Blog number 1409. ಲೋಕಸಭೆಯಿಂದ ತಾಲ್ಲೂಕ್ ಪಂಚಾಯ್ತಿಯ ತನಕ ಜಾತ್ಯಾತೀತ ಜನತಾದಳದ ಅಭ್ಯರ್ಥಿಗಳಿಗೆ ಬಿ ಪಾರಂಗೆ ಇವತ್ತಿಗೂ ಸಹಿ ಮಾಡುವ ಅಧಿಕಾರ ಹೆಚ್.ಡಿ.ದೇವೇಗೌಡರು ಕಾಯ್ದಿರಿಸಿದ್ದಾರೆ, ಹಾಗಾದರೆ ಬಿ ಪಾರಂ ಎಂದರೇನು ?
#ಪ್ರತಿ_ಚುನಾವಣೆಯಲ್ಲಿ_ಮುನ್ನೋಲೆಗೆ_ಬರುವ_ಬಿ_ಪಾರಂ
#ಬಿ_ಪಾರಂ_ಎಂದರೆ_ಏನು?
#ರಾಜಕಾರಣದ_ಚಾಣಕ್ಯ_ದೇವೇಗೌಡರು_ಇವತ್ತಿಗೂ_ಬಿ_ಪಾರಂ_ಸಹಿ_ಮಾಡುತ್ತಾರೆ.
#ಲೋಕ_ಸಭೆಯಿ೦ದ_ತಾಲ್ಲೂಕ್_ಪಂಚಾಯತ್_ತನಕ_ದೇವೇಗೌಡರೇ_ಬಿ_ಪಾರಂ_ನೀಡುತ್ತಾರೆ.
#ರಾಜಕೀಯ_ಪಕ್ಷಗಳ_ಅಭ್ಯರ್ಥಿಗಳು_ನಾಮಪತ್ರ_ಸಲ್ಲಿಕೆಯ_ದಿನ_ಬಿ_ಪಾರಂ_ಲಗತ್ತಿಸಲೇ_ಬೇಕು
#ಬಿ_ಪಾರಂಗೆ_ಅಭ್ಯರ್ಥಿಗಳು_ಪೂಜೆ_ಮಾಡಿಸುತ್ತಾರೆ.
#ರಾಜಕೀಯ_ಪಕ್ಷದ_ಅಧಿಕೃತ_ಅಭ್ಯರ್ಥಿ_ಎಂದು_ಸಾಕ್ಷಿಕರಿಸುವುದು_ಬಿ_ಪಾರ೦
#ಪಕ್ಷದ_ಅಧಿಕೃತ_ಚುನಾವಣಾ_ಚಿಹ್ನೆ_ಬಳಸುವ_ಅನುಮತಿ_ಪತ್ರ
ವಿಧಾನಸಭಾ ಚುನಾವಣೆಗೆ ನಿನ್ನೆಯಿಂದ ನಾಮ ಪತ್ರ ಸಲ್ಲಿಸಲು ಪ್ರಾರಂಭವಾಗಿದೆ ನಾಳೆಯಿಂದ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ ಅದಕ್ಕಾಗಿ ಆಯಾ ರಾಜಕೀಯ ಪಕ್ಷಗಳು ಬಿ ಪಾರಂ ವಿತರಣೆ ಪ್ರಾರಂಭ ಮಾಡಿದೆ.
ಭಾರತೀಯ ಜನತಾ ಪಕ್ಷ ಬಿ ಪಾರಂಗಳನ್ನು ಆಯಾ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಜಿಲ್ಲಾ ಅಧ್ಯಕ್ಷರಿಂದ ಅಭ್ಯರ್ಥಿಗಳಿಗೆ ವಿತರಿಸುತ್ತಿದೆ, ನಾಳೆ ಸಾಗರ ವಿಧಾನಸಭಾ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ನಾಮಪತ್ರ ಸಲ್ಲಿಸಲಿದ್ದಾರೆ ಅದಕ್ಕಾಗಿ ಇವತ್ತು ಬೆಳಿಗ್ಗೆ ಶಿವಮೊಗ್ಗ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಮೇಘರಾಜರಿಂದ ಬಿ ಪಾರಂ ಪಡೆದು ವಿವಿದ ದೇವಾಲಯಕ್ಕೆ ಹೋಗಿ ಬಿ ಪಾರಂ ದೇವರ ಎದುರು ಇಟ್ಟು ಪೂಜೆ ಮಾಡಿಸಿದ್ದಾರೆ.
ಕಾ೦ಗ್ರೇಸ್ ಪಕ್ಷ ರಾಜ್ಯದಾದ್ಯಂತ ವಿಧಾನ ಸಭೆಗೆ ಸ್ಪರ್ದೆ ಮಾಡುವ ತನ್ನ ಅಭ್ಯರ್ಥಿಗಳಿಗೆ ಬೆಂಗಳೂರಿನ ಪಕ್ಷದ ಕಛೇರಿಯಲ್ಲಿ ರಾಜ್ಯ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಸ್ತದಿಂದಲೇ ಬಿ ಪಾರಂ ಪಡೆಯಬೇಕಾಗಿದೆ ಆದ್ದರಿಂದ ಸಾಗರ ವಿಧಾನಸಭಾ ಕಾಂಗ್ರೇಸ್ ಅಭ್ಯರ್ಥಿಗಳಾದ ಬೇಳೂರು ಗೋಪಾಲಕೃಷ್ಣ ಇವತ್ತು ಡಿ.ಕೆ.ಶಿವಕುಮಾರರಿಂದ ಬಿ ಪಾರಂ ಪಡೆದಿದ್ದಾರೆ.
ಖ್ಯಾತ ಹೈಕೋರ್ಟ್ ವಕೀಲರಾದ ದಿವಾಕರ್ ಆಮ್ ಆದ್ಮಿ ಪಕ್ಷದಿಂದ ನಾಮಪತ್ರ ಸಲ್ಲಿಸಲಿದ್ದಾರೆ ಅವರು ಅವರ ಪಕ್ಷದ ಬಿ ಪಾರಂ ಪಡೆದಿದ್ದಾರೆ.
ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ಮಾಜಿ ಅಧ್ಯಕ್ಷರಾದ ತೀನಾ. ಶ್ರೀನಿವಾಸ್ ಪಕ್ಷೇತರರಾಗಿ ನಾಮ ಪತ್ರ ಸಲ್ಲಿಸಿದ್ದಾರೆ ಪಕ್ಷೇತರ ಅಭ್ಯರ್ಥಿಗಳು ಬಿ ಪಾರಂ ಸಲ್ಲಿಸಬೇಕಾಗಿಲ್ಲ ಅವರು ಚುನಾವಣೆಗೆ ಲಭ್ಯವಿರುವ ಚಿಹ್ನೆಗಳಲ್ಲಿ ಸೂಚಿಸಿದ ಮೂರು ಚಿಹ್ನೆಯಲ್ಲಿ ಒಂದನ್ನು ಪಡೆಯುತ್ತಾರೆ.
ಇದರಲ್ಲಿ ಅಧಿಕೃತ ಅಭ್ಯರ್ಥಿ ನಾಮಪತ್ರ ಸ್ವೀಕೃತವಾಗದಿದ್ದರೆ ಅವರಿಗೆ ಪಕ್ಷದ ಚಿಹ್ನೆ ಚುನಾವಣಾ ಅಧಿಕಾರಿಗಳು ನೀಡುವುದಿಲ್ಲ ಸದರಿ ಬಿ ಪಾರಂನಲ್ಲಿ ಬದಲಿ ಅಭ್ಯರ್ಥಿ ಹೆಸರೂ ನಮೂದಿಸಬಹುದಾಗಿದೆ, ನಾಮ ಪತ್ರ ಸ್ವೀಕಾರವಾದರೆ ಆ ಪಕ್ಷದ ಅಧಿಕೃತ ಚುನಾವಣಾ ಚಿಹ್ನೆ ಅಭ್ಯರ್ಥಿಗೆ ಬಳಸುವ ಅವಕಾಶ ಸಿಗುತ್ತದೆ, ಆಯಾ ರಾಜಕೀಯ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಎನ್ನುವುದನ್ನು ಪಾರಂ ಬಿ ಸಾಕ್ಷೀಕರಿಸುತ್ತದೆ ಮತ್ತು ಆ ಪಕ್ಷಕ್ಕೆ ಮೀಸಲಿಟ್ಟ ಚಿಹ್ನೆ ಈ ಬಿ- ಪಾರಂ ನೀಡಿದ ಅಭ್ಯರ್ಥಿಗೆ ಚುನಾವಣಾ ಆಯೋಗ ನೀಡುತ್ತದೆ.
ಇಂತಹ ಬಿ ಪಾರಂಗಾಗಿಯೇ ಅಭ್ಯರ್ಥಿಗಳು ಆಯಾ ರಾಜಕೀಯ ಪಕ್ಷದಲ್ಲಿ ಹೋರಾಟ ಮಾಡುತ್ತಾರೆ.
ಜಾತ್ಯಾತೀತ ಜನತಾದಳದ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರು ಪಕ್ಷ ಸ್ಥಾಪನೆ ಮಾಡಿದ ದಿನದಿಂದ ಇವತ್ತಿನ ವರೆಗೂ ಪಕ್ಷದ ಅಭ್ಯರ್ಥಿಗಳಿಗೆ ಬಿ ಪಾರಂ ಸಹಿ ಮಾಡುವ ಅಧಿಕಾರ ಅವರೇ ಇಟ್ಟುಕೊಂಡಿದ್ದಾರೆ!? ಲೋಕಸಭೆ, ವಿಧಾನಸಭೆ, ವಿಧಾನ ಪರಿಷತ್ ನಿಂದ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕ್ ಪಂಚಾಯ್ತಿಯ ತನಕದ ಬಿ ಪಾರಂ ನೀಡುವವರು ದೇವೇಗೌಡರು ಮಾತ್ರ.
ಕುಮಾರಸ್ವಾಮಿ, ರೇವಣ್ಣ, ರಾಜ್ಯದ್ಯಾಕ್ಷ ಇಬ್ರಾಹಿಂ ಸಾಹೇಬರಿಗೂ ಈ ಅಧಿಕಾರ ಇಲ್ಲ ಈ ರೀತಿ ದೇವೇಗೌಡರು ಅವರೇ ಸ್ಥಾಪಿಸಿದ ರಾಜಕೀಯ ಪಕ್ಷದ ಲಗಾಮು ಹಿಡಿದಿಡದಿದ್ದರೆ ಅವರ ಮಕ್ಕಳು ದೇವೇಗೌಡರನ್ನು ಯಾವಾಗಲೋ ಮೂಲೆಗೆ ಸೇರಿಸಿ ಬಿಡುತ್ತಿದ್ದರೆಂಬ ಹಾಸ್ಯದ ಮಾತು ರಾಜಕೀಯ ವಲಯದಲ್ಲಿದೆ ಅದು ವಾಸ್ತವ ಕೂಡ ಆದ್ದರಿಂದಲೇ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಕುಮಾರ್ ಸ್ಟಾಮಿ ಘೋಷಣೆ ಮಾಡಿದ ಅಭ್ಯರ್ಥಿ ಬದಲಿಸಿ ತಮ್ಮ ಶಿಷ್ಯ ಕಾಂಗ್ರೇಸ್ ಸೇರಿ ಆ ಪಕ್ಷದ ಟಿಕೇಟು ವಂಚಿತ ದತ್ತಣ್ಣರಿಗೆ ದೇವೇಗೌಡರು ತಮ್ಮ ಪುತ್ರ ಕುಮಾರ್ ಸ್ಟಾಮಿ ವಿರೋದವಿದ್ದರೂ ಬಿ ಪಾರಂ ನೀಡಿದ್ದಾರೆ.
Comments
Post a Comment