#ಮದುವೆ_ಮುರಿದು_ಹೋಗುತ್ತಿತ್ತು_ಈ_ವಾಚಿನಿಂದ. #ರಾಡೋ_ಡಯಾಸ್ಪರ್_ಗೋಲ್ಡ್_ಕಲರ್_ವಾಚ್ #ಸ್ವಿಜರಲ್ಯಾಂಡ್_ರಾಡೋ_ವಾಚ್_ಕಂಪನಿಯ_ಮೋಡಿ #ವಿಶ್ವದ_ಮೊದಲ_ಸ್ಕ್ರಾಚ್_ಪ್ರೂಪ್_ವಾಚ್ #ರಾಡೋ_ಕಂಪನಿ_60ನೇ_ವಾರ್ಷಿಕೋತ್ಸವದ_ಆನಿವಸರ್ಸರಿ_ಎಡಿಷನ್_ಬಿಡುಗಡೆ_ಮಾಡಿದೆ #ತೂಕದ_ಸುಣ್ಣದ_ಡಬ್ಬಿ_ಅಂತ_ಇದನ್ನು_ಟ್ರೋಲ್_ಮಾಡುತ್ತಾರೆ. #ಬಹುಬೇಡಿಕೆಯ_ಶ್ರೀಮಂತಿಕೆಯ_ಪ್ರತೀಕವಾದ_ರಾಡೋ_ವಾಚ್. ನಾನು ವಾಚ್ ಕಟ್ಟಲೇ ಇಲ್ಲ, ಆದರೆ ವಾಚಿನ ಪಂಚಾಯಿತಿ ಮಾತ್ರ ನೂರಾರು ಮಾಡಿದ್ದೆ ಯಾಕೆಂದರೆ ನಾನು ಆ ಕಾಲದಲ್ಲಿ ರೈಸ್ ಮಿಲ್ ಮಾಲಿಕನಾಗಿದ್ದೆ, ಆಗ ವರದಕ್ಷಿಣೆ ಪಟ್ಟಿಯಲ್ಲಿ ವರನ ಗೆಳೆಯರು HMT ಯ ಇಂತದ್ದೇ ವಾಚ್ ವದುವಿನ ಮನೆಯಿಂದ ಪಡೆಯಲೇ ಬೇಕೆಂದು ವರನಿಗೆ ಸೂಚಿಸುತ್ತಿದ್ದರು, ವರನೂ ಇದನ್ನು ಶಿರಸಾವಹಿಸಿ ಪಾಲಿಸುತ್ತಿದ್ದ, ಇದರಲ್ಲಿ ಸ್ವಲ್ಪ ವ್ಯತ್ಯಾಸ ಆದರೂ ವರ ಮದುವೆ ಮುರಿಯುವ ಮಾತಾಡುತ್ತಿದ್ದ ಅಂತಹ ಸಮಯದಲ್ಲಿ ಪಂಚಾಯಿತಿ ನಡೆದು ಮದುವೆ ಸುಖಾಂತ್ಯ ಮಾಡುವ ಜವಾಬ್ದಾರಿ ರೈಸ್ ಮಿಲ್ ಮಾಲೀಕನಾದ ನನ್ನದಾಗಿರುತ್ತಿತ್ತು ಕಾರಣ ಆ ರೈತರ ಕುಟುಂಬದ ಬತ್ತ ನನ್ನ ಮಿಲ್ಲಿನಲ್ಲಿ ಅಕ್ಕಿ ಮಾಡಿಸಿಕೊಂಡು ಹೋಗುವವರಾದ್ದರಿಂದ ಅವರೊಡನೆ ನನಗಿದ್ದ ಅವಿನಾಭಾವ ಸಂಬಂದ. ಇಲ್ಲಿ ತುಂಬಾ ಸ್ವಾರಸ್ಯ ಮತ್ತು ತಮಾಷೆಯ ರಾಡೋ ವಾಚಿನ ಪ್ರಸಂಗ ಕೇಳಿ... ನನ್ನ ಮುಸ್ಲಿಂ ಗೆಳೆಯರ ತಮ್ಮನ ಮದುವೆ ಮಾತುಕಥೆಗೆ ನಾನು ಮುಖ...