Blog number 2160. ನನ್ನ ಕಾದಂಬರಿಯ ಬಗ್ಗೆ ಗೇಲಿಯ ಪ್ರತಿಕ್ರಿಯೆ ಇತಿಹಾಸ ಸಂಶೋದಕ ಗಣಪತಿ ಹೆಚ್.ಕೆ.ಪೇಸ್ ಬುಕ್ ನಲ್ಲಿ ದಾಖಲಿಸಿದ್ದರು ಅದಕ್ಕೆ ನನ್ನ ಗೆಳೆಯರೂ ಕೆಲವರೂ ಕೈಜೋಡಿಸಿದ್ದರು ಆ ಸಂದರ್ಭದಲ್ಲಿ ಖ್ಯಾತ ಲೇಖಕ ಗಜಾನನ ಶರ್ಮಾರು ಅವರ ಗೇಲಿಗೆ ನೀಡಿದ ಪ್ರತ್ಯುತ್ತರ ಇಲ್ಲಿದೆ.
ನನ್ನ ಕಾದಂಬರಿ ಬೆಸ್ತರ ರಾಣಿ ಚಂಪಕಾ ಬಿಡುಗಡೆ ಆದಾಗ ಅದರ ಕುರಿತು ಸಾಗರದ ಕೆಲವು ಇತಿಹಾಸ ಸಂಶೋದಕರು (ಗಣಪತಿ ಹೆಚ್.ಕೆ. ಪೇಸ್ ಬುಕ್ ನಲ್ಲಿ) ಗೇಲಿಯ ರೀತಿಯ ಟೀಕೆಗಳು ಮಾಡಿದರು ಇದರಿಂದ ನನಗೆ ಕೊಂಚ ಬೇಸರ ಉಂಟಾಗಿತ್ತು. ಇದು ನನ್ನ ಊರಿನ ನಿಜ ಕಥೆ ಇದರ ಸ್ಮಾರಕ ಕೂಡ ನಮ್ಮ ಊರಲ್ಲಿದೆ, ರಾಣಿ ಚಂಪಕಳ ವಂಶಸ್ಥರು ಈಗಲೂ ನಮ್ಮ ಊರಲ್ಲಿದ್ದಾರೆ. ಇಟಲಿಯಲ್ಲಿ ನದಿ, ಸಮುದ್ರದ ಪಕ್ಕದಲ್ಲಿ ಮೀನುಗಾರಿಕೆಗೆ ಕ್ಯಾಂಪ್ ಹಾಕುವವರಿಗೆ ಮೂರರು ಎನ್ನುತ್ತಾರಂತೆ ಅಲ್ಲಿ ನಮ್ಮಲ್ಲಿಯಂತೆ ಜಾತಿ ವ್ಯವಸ್ಥೆ ಇಲ್ಲದ ಕ್ರಿಶ್ಚಿಯನ್ ದರ್ಮಿಯರು ಮಾತ್ರ ಇರುವ ಪ್ರದೇಶ ಆದ್ದರಿಂದ ಚಂಪಕ ಬೆಸ್ತರವಳಾದ್ದರಿಂದ ಮೂರರು ಎಂದು ಉಲ್ಲೇಖಿಸಿದ್ದಾರೆ ಎಂದು ಕೆಲ ಸಂಶೋದಕರು ಹೇಳುತ್ತಾರೆ. ಭಾರತದಲ್ಲಿ ಬ್ರಿಟೀಶರು ಮುಸ್ಲಿಮರಿಗೆ ಮೂರರು ಎಂದು ಕರೆಯುತ್ತಿದ್ದರಿಂದ ಚಂಪಕಳನ್ನ ಮುಸ್ಲಿಂ ಎಂದೇ ಅನೇಕರು ವಾದ ಮಾಡುತ್ತಾರೆ ಆದರೆ ಕಣ್ಣೆದುರು ಇರುವ ಸಾಕ್ಷಿ ಪರಿಗಣಿಸದ ಸಂಶೋದಕರು ನಮ್ಮವರು ಆದ್ದರಿಂದಲೇ ಇಂತಹ ಸಂಶೋಧಕರ ಪ್ರಹಾರ ತಪ್ಪಿಸಿಕೊಳ್ಳಲು ನಾನು ಕಾಲ್ಪನಿಕ ಕಾದಂಬರಿ ಎಂದೇ ಅಚ್ಚಿಸಿದ್ದೇನೆ. ರಾಜರ ಇತಿಹಾಸಗಳಲ್ಲಿ ಇಂತಹ ಅನೇಕ ಜನ ಸಾಮಾನ್ಯರ ವಿಚಾರಗಳು ಮುನ್ನಲೆಗೆ ಬರುವುದಿಲ್ಲ ಬಂದರೂ ದೊಡ್ಡ ದೊಡ್ಡ ಪಂಡಿತರುಗಳು ಒಪ್ಪಲಾರರು. ಒನಕೆ ಓಬವ್ವನ ಕಥೆ ಕೂಡ ಇಂತಹದ್ದೇ ಇತಿಹಾಸದಲ್...