ಬಿ_ಎಸ್ಸಿ_ಆಪ್ಟೋಮೆಟ್ರಿ NEET_ಪರೀಕ್ಷೆ_ಮಾತ್ರ_ಜೀವನದ_ಸಾಧನೆ_ಎಂದು_ಪರಿಗಣಿಸ_ಬಾರದು. ನೀಟ್ ಉತ್ತೀರ್ಣರಾಗದಿದ್ದರೆ ಬೇರೆ ವೈದ್ಯಕೀಯ ಕ್ಷೇತ್ರದಲ್ಲಿ ವ್ಯಾಸಂಗ ಮಾಡಲು ಅವಕಾಶ ಇಲ್ಲವೆ?... ಖಂಡಿತಾ ಇದೆ ಮುಂದಿನ ದಿನಗಳಲ್ಲಿ ಹೆಚ್ಚು ವೇತನ ದೊರೆಯುವ ವಿದೇಶಗಳಲ್ಲೂ ಅವಕಾಶ ಇರುವ ಶಿಕ್ಷಣ ಮಾಡಲು ವಿವರಗಳು ಇಲ್ಲಿದೆ... ಪ್ರತಿ ವರ್ಷ ಸುಮಾರು 22ರಿಂದ 24 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾರತದಲ್ಲಿ NEET-UG ಪರೀಕ್ಷೆಗೆ ನೋಂದಾಯಿಸಿಕೊಳ್ಳುತ್ತಾರೆ. ಇವರಲ್ಲಿ ಪರೀಕ್ಷೆ ಬರೆದು ಅರ್ಹತೆ ಪಡೆಯುವವರ ಸಂಖ್ಯೆ ಸುಮಾರು 11 ರಿಂದ 13 ಲಕ್ಷದಷ್ಟಿರುತ್ತದೆ. ಆದರೆ ಅರ್ಹತೆ ಪಡೆದವರೆಲ್ಲರಿಗೂ ವೈದ್ಯಕೀಯ ಸೀಟು ಸಿಗುವುದಿಲ್ಲ,ಭಾರತದಲ್ಲಿ ಲಭ್ಯವಿರುವ ಸೀಟುಗಳ ಸಂಖ್ಯೆ ಸೀಮಿತವಾಗಿರುವುದರಿಂದ ಪ್ರತಿ ವರ್ಷ ಅಂದಾಜು 1.2 ರಿಂದ 1.3 ಲಕ್ಷ ವಿದ್ಯಾರ್ಥಿಗಳು ಮಾತ್ರ MBBS ಕೋರ್ಸ್‌ಗೆ ಪ್ರವೇಶ ಪಡೆದು ವೈದ್ಯರಾಗುವತ್ತ ಹೆಜ್ಜೆಯಿಡುತ್ತಾರೆ. #ಬಿ_ಎಸ್ಸಿ_ಆಪ್ಟೋಮೆಟ್ರಿ (B.Sc. Optometry) ಎಂಬುದು ಕಣ್ಣಿನ ಆರೋಗ್ಯ, ದೃಷ್ಟಿ ದೋಷಗಳ ಪತ್ತೆ ಮತ್ತು ಕಣ್ಣಿನ ಆರೈಕೆಗೆ ಸಂಬಂಧಿಸಿದ ಅತ್ಯಂತ ಜನಪ್ರಿಯ ಹಾಗೂ ಸ್ವತಂತ್ರ ವೈದ್ಯಕೀಯ ವೃತ್ತಿಪರ (Allied Health Science) ಪದವಿ ಕೋರ್ಸ್ ಆಗಿದೆ. ಕಣ್ಣಿನ ವೈದ್ಯರಿಗೆ (Ophthalmologists) ಕಣ್ಣಿನ ವಿವಿಧ ತಪಾಸಣೆಗಳನ್ನು ಮಾಡಲ...