https://youtu.be/6cQgjn0SC2k
#ಈ_ವರ್ಷ_ಶಿವಮೊಗ್ಗ_ಜಿಲ್ಲೆಯಲ್ಲಿ_ಅಪ್ಪೆಮಿಡಿ_ಇಲ್ಲವಾ?
#ಪರಿಸರ_ಅಸಮತೋಲನದಿಂದ_ಮಾವಿನ_ಹೂವು_ವಿಳಂಭ
#ಅಪ್ಪೆ_ಮಿಡಿಗೆ_ಜಿಐ_ಟ್ಯಾಗ್_12_ವಷ೯ದ_ಹಿಂದೆಯೇ_ದೊರಕಿದೆ.
#ಇನ್ನೂ_ಹದಿನೈದು_ದಿನ_ಕಾಯಬೇಕು_ಜೀರಿಗೆ_ಅಪ್ಪಮಿಡಿಗೆ .
#ಕಳೆದ_ವಷ೯_ಮಾರ್ಚ್_ಕೊನೆಗೆ_ಅಪ್ಪೆಮಿಡಿ_ಸಿಕ್ಕಿತ್ತು.
#ವಷ೯_ಪೂರ್ತಿ_ಊಟದ_ಜೊತೆ_ಉಪ್ಪಿನಕಾಯಿ_ನನಗೆ_ಬೇಕೇ_ಬೇಕು
ನಮ್ಮ ಭಾಗದಲ್ಲಿ ಅಪ್ಪೆಮಿಡಿ ಕೊಯ್ದು ತಂದು ಮಾರಾಟ ಮಾಡುವ ಪ್ರಸಿದ್ಧರನ್ನು ಪೆಬ್ರುವರಿ ತಿಂಗಳಿಂದ ನೆನಪಿಸುತ್ತಿದ್ದೆ ಅವರೆಲ್ಲ ಇನ್ನೂ ಮಾವಿನ ಹೂವು ಆಗಿಲ್ಲ ಅನ್ನುತ್ತಿದ್ದರು.
ಮಾರ್ಚ್ ತಿಂಗಳಲ್ಲಿ ಪುನಃ ನೆನಪು ಮಾಡಿದಾಗ ಅವರು ಹೇಳಿದ್ದು ಈ ಬಾರಿ ಒಂದೇ ಒಂದು ಮರದಲ್ಲೂ ಮಾವಿನ ಮಿಡಿ ಬಂದಿಲ್ಲ ಸಿಕ್ಕಿದರೆ ಮೊದಲಿಗೆ ನಿಮಗೆ ತಂದು ಕೊಡದೆ ಇರುವುದಿಲ್ಲ ಅಂದರು.
ಕಳೆದ ವರ್ಷ ಮಾರ್ಚ್ ತಿಂಗಳ ಕೊನೆಯಲ್ಲಿ ಅಪ್ಪೆಮಿಡಿ ಚೆಟ್ಟು ಮಾಡಿ ಕಾರ ಹಾಕಿದ್ದ ನೆನಪು ಈ ವರ್ಷ ಏಪ್ರಿಲ್ 30 ಆದರೂ ಅಪ್ಪೆಮಿಡಿ ಇಲ್ಲ.
ಬೆಳಗಾಂ ಬಾಗದಲ್ಲಿ ಮಾವಿನ ಹಣ್ಣಿನ ತೋಟದಲ್ಲಿ ಮಾವಿನ ಹಣ್ಣು ಮಾರಾಟಕ್ಕೆ ಕಳೆದ ತಿಂಗಳೇ ಬಂದಾಗಿದೆ ಸಮೀಪದ ರಿಪ್ಪನ್ ಪೇಟೆ ಮಾವಿನ ಅಪ್ಪೆಮಿಡಿ ಮಾರಾಟದ ಕೇಂದ್ರವಾದರೂ ಅಲ್ಲಿ ಪ್ರತಿ ವರ್ಷದಂತೆ ಮಾರಾಟಕ್ಕೆ ಅಪ್ಪಿ ಮಿಡಿ ಬರುತ್ತಿಲ್ಲ.
ಪಕ್ಕದ ಜಿಲ್ಲೆಯ ಲಭ್ಯವಿರುವ ಅಪ್ಪೆಮಿಡಿ ಮಾತ್ರ ಇಲ್ಲಿಗೆ ಮಾರಾಟಕ್ಕೆ ಬರುತ್ತದೆ ಅದನ್ನು ಉಪ್ಪಿನಕಾಯಿ ತಯಾರಕರು ಖರೀದಿಸುತ್ತಿದ್ದಾರೆ ಅನ್ನುವ ವದಂತಿ ಬೇರೆ ಬಂದಿದ್ದರಿಂದ ಈ ವಷ೯ದ ಮಾವಿನ ಮಿಡಿ ಉಪ್ಪಿನಕಾಯಿ ಆಸೆ ಬಿಟ್ಟಿದ್ದೆ ಆದರೂ ಅಪ್ಪೆಮಿಡಿ ಉಪ್ಪಿನಕಾಯಿ ಅಂದರೆ ನನಗೆ ಜೀವ ಆದ್ದರಿಂದ ಅರಸಾಳು ಬಾಗದಲ್ಲಿ (ಮಾಲ್ಗುಡಿ ರೈಲ್ವೆ ಸ್ಟೇಷನ್ ಖ್ಯಾತಿಯ ಊರು) ಸಿಗುವ ಅಪ್ಪೆಮಿಡಿಗೆ ಗೆಳೆಯರಿಂದ ಹೇಗಾದರೂ ಮಾಡಿ ತಲಾಷ್ ಮಾಡಿ ಕೊಡಿಸಲು ವಿನಂತಿಸಿದ್ದೆ.
ನಿನ್ನೆ ಗೆಳೆಯರ ಸತತ ಪ್ರಯತ್ನದಿಂದ ಸ್ವಲ್ಪ ಅಪ್ಪೆಮಿಡಿ ಸಿಕ್ಕಿದೆ, ಬಹುಶಃ ಇಷ್ಟು ಶ್ರೇಷ್ಟವಾದ ಅಪ್ಪೆಮಿಡಿ ಹಿಂದಿನ ಯಾವ ವಷ೯ದಲ್ಲೂ ನನಗೆ ಸಿಕ್ಕಿರಲಿಲ್ಲ ಈ ಅಪ್ಪೆಮಿಡಿ ದೊರಕಿಸಿ ಕೊಟ್ಟ ಮಿತ್ರ ಮಂಡಳಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.
ಜೀರಿಗೆ ಅಪ್ಪೆಮಿಡಿ 15 ದಿನ ಕಾಯಿರಿ ಸಂಗ್ರಹಿಸಿ ಕೊಡುವ ಭರವಸೆಯೂ ಸಿಕ್ಕಿದೆ.
Comments
Post a Comment