Skip to main content

Posts

Showing posts with the label Draught relief list

4235.ಕೇಂದ್ರ_ಸರ್ಕಾರ_ಮಲೆನಾಡಿಗೆ_ಪ್ರತ್ಯೇಕ_ಪರ್ವತ_ಮಲೆನಾಡು_ಬರ_ನಿಯಮಾವಳಿ_ರೂಪಿಸದಿದ್ದರೆ_ಶಾಶ್ವತ_ಪರಿಹಾರ_ಇಲ್ಲ

ಕೇಂದ್ರ_ಸರ್ಕಾರ_ಮಲೆನಾಡಿಗೆ_ಪ್ರತ್ಯೇಕ_ಪರ್ವತ_ಮಲೆನಾಡು_ಬರ_ನಿಯಮಾವಳಿ_ರೂಪಿಸದಿದ್ದರೆ_ಶಾಶ್ವತ_ಪರಿಹಾರ_ಇಲ್ಲ.   ಮಲೆನಾಡಿನ ತಾಲ್ಲೂಕುಗಳಲ್ಲಿ ಬರಗಾಲ ಇದ್ದರೂ ಸರ್ಕಾರ ಬರಪೀಡಿತ ಎಂದು ಘೋಷಿಸಲು ಸಾಧ್ಯವಿಲ್ಲ.   ಮಲೆನಾಡು ಪ್ರದೇಶದ ಜನಪ್ರತಿನಿದಿಗಳು, ಜನಪರ ಹೋರಾಟಗಾರರು ಈ ಲೇಖನ ಗಮನವಿಟ್ಟು ಓದಿ ಮತ್ತು ಇದನ್ನು ಸಂಬಂದಪಟ್ಟವರಿಗೆ ಶೇರ್ ಮಾಡಿ.   ಮಲೆನಾಡಿನಲ್ಲಿ ಬರಗಾಲ ಬಂದಿದೆ ಆದರೆ ಸರ್ಕಾರ ಬರ ಪೀಡಿತ ತಾಲ್ಲೂಕು ಘೋಷಣೆ ಮಾಡಿಲ್ಲ, ವಿರೋಧ ಪಕ್ಷಗಳು ಮತ್ತು ರೈತ ಸಂಘಟನೆಗಳು ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಬರ ಪೀಡಿತ ತಾಲ್ಲೂಕು ಘೋಷಣೆ ಮಾಡಿ ಎಂದು ಪ್ರತಿಭಟನೆ ಮಾಡುತ್ತಿದೆ.    ಆದರೆ ಕೇಂದ್ರ ಸರ್ಕಾರದ ಬರ ಘೋಷಣೆಗೆ ಅಂಗೀಕರಿಸಿದ ಮಾನದಂಡ ಬದಲಾಗದೇ ಇದು ಸಾಧ್ಯವಿಲ್ಲ ಅದಕ್ಕಾಗಿ ಸಂಸದರು ಮತ್ತು ಶಾಸಕರಿಗೆ ಸೂಕ್ತ ಕ್ರಮಕ್ಕಾಗಿ ಒತ್ತಾಯಿಸ ಚೇಕಾಗಿದೆ.   ಎಲ್ಲಿಯ ತನಕ ಮಲೆನಾಡಿನ #ಶಾಸಕರು, #ಸಂಸದರು ಮತ್ತು #ರೈತ_ಸಂಘಟನೆಗಳು ಮಲೆನಾಡಿಗೆ ಪ್ರತ್ಯೇಕ ‘ಪರ್ವತ/ಮಲೆನಾಡು ಬರ ನಿಯಮಾವಳಿ’ (#Hilly_Terrain_Drought_Norms) ರೂಪಿಸುವಂತೆ #ಕೇಂದ್ರ_ಸರ್ಕಾರಕ್ಕೆ ನಿಯೋಗದ ಮೂಲಕ ಒತ್ತಡ ತರುವುದಿಲ್ಲವೋ ಅಲ್ಲಿ ತನಕ ಇದಕ್ಕೆ ಶಾಶ್ವತ ಪರಿಹಾರ ಇಲ್ಲ.    ಕರ್ನಾಟಕದಲ್ಲಿ ಒಂದು ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಲು ಕೇಂದ್ರ ಸರ್ಕಾರದ ‘ರಾಷ್ಟ್ರೀಯ ಬರ ನಿರ್ವಹಣಾ ಕೈಪಿಡಿ’ - ...