Skip to main content

Posts

Showing posts with the label Chatrapati Shivaji father Chatrapati Shahaji maharaja Tomb at Hodigere Channagiri Taluk and Secreat palace of Aramanekoppa near Bidanoor fort where Shivaji son Chatrapati Rajaram maharaja taken shelte

ಶಿವಾಜಿ ಮಹಾರಾಜರ ಜನ್ಮ ದಿನಾಚರಣೆಯ ಈ ಸಂದರ್ಭದಲ್ಲಿ ನಮ್ಮ ಸಮೀಪದ ಚೆನ್ನಗಿರಿಯ ಹೊದಿಗೆರೆಯಲ್ಲಿರುವ ಶಿವಾಜಿ ಮಹಾರಾಜರ ತಂದೆ ಷಹಾಜಿ ಮಹಾರಾಜರ ಸಮಾದಿ, ಹೊಸನಗರ ತಾಲ್ಲೂಕಿನ ಬಿದನೂರು ನಗರದ ಅರಮನೆಕೊಪ್ಪದಲ್ಲಿ ಶಿವಾಜಿ ಮಹಾರಾಜರ ಪುತ್ರ ಛತ್ರಪತಿ ರಾಜಾರಾಮರಿಗೆ ಕೆಳದಿ ರಾಣಿ ಚಿನ್ನಮ್ಮ ಆಶ್ರಯ ನೀಡಿದ್ದ ರಹಸ್ಯ ಅರಮನೆ, ನಗರದಲ್ಲಿ ರಾಜಾರಾಮರು ನಿರ್ಮಿಸಿರುವ ಪಾರ್ವತಿ ಮತ್ತು ಸುಬ್ರಮಣ್ಯ ದೇವಾಲಯ ಇತಿಹಾಸ ಆಸಕ್ತರಿಗೆ ಕೈ ಬೀಸಿ ಕರೆಯುತ್ತಿದೆ.

#ಇವತ್ತು_ಛತ್ರಪತಿ_ಶಿವಾಜಿ_ಮಹಾರಾಜರ_ಜನ್ಮ_ದಿನ. #ಶಿವಮೊಗ್ಗ_ಜಿಲ್ಲೆಗೂ_ಶಿವಾಜಿ_ವಂಶಸ್ಥರಿಗೂ_ಇದೆ_ಸಂಬಂಧ. #ಶಿವಾಜಿ_ಮಹಾರಾಜರ_ತಂದೆ_ಸಮಾದಿ_ಹೊದಿಗೆರೆಯಲ್ಲಿದೆ. #ಶಿವಾಜಿ_ಮಹಾರಾಜರ_ಮಗ_ಛತ್ರಪತಿ_ರಾಜಾರಾಮರು_ಆಶ್ರಯ_ಪಡೆದ_ರಹಸ್ಯ_ಅರಮನೆ_ಬಿದನೂರಿನ_ಅರಮನೆಕೊಪ್ಪದಲ್ಲಿದೆ. #ಛತ್ರಪತಿ_ರಾಜಾರಾಮರು_ಬಿದನೂರು_ನಗರದಲ್ಲಿ_ನಿರ್ಮಿಸಿರುವ_ಪಾರ್ವತಿ_ಮತ್ತು_ಸುಬ್ರಮಣ್ಯ_ದೇವಾಲಯ   19- ಪೆಬ್ರುವರಿ-1630 ಛತ್ರಪತಿ ಶಿವಾಜಿ ಮಹಾರಾಜರ ಜನ್ಮ ದಿನಾಚಾರಣೆ ದೇಶದಾದ್ಯಂತ ವಿಜೃ೦ಬಣೆಯಿಂದ ನಡೆಯುತ್ತಿದೆ.   ಒಂದು ಕಾಲದಲ್ಲಿ ಶಿವಮೊಗ್ಗ ಜಿಲ್ಲೆಯ ಈಗ ಜಿಲ್ಲಾ ಪುನರ್ ವಿಂಗಡನೆಯಲ್ಲಿ ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲ್ಲೂಕಿನ ಹೊದಿಗೆರೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ತಂದೆ ಛತ್ರಪತಿ ಷಹಾಜಿ ಮಹಾರಾಜರ ಸಮಾದಿ ಇದೆ.   ಇದು ಈಗ ರಾಷ್ಟ್ರೀಯ ಸ್ಮಾರಕ, ಇಲ್ಲಿಗೆ ಮಹಾರಾಷ್ಟ್ರದ ಬಾಳಾ ಠಾಕ್ರೆ, ಶರದ್ ಪವಾರ್ ಅಂತವರೆಲ್ಲ ಬೇಟಿ ನೀಡಿದ್ದಾರೆ, ಮರಾಠರಿಗೆ ಇದು ತುಂಬಾ ಪುಣ್ಯ ಸ್ಥಳ ಆಗಿದೆ.   ಷಹಾಜಿ ರಾಜೆ ಬೊಸಲೆ ಅವರ ಮೂಲ ಹೆಸರು ಅವರು ಇಲ್ಲಿ ಶಿಕಾರಿಗೆ ಹೋದಾಗ ಕುದುರೆಯಿಂದ ಜಾರಿ ಬಿದ್ದು ದಿನಾಂಕ 23- ಜನವರಿ -1664 ರಲ್ಲಿ ಮೃತರಾದರೆಂದು ಹೊದಿಗೆರೆಯ ಸಮಾದಿಯಲ್ಲಿ ನಿರ್ಮಿಸಿದ್ದಾರೆ, ಈ ಸಮಾದಿ ನಿರ್ವಹಣೆಗೆ ಆದಿಲ್ ಷಹಾ ಎರೆಡು ಹಳ್ಳಿಗಳನ್ನು ಉಂಬಳೆ ನೀಡಿದ ಇತಿಹಾಸ ಇದೆ.   ಸ್ಥಳಿಯ ಜನಪದದಲ್...