#ಕೊರಾನಾ_ಲಾಕ್_ಡೌನ್_ಡೈರಿ_2020
#ಲೆಟರ್_ನOಬರ್_26
#ದಿನಾ೦ಕ_30_ಏಪ್ರಿಲ್_2020
#ಲಾಕ್_ಡೌನ್_ಭಾರತೀಯ_ಶಿಕ್ಷಣ_ವ್ಯವಸ್ಥೆ_ಸುದಾರಣೆಗೊಳಿಸೀತೆ?
ಸ್ವಾತಂತ್ರ ನಂತರ ಬೃಹತ್ ದೇಶದಲ್ಲಿ ಸವ೯ರಿಗೂ ಶಿಕ್ಷಣ ನೀಡುವ ಗುರಿ ಹೊಂದಿ ನಡೆಸಿದ ಅನೇಕ ಪ್ರಯತ್ನಗಳಿಂದ ಭಾರತ ಶಿಕ್ಷಣದಲ್ಲಿ ಕ್ರಾ೦ತಿ ಆಗಿದೆ.
ಶಿಕ್ಷಣಕ್ಕಾಗಿ ದೇಶದಲ್ಲಿ ವಿನಿಯೋಗಿಸುವ ಸಂಪನ್ಮೂಲಗಳು ಕಡಿಮೆ ಏನಲ್ಲ, ಒಂದು ಹಂತದ ಪ್ರಾಥಮಿಕ ಶಿಕ್ಷಣ ನೀಡುವುದರಲ್ಲಿ ನಮ್ಮ ಸಕಾ೯ರ ಯಶಸ್ವಿ ಆದರೂ ನಂತರದ ಹಂತದ ಶಿಕ್ಷಣದ ಗುಣಮಟ್ಟ ಕಾಪಡಿ ಕೊಳ್ಳಲು ಸಾಧ್ಯವಾಗಿಲ್ಲ.
ಇದರ ಮದ್ಯೆ ಖಾಸಾಗಿ ಶಿಕ್ಷಣ ಸಂಸ್ಥೆಗಳ ಪೈಪೋಟಿ, ಬಾಷಾ ಮಾಧ್ಯಮಗಳ ವ್ಯಾಜ್ಯ, ನ್ಯಾಯಾಲಯದ ತೀಪು೯, ಶಿಕ್ಷಣ ಇಲಾಖಾ ನೌಕರರ ಸಂಘಗಳ ಬೇಡಿಕೆ, ಶಿಕ್ಷಣಾ ಇಲಾಖಾ ಬ್ರಷ್ಟಾಚಾರಗಳು ಈ ಇಲಾಖೆಯನ್ನ ಸಸೂತ್ರವಾಗಿ ನಡೆಸಲು ಸಾಧ್ಯವಿಲ್ಲದಂತೆ ಮಾಡಿದೆ.
ಭಾರತದಲ್ಲಿ ಉನ್ನತ ಶಿಕ್ಷಣ ಪಡೆದು ವಿದೇಶದಲ್ಲಿ ಸೇವೆ ಮಾಡುವವರೆ ಭಾರತೀಯ ಶಿಕ್ಷಣ ಸರಿ ಇಲ್ಲ ಎನ್ನುತ್ತಾರೆ.
ಪರಿಕ್ಷಾ ಅಕ್ರಮ, ಮೌಲ್ಯಮಾಪನದಲ್ಲಿ ಅಕ್ರಮಗಳು ಶಿಕ್ಷಣಾ ಇಲಾಖೆಗೆ ಸವಾಲಾಗಿತ್ತು.
ಇಂತಹ ಸಂದಭ೯ದಲ್ಲಿಯೆ ಪರಿಕ್ಷಾ ಪೂವ೯ದಲ್ಲಿ ಕೊರಾನ ವೈರಸ್ ನಿಂದ ಇಡೀ ದೇಶ ಲಾಕ್ ಡೌನ್ ಮಾಡಲೇಬೇಕಾದ್ದರಿಂದ ಶಾಲೆಗಳನ್ನ ಮುಚ್ಚಬೇಕಾಯಿತು ಇದರಿಂದ ಪರೀಕ್ಷೆ ನಡೆಸಲು ಸಾಧ್ಯವಾಗಲಿಲ್ಲ ಹಾಗೆಯೆ ಲಾಕ್ ಡೌನ್ ಮು೦ದುವರಿಸಬೇಕಾದ್ದರಿ೦ದ 1ನೇ ತರಗತಿಯಿ೦ದ 9 ತರಗತಿ ವರೆಗಿನ ವಿದ್ಯಾಥಿ೯ಗಳನ್ನ ಪರೀಕ್ಷೆ ಇಲ್ಲದೆ ತೇಗ೯ಡೆ ಮಾಡಬೇಕಾಯಿತು ಬಹುಶಃ ಇಂತಹ ಕ್ರಮ ಭವಿಷ್ಯದಲ್ಲೂ ಉಹಿಸಲು ಸಾಧ್ಯವಿಲ್ಲ.
SSLC , ದ್ವಿತಿಯ ಪಿಯುಸಿ, ಪದವಿ ಕಾಲೇಜುಗಳ ಪರೀಕ್ಷೆ ಆಗಿಲ್ಲ ಆ ವಿದ್ಯಾಥಿ೯ಗಳು ಪರೀಕ್ಷೆ ಮುಗಿಸಿ ರಜೆಯ ಮೂಡಿಗೆ ಹೋಗಬೇಕಾದವರು ಇನ್ನೂ ಪರೀಕ್ಷೆ ಮೂಡಿನಲ್ಲಿ ಇದ್ದಾರೆ.
ಶಾಲೆ ಮತ್ತು ಪರೀಕ್ಷೆ ರದ್ದಾದ ಮಕ್ಕಳಿಗೆ ಇದು ರಜಾ ಮೂಡಿಗೆ ಒಯ್ದಿಲ್ಲ ಯಾಕೆಂದರೆ ಬಯಲಲ್ಲಿ ಆಟಾಟೋಪ, ಸಿನಿಮಾ, ಪ್ರವಾಸದ ಮೋಜು ಮಸ್ತಿ ಅವರಿಗಿಲ್ಲವಾದ್ದರಿಂದ.
ಕೊರಾನಾ ವೈರಸ್ ನಿಂದ ಭಾರತೀಯ ಶಿಕ್ಷಣದಲ್ಲಿ ಸಮಗ್ರ ಬದಲಾವಣೆಯ ಗಾಳಿ ಬೀಸಿದೆ, ಒಂದು ಹಂತದವರೆಗಿನ ಪರೀಕ್ಷೆ ಮುಕ್ತ ಶಿಕ್ಷಣ, ಶಾಲೆಗೆ ಹೋಗದೆ ಆನ್ಲೈನ್ ಶಿಕ್ಷಣ ವ್ಯವಸ್ಥೆ ಮುಂತಾದನ್ನ ಅಳವಡಿಸುವ ಸಾಧ್ಯತೆಗಳು ಇವೆ.
ಶಿಕ್ಷಣ ಇಲಾಖೆಯಲ್ಲಿ ಸಣ್ಣ ಉತ್ತಮ ಬದಲಾವಣೆಗೂ ಅಡ್ಡಗಾಲು ಹಾಕುತ್ತಿತ್ತ ಖಾಸಾಗಿ ಶಿಕ್ಷಣ ಸಂಸ್ಥೆಗಳ ಲಾಬಿ ನಿಯ೦ತ್ರಣಕ್ಕೆ ಬರಲಿದೆ.
ಕೊರಾನ ವೈರಸ್ ದೇಶದ ಶಿಕ್ಷಣ ಇಲಾಖೆಯ ಕೊಳೆ ತೊಳೆಯುವ ಎಲ್ಲಾ ಸಾಧ್ಯತೆ ಇದೆ.
Comments
Post a Comment