#ಶ್ರದ್ದಾ೦ಜಲಿಗಳು.
ಗೆಳೆಯ ಖ್ಯಾತ ಆಕ೯ಟೆಕ್ಟ್ ಇಂಜಿನಿಯರ್, ಬೆಂಗಳೂರು ಸೆಂಟ್ರಲ್ ಜೈಲ್, ಕೊಲ್ಲೂರು ಮುಕಾಂಬಿಕ ದೇವಾಲಯಗಳಲ್ಲಿನ ವಿನ್ಯಾಸದ ಕೆಲಸ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರ ಮನೆ ಹೀಗೆ ಸಾಲು ಸಾಲು ಹೈಟೆಕ್ ಮನೆಗಳನ್ನ ನಿಮಿ೯ಸುತ್ತಿದ್ದ ಬೆಂಗಳೂರು ಮಹಾಲಕ್ಷ್ಮಿ ಲೇ ಔಟ್ ನಲ್ಲಿ ಸ್ವಂತ ಕಟ್ಟಡದ ಕಛೇರಿ ಹೊಂದಿದ್ದ ವಸಂತ ಕುಮಾರ್ ನಿನ್ನೆ ಕೊರಾನಾ ಎರಡನೆ ಅಲೆಗೆ ಚಿಕ್ಕ ವಯಸ್ಸಲ್ಲಿ ಬಲಿಯಾಗಿದ್ದಾರೆ.
ಪ್ರತಿ ತಿಂಗಳ ಹುಣ್ಣಿಮೆಯಲ್ಲಿ ಕೊಲ್ಲೂರಿನ ಮುಕಾಂಬಿಕ ದೇವಾಲಯದಲ್ಲಿ ಉತ್ಸವ ಪೂಜೆಯಲ್ಲಿ ತಪ್ಪದೇ ಭಾಗವಹಿಸುತ್ತಿದ್ದರು, ನಾನು ಒಂದೆರೆಡು ಬಾರಿ ಅವರೊಡನೆ ಹೋಗಿದ್ದೆ.
ಕಾಫಿ ಪ್ರಿಯರು ಒಮ್ಮೆಗೆ 500 ML ಕಾಫಿ ಬೇಕೇ ಬೇಕು ಇವರಿಗೆ, ಇವರ ಒಡನಾಟದಲ್ಲಿ ಅನೇಕ ಬಾರಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಮಧ್ಯಾಹ್ನದ ಊಟ ಮಾಡಿದ್ದು ಈಗ ನೆನಪು ಮಾತ್ರ.
ಇವರ ಆತ್ಮಕ್ಕೆ ಸದ್ಗತಿ, ಸ್ವರ್ಗ ಪ್ರಾಪ್ತಿ ದೊರೆಯಲೆಂದು ದೇವರಲ್ಲಿ ಪ್ರಾಥಿ೯ಸುತ್ತೇನೆ
#ಕೊರಾನಾ_ಎರಡನೆಅಲೆ_ಬಗ್ಗೆ_ಹೆಚ್ಚು_ಜಾಗೃತಿವಹಿಸಬೇಕು
Comments
Post a Comment