#ಶ್ರದ್ದಾಂಜಲಿಗಳು
#ನಾರಿ_ನಾರಾಯಣಪ್ಪ_ಹಾರ್ನಳ್ಳಿ
#ಮಾಜಿ_ಮಂಡಲ್_ಪಂಚಾಯತ್_ಸದಸ್ಯರು_ಯಡೇಹಳ್ಳಿ
#ಮಿತಬಾಷಿ_ಶ್ರಮಜೀವಿ_ಸಜ್ಜನ_ಕೃಷಿಕರು.
1985 ರಿಂದ 2000 ಇಸವಿ ತನಕ ನಾನು ನಮ್ಮ ಶ್ರೀ ಕೃಷ್ಣ ರೈಸ್ ಮಿಲ್ ಅಕ್ಕಿ ಗಿರಣಿ ಮಾಲಿಕ ಆಗ ಆನಂದಪುರಂ ಹೋಬಳಿ, ಪಕ್ಕದ ಹೊಸನಗರ ತಾಲ್ಲೂಕಿನ ಹರತಾಳು, ನಂಜವಳ್ಳಿ, ಹುಣಸಳ್ಳಿ, ನವಟೂರು, ಹಾಲುಗುಡ್ಡೆ, ಮಾದಾಪುರ ಈ ಕಡೆ ಶಿವಮೊಗ್ಗ ತಾಲ್ಲೂಕಿನ ಕುಣೇಹೊಸೂರು, ಸನ್ನಿ ವಾಸ, ತುಪ್ಪೂರು, ಬ್ಯಾಡನಳ್ಳ, ಚೊಡನಳ್ಳಗಳ ರೈತರು ತಾವು ಬೆಳೆದ ಭತ್ತ ತಂದು ನಮ್ಮ ಅಕ್ಕಿ ಗಿರಣಿಯಲ್ಲಿ ಅಕ್ಕಿ ಮಾಡಿ ಕೊಂಡು ಹೋಗುತ್ತಿದ್ದರು ಆದ್ದರಿಂದ ಈ ಪ್ರದೇಶದ ಪ್ರತಿ ಮನೆಗಳ ಒಡನಾಟವಿತ್ತು.
ಆ ಕಾಲದಲ್ಲಿ ಹೊಸೂರು ಗ್ರಾಮದ ಹಂದಿಗ ಹಾರ್ನಳ್ಳಿ ಭಾಗದ ನಾರೀ ನಾರಾಯಣಪ್ಪರ ಕುಟುಂಬ ದೊಡ್ಡದು ಇವರ ತಂದೆ ಮತ್ತು ಅವರ ಸಹೋದರರಾದ ಇವರ ಚಿಕ್ಕಪ್ಪಂದಿರೆಲ್ಲ ಸೇರಿದ ನೂರಕ್ಕೂ ಹೆಚ್ಚಿನ ಅವಿಭಕ್ತ ಕುಟುಂಬ, ದೊಡ್ಡದಾದ ಕೆಲವು ಅಂಕಣದ ಹುಲ್ಲಿನ ಮನೆ, ನೂರಾರು ದನ, ಎಮ್ಮೆಗಳು, ಎತ್ತು, ಕೋಣಗಳು, ಎತ್ತಿನಗಾಡಿಗಳು ಮತ್ತು ಈ ದೊಡ್ಡ ಕುಟುಂಬದ ಅಕ್ಷಯ ಪಾತ್ರೆಯಂತ ಭತ್ತ ಬೆಳೆಯುವ ಜಮೀನುಗಳು.
ಇಂತಹ ದೊಡ್ಡ ಕುಟುಂಬದ ಯಜಮಾನಿಕೆ ಇವರ ತಂದೆ ನಂತರ ಸಣ್ಣ ವಯಸ್ಸಲ್ಲೇ ನಾರೀ ನಾರಾಯಣಪ್ಪರಿಗೆ ಇವರ ನಾರೀಮನೆತನದ ಇವರ ದೊಡ್ಡಪ್ಪ ಚಿಕ್ಕಪ್ಪಂದಿರು ವಹಿಸಿಕೊಟ್ಟರು.
ಮಿತ ಬಾಷಿ, ಶ್ರಮಜೀವಿ, ಕೃಷಿಕರಾದ ನಾರೀ ನಾರಾಯಣಪ್ಪ ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸಿದರು ಇವರು ಸತ್ಯವಂತರು ನ್ಯಾಯದ ಪಕ್ಷಪಾತಿಗಳೆಂದೇ ನಮ್ಮ ಭಾಗದಲ್ಲಿ ಹೆಸರಾದವರು ಆದ್ದರಿಂದಲೇ ಇವರನ್ನು ಹೊಸೂರು - ಯಡೇಹಳ್ಳಿ ಸೇರಿದ ಯಡೇಹಳ್ಳಿ ಮಂಡಲ್ ಪಂಚಾಯಿತನ ಸದಸ್ಯರಿಗೆ ಜನ ಆಯ್ಕೆ ಮಾಡಿದ್ದರು.
ಯಡೇಹಳ್ಳಿ ಮಂಡಲ್ ಪಂಚಾಯಿತಿ ಅಧ್ಯಕ್ಷರ ಆಯ್ಕೆ ಮಾಡುವ ಸಲುವಾಗಿ ನನ್ನ ಇವರ ಒಡನಾಟ ಹೆಚ್ಚು ಆತ್ಮಿಯವಾಯಿತು ಈ ಸಂದರ್ಭದಲ್ಲಿ ನಾರೀ ನಾರಾಯಣಪ್ಪನವರು ಮಂಡಲ್ ಪಂಚಾಯಿತಿ ಅಧ್ಯಕ್ಷರಾಗಲು ಬೇಕಾದ ಅಹ೯ತೆ ಮತ್ತು ಬೇಕಾದ ಸದಸ್ಯ ಬಲದಲ್ಲಿ ನನ್ನ ಪ್ರಭಾವದ ಮೂವರು ಸೇರಿ ನಾರೀ ನಾರಾಯಣಪ್ಪ ಸುಲಭವಾಗಿ ಅಧ್ಯಕ್ಷರಾಗುತ್ತಿದ್ದರು.
ನಾನು ಮತ್ತು ಆಗಿನ ಅಡೂರು ವಿಲೇಜ್ ಪಂಚಾಯತ್ ನ ನಿರಂತರ 30 ವರ್ಷದ ಛೇರ್ಮನ್ ಆಗಿದ್ದ ಸೊರಗುಂದದ ಈರನಾಯ್ಕರು ನಾರೀ ನಾರಾಯಣಪ್ಪನವರೇ ಅಧ್ಯಕ್ಷರಾಗಲಿ ಅಂತ ಒತ್ತಾಯಿಸಿದರೂ ನಾರೀ ನಾರಾಯಣಪ್ಪ ಒಪ್ಪಲಿಲ್ಲ, ತಮ್ಮ ದೀವರ ಸಮಾಜದ ಪದವೀದರ ಯುವಕ ಕೋವಿ ನಾರಾಯಣಪ್ಪರನ್ನೇ ಅಧ್ಯಕ್ಷರನ್ನಾಗಿಸಲು ತಮಗೆ ಅನಾಯಾಸವಾಗಿ ಒದಗಿ ಬಂದ ಮಂಡಲ್ ಪಂಚಾಯತ್ ಅಧ್ಯಕ್ಷ ಸ್ಥಾನ ತ್ಯಾಗ ಮಾಡಿದವರು ನಾರೀ ನಾರಾಯಣಪ್ಪ.
ನಂತರ ಕೃಷಿಯಲ್ಲಿ ಅಭಿವೃಧ್ಧಿ ಮಾಡುತ್ತಾ ತಮ್ಮಂದಿರಿಗೆ ವ್ಯವಸಾಯದ ಜೊತೆ ಟೈಲರಿಂಗ್ - ವ್ಯಾಪಾರ ಇತ್ಯಾದಿ ಮಾಡಲು ಪ್ರೋತ್ಸಾಹಿಸಿ ನಂತರ ಇಡೀ ಕುಟುಂಬಕ್ಕೆ ಆಸ್ತಿ ಸರಿ ಪಾಲು ಹಿಸ್ಸೆ ಮಾಡಿದರು ಈಗ ನಾರೀಯವರ ಇಡೀ ಕುಟುಂಬ ಪ್ರಾಮಾಣಿಕ ಹಾಗೂ ಶ್ರಮದ ಕೃಷಿಯಿಂದ ಅಡಿಕೆ ಶುಂಠಿ ಇತ್ಯಾದಿ ವಾಣಿಜ್ಯ ಬೆಳೆಗಳಿಂದ ಎಲ್ಲರೂ ಶ್ರೀಮಂತರೇ ಆಗಿದ್ದಾರೆ.
ನಾರೀ ನಾರಾಯಣಪ್ಪರ ಹಿರಿಯ ಪುತ್ರ ನಾರೀ ಲೋಕಪ್ಪ ನನ್ನ ಶಿಷ್ಯ ಕೂಡ ನಿರಂತರವಾಗಿ ನಮ್ಮ ಯಡೇಹಳ್ಳಿ ಗ್ರಾಮ ಪಂಚಾಯತ್ ಸದಸ್ಯರು ಇವರ ತಮ್ಮ೦ದಿರುಗಳಾದ ನಾರಿ ಗೋಪಾಲ ಸೇರಿ ಬಾಳೆ-ಅಡಿಕೆ ತೋಟಗಳನ್ನು ವಿಸ್ತರಿಸಿದ್ದಾರೆ, ಸ್ವಂತ ಪಿಕ ಅಪ್ ಮಾಡಿ ಬಾಳೆ ಕಾಯಿ ಮಂಗಳೂರು ಮಾರುಕಟ್ಟೆಗೆ ಮಾರಾಟ ಮಾಡುತ್ತಾರೆ.
ನಿನ್ನೆ ನಾರಿ ಗೋಪಾಲ ಪೋನ್ ಮಾಡಿ 5 ನೇ ತಾರೀಖಿನಂದು ನಾರೀ ನಾರಾಯಣಪ್ಪ ಇಹಲೋಕ ತ್ಯಜಿಸಿದ ಶೋಖ ಸಮಚಾರ ತಿಳಿಯಿತು ನಾರೀ ನಾರಾಯಣಪ್ಪರ ಒಡನಾಟವೇ ನನಗೂ ರಾಜಕೀಯ ಕ್ಷೇತ್ರ ಪ್ರವೇಶಕ್ಕೆ ಕಾರಣವಾಗಿತ್ತು.
ನಾರೀ ನಾರಾಯಣಪ್ಪ ಇನ್ನು ನೆನಪು ಮಾತ್ರ ಅವರಿಗೆ ದೇವರು ಸದ್ಗತಿ ಸ್ವರ್ಗ ಪ್ರಾಪ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
Comments
Post a Comment