Blog number 1028.70 ದಶಕದಲ್ಲಿ ಸಾಗರದ ಕ್ರಿಕೆಟ್ ಜಗತ್ತಿನ ಐಕಾನ್ ನಾಗೇಂದ್ರ ಪಂಡಿತ್ ಸಾಗರದ ಅವರ ಕ್ರಿಕೇಟ್ ಅಕಾಡೆಮಿಯಲ್ಲಿ ಅತ್ಯುತ್ತಮ ತರಬೇತಿ ನೀಡಿ ಉದಯೋನ್ಮುಖ ಕ್ರಿಕೆಟ್ ಆಟಗಾರರನ್ನು ತಯಾರಿ ಮಾಡುತ್ತಿದ್ದಾರೆ.
ಸಾಗರದ ಒಂದು ಕಾಲದ ಯುವ ಐಕಾನ್ ನಾಗೇ೦ದ್ರ ಪಂಡಿತರಿಂದ ಎರಡನೆ ಇನಿ೦ಗ್ಸ್ ನಾಗೇ೦ದ್ರ ಪ೦ಡಿತ್ ಕ್ರಿಕೇಟ್ ಆಕಾಡಮಿ ಸಾಗರ ಒಂದು ಕಾಲದಲ್ಲಿ ಅಂದರೆ 1975ರಿಂದ 1980ರಲ್ಲಿ ಸಾಗರದಲ್ಲಿ ಲೆದರ್ ಬಾಲ್ ಕ್ರಿಕೆಟ್ ಹವಾ ಜೋರಾಗಿತ್ತು ಅದರಲ್ಲೂ ಎಲ್.ಬಿ. ಕಾಲೇಜಿನ ನಾಗೇ೦ದ್ರಪಂಡಿತರೆಂದರೆ ಸಾಗರದ ಗಾವಸ್ಕರ್, ಸಿನಿಮಾ ನಟರಂತೆ ಸುಂದರಾಂಗ, ಯುನಿವಸಿ೯ಟಿ ಕೋಟ್ ಪಡೆದ ಏಕೈಕ ಕ್ರಿಕೆಟ್ ಆಟಗಾರ. ನಾವೆಲ್ಲ 1978 ರಲ್ಲಿ ರೈಲಿನಲ್ಲಿ ಸಾಗರದ ಮುನ್ಸಿಪಲ್ ಹೈಸ್ಕೂಲಿಗೆ 8ನೇ ತರಗತಿಗೆ ಹೋಗುತ್ತಿದ್ದರು ನಾಗೇ೦ದ್ರ ಪಂಡಿತರ ಬ್ಯಾಟಿಂಗ್ ನೋಡಲು ಎಲ್.ಬಿ. ಕಾಲೇಜಿನ ಕ್ರಿಡಾ೦ಗಣಕ್ಕೆ ನಡೆದು ಹೋಗುತ್ತಿದ್ದೆವು, ಅವರ ಬ್ಯಾಟಿಂಗ್ ಸ್ಟೈಲ್ ಹಾಗಿತ್ತು, ಬೌ೦ಡರಿ ಸಿಕ್ಸ್ ರ್ ಗಳ ಸುರಿಮಳೆ. ಭಾರತದ ರಾಷ್ಟ್ರಿಯ ಕ್ರಿಕೆಟ್ ಆಟಗಾರರಾಗಿ ಆಯ್ಕೆ ಆಗುವಂತ ಅವಕಾಶದಿ೦ದ ವಂಚಿತರಾಗಿದ್ದು ದುರಾದೃಷ್ಟ. ಈಗ UAE ಯ ಅಬುದಾಬಿಯ Exchage ನಲ್ಲಿ ಉಪಾಧ್ಯಕ್ಷರಾಗಿ ಪ್ರತಿಷ್ಟಿತ ದೊಡ್ದ ಹುದ್ದೆಯಲ್ಲಿದ್ದಾರೆ ಆದರೂ ತಮ್ಮ ಹುಟ್ಟಿದ ಊರು ಸಾಗರದಲ್ಲಿನ ಯುವ ಜನತೆಗೆ ಏನಾದರೂ ಮಾಡಬೇಕೆಂಬ ತುಡಿತ ಅವರಿಗೆ ಈಗಿನ ಅವರ ಸಾಮಥ್ಯ೯ದಲ್ಲಿ ಬೆಂಗಳೂರಿನಲ್ಲಿ ಪ್ರಾರಂಬಿಸ ಬಹುದಾದ ಕ್ರಿಕೆಟ್ ಆಕಾಡಮಿ ಸಾ...