#ಮೂರು_ವರ್ಷದಲ್ಲಿ_ಮರೆತೇ_ಹೋದ_ಘಟನೆಗಳು...
#ಕೊರಾನಾ_ಲಾಕ್_ಡೌನ್_ಡೈರಿ_2020
#ಲೆಟರ್_ನOಬರ್_25
#ದಿನಾ೦ಕ_28_ಏಪ್ರಿಲ್_2020
#ಭಾರತೀಯ_ರೈಲ್ವೇ
#ಕೊರಾನಾ_ವೈರಸ್
#ದೀರ್ಘ_ಕಾಲದ_ರೈಲು_ಸ್ಥಗಿತ
ಬಾರತದಲ್ಲಿ ರೈಲು ಇಷ್ಟು ದೀಘ೯ಕಾಲ ಇಡೀ ದೇಶದಲ್ಲಿ ಸ್ಥಗಿತವಾಗಿರುವುದು ಇದೇ ಮೊದಲ ಸಲ.
13 ಲಕ್ಷಕ್ಕಿ೦ತ ಹೆಚ್ಚು ಉದ್ಯೋಗಸ್ಥರು ಭಾರತೀಯ ರೈಲ್ವೆಯಲ್ಲಿ ಕೆಲಸ ನಿವ೯ಹಿಸುತ್ತಾರೆ, ಪರೋಕ್ಷವಾಗಿ ಅಷ್ಟೇ ಜನರಿಗೆ ಒಂದಲ್ಲ ಒಂದು ರೀತಿ ಭಾರತೀಯ ರೈಲ್ವೆಯ ಪಯಾ೯ಯ ಉದ್ಯೋಗ ಲಭಿಸಿದೆ.
ಸುಮಾರು 7500 ರೈಲು ನಿಲ್ದಾಣದ ಮೂಲಕ ಇಡೀ ಭಾರತವನ್ನ ಜೋಡಿಸಿರುವ ರೈಲು ಭಾರತೀಯರ ಜೀವನಾಡಿ ಆಗಿದೆ.
ಸುಮಾರು ವಾಷಿ೯ಕ 2 ಲಕ್ಷ ಕೋಟಿ ಆದಾಯ ತರುವ ಈ ಸಕಾ೯ರಿ ಸಂಸ್ಥೆ ಅತಿ ಕಡಿಮೆ ಹಣದಲ್ಲಿ ಜನ ಸಂಚಾರಕ್ಕೆ ಅನುವು ಮಾಡಿದೆ.
ಕನ್ಯಾಕುಮಾರಿಯಿ೦ದ ಕಾಶ್ಮಿರದ ಜಮ್ಮು ತಾವಿ ರೈಲು ನಿಲ್ದಾಣಕ್ಕೆ ಸುಮಾರು 400O ಕಿ.ಮಿ. ಕೇವಲ ರೂ 1270 ರಲ್ಲಿ ಪ್ರಯಾಣಿಸ ಬಹುದೆ೦ದರೆ ಬಾರತೀಯ ರೈಲ್ವೆ ಅಷ್ಟು ಜನ ಸ್ನೇಹಿ.
ವಿದ್ಯಾಥಿ೯ಗಳಿಗೆ, ಅಂಗವಿಕಲರಿಗೆ, ಚಿಕಿತ್ಸೆಗೆ ಹೋಗುವ ರೋಗಿಗಳಿಗೆ, ವೃದ್ದರಿಗೆ ಬಾರೀ ರಿಯಾಯಿತಿ ಇದೆ.
ಇಂತಹ ಭಾರತೀಯ ರೈಲನ್ನು ಕೊರಾನಾದಂತ ಕಣ್ಣಿಗೆ ಕಾಣದ ವೈರಸ್ ಸಂಪೂಣ೯ ನಿಲ್ಲಿಸಿದೆ ಅಂದರೆ ಯೋಚಿಸಲು ಸಾಧ್ಯವಿಲ್ಲ.
ಪ್ರತಿ ದಿನ ಕೇಂದ್ರ ಸಕಾ೯ರಕ್ಕೆ ಒಂದು ಅಂದಾಜಿನಂತೆ 600 ರಿಂದ 700 ಕೋಟಿ ನಷ್ಟ ಉoಟಾಗುತ್ತಿದೆ.
ಅದೇನೆ ಇರಲಿ ರೈಲು ರದ್ದು ಮಾಡದಿದ್ದರೆ ಈ ಸಾ೦ಕ್ರಮಿಕ ರೋಗ ಹದ್ದು ಮೀರಿ ಹೋಗುತ್ತಿತ್ತು ಅನ್ನುವುದರಲ್ಲಿ ಅನುಮಾನವಿಲ್ಲ.
ರೈಲು ಬಂದರೆ ಪ್ಲೇಗ್ ಬರುತ್ತದೆ ಎಂಬ ಭಯ ಸ್ವಾತಂತ್ರ ಪೂವ೯ದಲ್ಲೂ ಇತ್ತು ಇದರಿಂದ ತಮ್ಮ ಊರಿಗೆ ರೈಲು ಬೇಡ ಅಂತ ಗ್ರಾಮಸ್ಥರು ತಮ್ಮ ಊರಿಗೆ ಬೇಟಿ ನೀಡಿದ ಅಧಿಕಾರಿಗಳಿಗೆ ಮನವಿ ಮಾಡುತ್ತಾರೆ, 50 ವಷ೯ದ ಹಿಂದೆ ಶಿಕಾರಿಗಾಗಿ ಲಾರ್ಡ್ ರಿಪ್ಪನ್ ಈ ಊರಲ್ಲಿ ತಂಗಿದ್ದ ನೆನಪಿಗಾಗಿ ಈ ಊರಿನ ಹೆಸರನ್ನ ರಿಪ್ಪನ್ ಪೇಟೆ ಎಂದು ಪುನರ್ ನಾಮಕರಣ ಮಾಡಿದ್ದು ಇದರಿ೦ದಲೇ ಶಿವಮೊಗ್ಗ ತಾಳಗುಪ್ಪ ರೈಲು ಮಾಗ೯ ಪುನರ್ ಸಮೀಕ್ಷೆ ಮಾಡಿ ಅರಸಾಳಿನಿಂದ ಆನಂದಪುರಕ್ಕೆ ರಿಪ್ಪನ್ ಪೇಟೆ ಸಂಪಕ೯ ತಪ್ಪಿಸಲಾಯಿತು ಎಂಬ ಐತಿಹಾಸಿಕ ಘಟನೆಯ ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನಲ್ಲಿದೆ.
ಇಡೀ ದೇಶದ ಜನ ಸಂಚಾರ ಮತ್ತು ಸರಕು ಸಾಗಾಣಿಕೆಯಲ್ಲಿ, ಸಕಾ೯ರದ ಆಥಿ೯ಕ ನಷ್ಟಕ್ಕೆ ದೊಡ್ಡ ಹೊಡೆತವಾದರೂ ರೈಲು ಸಂಚಾರ ಸ್ಥಬ್ದ ಆಗಿರುವುದರಿ೦ದ ಕೊರಾನ ವೈರಸ್ ಸಾಂಕ್ರಮಿಕವಾಗಿ ದೊಡ್ಡ ಪ್ರಮಾಣದಲ್ಲಿ ಹರಡುವುದು ಮಾತ್ರ ನಿಯಂತ್ರಣ ಆಗಿರುವುದು ಅಷ್ಟೇ ಸತ್ಯ.
Comments
Post a Comment