Skip to main content

Posts

Showing posts with the label My birth place Yadehalli

Blog number 3346. ನನ್ನ ಹುಟ್ಟೂರು ಯಡೇಹಳ್ಳಿ

https://www.facebook.com/share/v/14Ubircbve/ *#ಯಡೇಹಳ್ಳಿ* *ಡ್ರೋನ್ ವಿಡಿಯೋದಲ್ಲಿ ನಮ್ಮ ಊರು ನೋಡಿ.* *ಇದು ನಮ್ಮ ಯಡೇಹಳ್ಳಿಯ ಮೊಟ್ಟ ಮೊದಲ ಡ್ರೋಣ್ ವಿಡಿಯೋ.* *ಯಡೇಹಳ್ಳಿ ನನ್ನ ಹುಟ್ಟಿದೂರು ಎಂಬ ಹೆಮ್ಮೆ ನನಗೆ.* *ಡ್ರೋನ್ ಮಾಡಿದವರು ಖ್ಯಾತ ಡಿಜಿಟಲ್ ಮಾಧ್ಯಮದ ಆಕರ್ಷ್ ಮತ್ತು ನಂದಿನಿ ಪತ್ರಕರ್ತ ದಂಪತಿಗಳು ಅವರಿಗೆ ನಾವೆಲ್ಲರೂ ಚಿರಋಣಿಗಳು.* https://youtu.be/89faOVlcX_I?si=GTPUoeWQd6VYlqUL #yadehalli #ಯಡೇಹಳ್ಳಿ #Anandapuram #sagar #Shivamogga #ripponpet #battemallappa #hosanagara #thirthahalli #shikaripura  *ಯಡೇಹಳ್ಳಿ ನನ್ನ ಹುಟ್ಟಿದೂರು ಎಂಬ ಹೆಮ್ಮೆ ನನಗೆ.* *ಎಲ್ಲರಿಗೂ ಅವರವರ ಹುಟ್ಟಿದ ಊರಿನ ಬಗ್ಗೆ ವಿಶೇಷ ಅಭಿಮಾನ ಸಹಜ.* *ನನ್ನ ಊರು ಯಡೇಹಳ್ಳಿಯ ಮಾಹಿತಿ ಮತ್ತು ವಿಶೇಷಗಳು ನಿಮಗಾಗಿ.*   *ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂ ಹೋಬಳಿ ಕೇಂದ್ರದ ಯಡೇಹಳ್ಳಿ ಗ್ರಾಮ ಪಂಚಾಯಿತಿ ಕೇಂದ್ರ ಆಗಿದೆ.*   *ಯಡೇಹಳ್ಳಿ ವೃತ್ತ ಶಿವಮೊಗ್ಗ ಮತ್ತು ಸಾಗರದ ಮಾರ್ಗದಲ್ಲಿ ಪ್ರಮುಖ ಕೇಂದ್ರ ಸ್ಥಳವಾಗಿದೆ.*     *ಶಿವಮೊಗ್ಗದಿಂದ ಬರುವ ರಾಷ್ಟ್ರೀಯ ಹೆದ್ದಾರಿ 69, ರಾಣಿಬೆನ್ನೂರಿನಿಂದ ಶಿಕಾರಿಪುರ ಮಾರ್ಗವಾಗಿ ಬರುವ ರಾಷ್ಟ್ರೀಯ ಹೆದ್ದಾರಿ 766 C ಮತ್ತು ತೀರ್ಥಹಳ್ಳಿ - ರಿಪ್ಪನಪೇಟೆಯಿಂದ ಬರುವ ರಾಜ್ಯ ಹೆದ್ದಾರಿ ರಸ್ತೆ ಹಾಗೂ ಹೊಸನಗರ - ಬಟ್ಟೆಮಲ್ಲ...