ಶೃಂಗೇರಿ_ಶ್ರೀಶಾರದಾ_ಪೀಠ #ಸುರೇಶ್ವರಾಚಾರ್ಯರು_ಪೂರ್ವಾಶ್ರಮದ #ಮಂಡನ_ಮಿಶ್ರರೇ_ಮೊದಲ_ಪೀಠಾಧಿಕಾರಿ. ಶೃಂಗೇರಿ ಶ್ರೀ ಶಾರದಾ ಪೀಠವನ್ನು ಜಗದ್ಗುರು #ಆದಿ_ಶಂಕರಾಚಾರ್ಯರು ಸ್ಥಾಪಿಸಿದರು. ಇತಿಹಾಸಕಾರರ ಪ್ರಕಾರ ಸುಮಾರು ಕ್ರಿ.ಶ. 8ನೇ ಶತಮಾನ (ಕ್ರಿ.ಶ. 788–820 ರ ಕಾಲಾವಧಿ / ಪರಂಪರೆಯ ಪ್ರಕಾರ ಸುಮಾರು ಕ್ರಿ.ಶ. 820). ಆದಿ ಶಂಕರಾಚಾರ್ಯರ ಪ್ರಮುಖ ಶಿಷ್ಯರಾದ ಶ್ರೀ #ಸುರೇಶ್ವರಾಚಾರ್ಯರು ಮೊದಲ ಪೀಠಾಧಿಕಾರಿಗಳು ಅವರ ಪೂರ್ವಾಶ್ರಮದ ಹೆಸರು #ಮಂಡನ_ಮಿಶ್ರ. ಆದಿ ಶಂಕರಾಚಾರ್ಯರು ಸನಾತನ ಧರ್ಮ ಮತ್ತು ಅದ್ವೈತ ವೇದಾಂತದ ಪ್ರಚಾರಕ್ಕಾಗಿ ಭಾರತದ ನಾಲ್ಕು ದಿಕ್ಕುಗಳಲ್ಲಿ ಸ್ಥಾಪಿಸಿದ ನಾಲ್ಕು ಆಮ್ನಾಯ ಪೀಠಗಳಲ್ಲಿ, ದಕ್ಷಿಣ ದಿಕ್ಕಿಗೆ ಸ್ಥಾಪಿಸಿದ ಮೊದಲ ಪೀಠವೇ ಶೃಂಗೇರಿಯ "#ದಕ್ಷಿಣಾಮ್ನಾಯ_ಶ್ರೀಶಾರದಾಪೀಠ". ಶೃಂಗೇರಿ ಶ್ರೀ ಶಾರದಾ ಪೀಠವು ಸನಾತನ ಧರ್ಮದ ರಕ್ಷಣೆ ಮತ್ತು ಅದ್ವೈತ ಸಿದ್ಧಾಂತದ ಪ್ರಸಾರಕ್ಕಾಗಿ ಆದಿ ಶಂಕರಾಚಾರ್ಯರಿಂದ ತುಂಗಾ ನದಿಯ ತೀರದಲ್ಲಿ ಸ್ಥಾಪಿತವಾದ ಅತ್ಯಂತ ಪ್ರಾಚೀನ ಹಾಗೂ ಪವಿತ್ರ ಪೀಠವಾಗಿದೆ. ಶಂಕರಾಚಾರ್ಯರು ಸಂಚಾರ ಮಾಡುತ್ತಿದ್ದಾಗ ತುಂಗಾ ತೀರದಲ್ಲಿ ಸುಡುಬಿಸಿಲಿನಲ್ಲಿ ಮಂಡೂಕವೊಂದಕ್ಕೆ (ಕಪ್ಪೆ) ನಾಗರಹಾವು ಹೆಡೆಬಿಚ್ಚಿ ನೆರಳು ನೀಡುತ್ತಿದ್ದ ವಿಸ್ಮಯ ದೃಶ್ಯವನ್ನು ಕಂಡರು. ವೈರತ್ವ ಮರೆತ ಇಂತಹ ಶಾಂತ, ಪವಿತ್ರ ಸ್ಥಳವೇ ತಪಸ್ಸಿಗೆ ಯೋಗ್ಯವೆಂದು ...