#ಚಾಮರಾಜನಗರ_ಜಿಲ್ಲಾ_ಉಸ್ತುವಾರಿ_ಶಿಕ್ಷಣ_ಸಚಿವ #ಸಜ್ಜನ_ರಾಜಕಾರಣಿ_ಸುರೇಶ್_ಕುಮಾರ್ #ರಾಜಿನಾಮೆ_ನೀಡಲಿ_ಎಂದು_ಅವರ_ಅಭಿಮಾನಿ_ಆಗಿ_ಒತ್ತಾಯ_ಮಾಡುತ್ತೇನೆ ಇದು ಎರೆಡು ವರ್ಷದ ಹಿಂದಿನ ಪೋಸ್ಟ್ (4 - ಮೇ -2019) ಅವತ್ತು ಸುರೇಶ್ ಕುಮಾರ್ ಮಂತ್ರಿ ಆಗಿರಲಿಲ್ಲ ಈಗ ಹಾಲಿ ಶಿಕ್ಷಣ ಸಚಿವರು. ಅವರು ಜಿಲ್ಲಾ ಉಸ್ತುವಾರಿ ಆಗಿರುವ ಚಾಮನಗರದಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ಜನ ಕೊರಾನ ಪೀಡಿತರು ಮೃತರಾಗಿದ್ದಾರೆ ಇದು ಸಜ್ಜನ ರಾಜಕಾರಣಿ ಸುರೇಶ್ ಕುಮಾರ್ ರಾಜಕೀಯ ಜೀವನದಲ್ಲಿ ಒಂದು ಕಪ್ಪು ಚುಕ್ಕೆ. ಈಗ ಸಕಾ೯ರ ಮತ್ತು ಪಕ್ಷದ ಕಾರಣದಿಂದ ಇವರಿಂದ ಕೊಡಿಸುತ್ತಿರುವ ಸಮಥ೯ನೆಗಳು ಇವರ ವ್ಯಕ್ತಿತ್ವಕ್ಕೆ ಮಸಿ ಬಳಿಯುತ್ತಿರುವುದು ಸುಳ್ಳಲ್ಲ ಆಮ್ಲಜನಕ ಇಲ್ಲದೆ ಸತ್ತವರು 3 ಜನ, ಉಳಿದ 21 ಜನ ಬೇರೆ ಕಾರಣದಿಂದ ಒಂದೇ ದಿನ ಅಂದರೆ ಆಸ್ಪತ್ರೆಯಲ್ಲಿ ಆಮ್ಲಜನಕ ಖಾಲಿ ಆದ ಸಂದಭ೯ದಲ್ಲೇ ಸತ್ತರು ಅನ್ನುವುದು ಯಾರಾದರು ನಂಬುವ ಸತ್ಯವೆ? ಇಂತಹ ಸುಳ್ಳನ್ನು ಸುರೇಶ್ ಕುಮಾರ್ ಬಾಯಲ್ಲಿ ಹೇಳಿಸುವ ಸಕಾ೯ರದ ಹುನ್ನಾರಕ್ಕೆ ಸುರೇಶ್ ಕುಮಾರ್ ಬಲಿಯಾಗುವುದಕ್ಕಿಂತ ತಮ್ಮ ಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದರೆ ಅವರ ವ್ಯಕ್ತಿತ್ವಕ್ಕೆ ಶೋಭೆ ಬರುತ್ತಿತ್ತು. 👇2 ವಷ೯ದ ಹಿಂದಿನ ಪೋಸ್ಟ್ #ನನ್ನ_ಇವತ್ತಿ...