Skip to main content

Posts

Showing posts with the label Ex Chief minister J.H.Patel explained about liquor lovers

Blog number 1154.ಜೆ.ಹೆಚ್.ಪಟೇಲರು ಹೇಳಿದ ಕುಡಿಯೋರೇ ಬೇರೆ... ಕುಡುಕರೆ ಬೇರೆ ಏನಿದರ ಅರ್ಥ?

#ಕುಡುಕರಿಂದ ಕುಡಿಯೋರ        ಮಯಾ೯ದೆ ಹೋಗ್ತಾ ಇದೆ#                      - ಜೆ.ಹೆಚ್.ಪಟೇಲರು           ಶಿವಮೊಗ್ಗದಲ್ಲಿ ಮಿತ್ರರಾದ ಬ್ಯಾಂಕ್ ಕೃಷ್ಣಮೂರ್ತಿ ಅವರ ಭದ್ರಾವತಿ ರಸ್ತೆಯ ಮಲವಗೊಪ್ಪದಲ್ಲಿ ಕದಂಬ ಹೋಟೆಲ್ ಉದ್ಫಾಟನೆ ಇತ್ತು ಅಲ್ಲಿ ಜೆ.ಹೆಚ್.ಪಟೇಲರ ಒಡನಾಡಿ ಸಂಯುಕ್ತ ಜನತಾದಳದ ಲೋಕಪಾಲ ಜೈನರ ಭಾಷಣ ಅವತ್ತಿನ ಸಭೆಯ ಹೈಲೆಟ್ ಆಗಿತ್ತು.          ಸಭೆಯಲ್ಲಿ ಅನೇಕ ಗೌರವಾನ್ವಿತ ದಂಪತಿಗಳು ಉಪಸ್ಥಿತರಿದ್ದರು.          ಅವರು ತಮ್ಮ ಬಾಷಣದ ಪ್ರಾರಂಭದಲ್ಲಿ ಕುಡಿಯೋರೆ ಬೇರೆ ಕುಡುಕರೇ ಬೇರೆ ಆದರೆ ನೀವು ಹೆಣ್ಣು ಮಕ್ಕಳು ಕುಡಿಯೋರನ್ನೆಲ್ಲ ಕುಡುಕರ ಸಾಲಿಗೆ ಸೇರಿಸಿ ಬಿಡುತ್ತೀರಿ.... ಇದನ್ನ ಪಟೇಲರು ಒಂದು ಘಟನೆಯಲ್ಲಿ ಹೇಳಿದ್ದು ನೆನಪಾಯಿತು ಕೇಳಿ ಅಂತ ಶುರುಮಾಡಿದರು.             ಆಗ ಶಾಸಕರ ಭವನದಿಂದ ಮೆಜೆಸ್ಟಿಕ್ ತನಕ ಜನ ಸಂಚಾರ ವಿರಳ ಸಂಜೆ 8 ಆಗುತ್ತಿದ್ದಂತೆ ಪಟೇಲರು ಕೋಡೇಸ್ xxx ರಮ್ಮು ತರಲು ಹುಡುಗರಾದ ನಮ್ಮ ಹತ್ತಿರ ಹಣ ಕೊಟ್ಟು ಕಳಿಸಿದ್ದರು ನಾವು ತೆಗೆದುಕೊಂಡು ಬರುವಾಗ ಶಾಸಕರ ಭವನದ ಎದರು ಇಬ್ಬರು ಹೊಟ್ಟೆ ತುಂಬಾ ಕುಡಿದು ಕೊಂಡು ಜಗಳವಾಡುತ್ತಿದ್ದ...