Blog 1946.. ಅರವತ್ತರ ವೃದ್ದಾಪ್ಯ ಕಳೆದ ಜೀವನದ ಕಂಪಿನ ಮಲ್ಲಿಗೆ ಹೂವು ಚೆಲ್ಲಿದ ಹಾದಿ ಆದೀತು ಅಥವ ಅರಳು ಮರಳಿನ ಅನಾರೋಗ್ಯದ ಕಲ್ಲು ಮುಳ್ಳಿನ ದಾರಿಯೂ ಆದೀತು ಆದರೆ ನಡೆಯುತ್ತಲೇ ಇರಬೇಕು ಗಮ್ಯಸೇರಲು...
#ಜೀವಿತಾವದಿಯ_59_ವಷ೯_ಕಳೆಯಿತು #ಅರವತ್ತನೆ_ವಯಸ್ಸು_ಶುರುವಾಯಿತು #ಹಿನ್ನೋಟ_ಮತ್ತು_ಮುನ್ನೋಟ. #ನನ್ನ_ಜನ್ಮ_ದಿನಾಂಕ_ಪೆಬ್ರವರಿ_9_ಮಂಗಳವಾರ_1965 ನಾಳೆ ಶುಕ್ರವಾರ 9 - ಫೆಬ್ರುವರಿ-2024 ನನ್ನ 59 ವಷ೯ದ ಆಯಸ್ಸು ದಾಟಲಿದೆ ಮತ್ತು 60 ಕ್ಕೆ ಪಾದಾರ್ಪಣ ಮಾಡಲಿದೆ ಮುಂದಿನ ಒಂದು ವರ್ಷ ಕಳೆದರೆ ನಾನು ಹಿರಿಯ ನಾಗರೀಕ ಎಂದು ಘೋಷಿಸಿಕೊಳ್ಳಬಹುದು. ಅಂದರೆ ನನಗೆ ನನ್ನ ಜೀವಿತದ 59 ವರ್ಷ ಕಳೆದು 60ನೇ ವರ್ಷದ ಕಡೆ ಸಾಗಲು ಪ್ರಾರಂಭ ಆದಂತೆ. ಸಾಗಿ ಬಂದ ದಾರಿಯ ಹಿನ್ನೋಟ ಮತ್ತು ಸಾಗಲಿರುವ ದಾರಿಯ ಮುನ್ನೋಟದ ಕಡೆ ಕಣ್ಣು ಹಾಯಿಸಿದರೆ ಗಳಿಸಿದ್ದೇನು? ಕಳೆದುಕೊಂಡಿದ್ದೇನು? ಎಂಬುದು ತಿಳಿಯುತ್ತದೆ ನಾನು ಹೋದಲ್ಲಿ ಜೀವನ ಬಂತೋ ಅಥವ ಜೀವನ ಕರೆದುಕೊಂಡು ಹೋದ ಮಾಗ೯ದಲ್ಲಿ ನಾನು ಹೋದೆನಾ? ಅಂತ ನೋಡಿದರೆ ನನ್ನ ಪ್ರಯತ್ನಗಳು ವಿಪಲವಾಗಿ,ಅದು ಹೋದಲ್ಲಿ ತಕರಾರು ಇಲ್ಲದೆ ನಾನು ಹೋದದ್ದರಿಂದ ಸಪಲತೆ ದೊರೆಯಿತೆನ್ನಿಸುತ್ತದೆ. ಯಾವುದೂ ಅಂತ್ಯವೂ ಅಲ್ಲ... ಆರಂಭವೂ ಅಲ್ಲ... ರೂಪಾಂತರ ಮಾತ್ರ ಎಂಬಂತೆ ಉದರ ನಿಮಿತ್ತಂ ಬಹುಕೃತ ವೇಷಂ ಎಂಬಂತೆ ಅನೇಕ ಉದ್ಯೋಗಗಳನ್ನು ಮಾಡಿ ಅಪಾರ ಅನುಭವದ ಕಣಜಗಳನ್ನು ಕಟ್ಟಿದ್ದಾಯಿತು, ಮಿತ್ರ ದ್ರೋಹದ ಫಲ ಕೂಡ ಸ್ವೀಕರಿಸಾಯಿತು ಇದು ಎಲ್ಲರ ಜೀವನದಲ್ಲೂ ನಡೆಯುವಂತದ್ದೇ. ನಮ್ಮ ಆತ್ಮೀಯ ಖಾಸಾ ವೈದ್ಯರಾದ ಶಿವಮೊಗ್ಗದ ಡಯಾಬಿಟೀಸ್...