಲ್ಲೂಕಿನ, ಜಿಲ್ಲೆಯ ಕಚೇರಿ ನಿವ೯ಹಣೆ, ಮುಖಂಡರ ವಾಹನ ಮತ್ತು ದಿನದ ವೆಚ್ಚ ನಿಯಂತ್ರಣ ಮಾಡಲು ಅಸಾಧ್ಯ ಎಂದರು.
  ಮತದಾನದ ಹಿಂದಿನ ದಿನ ನಿಧಿ೯ಷ್ಟ ಮತದಾರರಿಗೆ ತಲಾ 500 ಅಥವ ಸಾವಿರದಂತೆ ಪ್ರತಿ ಬೂತಿಗೆ 1 ರಿಂದ 2 ಲಕ್ಷ ಮತ್ತು ಮತದಾನದ ದಿನ ಮತದಾರರನ್ನ ತರಲು ವಾಹನಕ್ಕೆ, ಬೂತ್ ಏಜೆಂಟರು ಇತ್ಯಾದಿ ಕೆಲಸ ನಿವ೯ಹಿಸುವವರ ವೆಚ್ಚ ತಲಾ ಬೂತಿಗೆ ಕನಿಷ್ಟ 10 ರಿಂದ 30 ಸಾವಿರ ಬರುತ್ತೆ ಹಾಗಾಗಿ ಇದು ಸಣ್ಣ ವೆಚ್ಚದಲ್ಲಿ ಮುಗಿಸಲು ಸಾಧ್ಯವಿಲ್ಲ ಅಂದರು.
  ಹಾಗಾದರೆ ಪಕ್ಷ ಸಂಘಟನೆ ಬೇಕಾಗಿಲ್ಲವಾ? ಅಂತ ಕೇಳಿದ್ದಕ್ಕೆ ಅವರು ಹೇಳಿದ್ದು ಪಕ್ಷ ಸಂಘಟನೆ ಸರಿ ಇದ್ದರೆ ಈ ಹಣದಲ್ಲಿ ಸೋರಿಕೆಯ ಶೇಕಡಾವಾರು ಕಡಿಮೆ ಆಗುತ್ತೆ ಅಂದರು.
 ಹೀಗೆ ಲೋಕಾರಾಮ ಮಾತಿನಲ್ಲಿ ಅವರು ಹೇಳಿದ್ದು ಕಳೆದ 6 ತಿಂಗಳ ಹಿಂದೆ ನಡೆದ ಚುನಾವಣೆಯಲ್ಲಿ 60 ಕೋಟಿ ಪಾಟಿ೯ ಹಣದಲ್ಲಿ ಅದ೯ಕ್ಕೆ ಅದ೯ ಚುನಾವಣೆಗೆ ಬಳಸದೇ ಬೇರೆ ಕಡೆ ವಗಾ೯ಯಿಸಿದ್ದರಿಂದ ಸೋಲಾಯಿತಂತೆ!?.
  ಹೀಗೆ ಇವರ ಜೊತೆ ಮಾತಾಡುತ್ತಾ ಇವತ್ತಿನ ಚುನಾವಣೆಗಳ ಹಣ ವಿನಿಯೋಗದ ಅಗಾದತೆ ಕೇಳಿ ಸುಮ್ಮನಾದೆ.
  ಶಿವಮೊಗ್ಗ ಲೋಕಸಭಾ ಚುನಾವ ಣೆಗೆ ಇಷ್ಟು ಖಚಾ೯ದರೆ ಮಂಡ್ಯ, ಹಾಸನ, ತುಮಕೂರಿನಂತ ಪ್ರತಿ ಪ್ಟಿತ ಕ್ಷೇತ್ರಕ್ಕೆ ಇಲ್ಲಿಗಿOತ ಎಷ್ಟು ಪಟ್ಟು ಹಣ ಬೇಕಾಗಬಹುದು !?

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...