Skip to main content

Posts

Showing posts with the label It not easy to reduce weight in mid age

ಮದ್ಯ ವಯಸ್ಸಿನಲ್ಲಿ ತೂಕ ಇಳಿಸುವುದು ಸುಲಭವಲ್ಲ ನನ್ನ ಅನುಭವ

#ಶಿವರಾತ್ರಿಯಿಂದ_ಶಿವರಾತ್ರಿವರೆಗೆ #ಇಪ್ಪತ್ತು_ಕೇಜಿ_ತೂಕ_ಇಳಿಸಿಕೊಂಡಿದ್ದು #ಸ್ಥೂಲಕಾಯದವರಿಗೆ_ಸುಲಭ_ಉಪಾಯ    ಕಳೆದ ವರ್ಷ ಫೆಬ್ರುವರಿ 23ಕ್ಕೆ ಇರಬೇಕು ಶಿವರಾತ್ರಿ ಅವತ್ತೇ ತೀಮಾ೯ನ ಮಾಡಿದ್ದೆ ಮುಂದಿನ ವರ್ಷದ ಶಿವರಾತ್ರಿ ತನಕ ರಾತ್ರಿ ಊಟ ಬಿಡುವುದಂತ.    ನಮ್ಮ ತಂದೆ ಕೂಡ ರಾತ್ರಿ ಊಟ ಮಾಡುತ್ತಿರಲಿಲ್ಲ ಮಲಗುವಾಗ ಒಂದು ಲೋಟ ರಾಗಿ ಅಂಬಲಿ ಹಾಲು ಮಾತ್ರ ಅವರ ಪದ್ಧತಿ ಆಗಿತ್ತು.   ಕಳೆದ ವರ್ಷ ಜನವರಿಯಲ್ಲಿ ಶಿವಮೊಗ್ಗದ ಡಾಕ್ಟರ್ ಪ್ರೀತಂ (ನಮ್ಮ ಕುಟುಂಬ ವೈದ್ಯರು) ತಪಾಸಣೆಗೆ ಹೋದಾಗ ನನ್ನ ತೂಕ 133 - 135 ರ ಆಸುಪಾಸಿನಲ್ಲಿತ್ತು, ಡಯಾಬಿಟೀಸ್ ಖಾಲಿ ಹೊಟ್ಟೆಯಲ್ಲಿ 240 ಊಟದ ನಂತರ 300 ರ ಸಮೀಪ ಇರುತ್ತಿತ್ತು, ಹೊಟ್ಟೆ ಗುಡಾಣ ಆಗಿತ್ತು ಅದರ ಮಧ್ಯೆ ಹೊಕ್ಕುಳ ಹತ್ತಿರ ಹನಿ೯ಯಾ ಬೇರೆ.   ಹತ್ತಿಪ್ಪತ್ತು ಹೆಜ್ಜೆ ನಡೆಯಲು ಆಯಾಸ ಇದು ನನ್ನ ದೇಹದ ಒಳಗಿನ  ಬಯಾಲಾಜಿಕಲ್ ಕ್ಲಾಕ್ ಅಲಾರಂ ಮಾಡುತ್ತಿತ್ತು "ನಿನ್ನ ಆರೋಗ್ಯ ಹದಗೆಟ್ಟಿದೆ ಎಚ್ಚರ " ಅಂತ.   1995 ರ ತನಕ ನನ್ನ 35 ವರ್ಷದ ತನಕ ನನಗೆ ತೂಕದ ಸಮಸ್ಯೆ ಇರಲಿಲ್ಲ ನಂತರವೇ ಪ್ರಾರಂಭ ಆದ ತೂಕದ ಏರುಗತಿ 2001ರಲ್ಲಿ 120 ದಾಟಿ ಅಲ್ಲೇ ನಿಂತಿದ್ದು 2020ಕ್ಕೆ ಪುನಃ ತನ್ನ ಏರುಗತಿ ಪ್ರಾರಂಬಿಸಿತ್ತು.   ಪ್ರತಿ 3 ತಿಂಗಳಿಗೆ ತೊಡುವ ಬಟ್ಟೆ ಅಳತೆ ಬದಲಾಗಿ ಹೊಸ ಬಟ್ಟೆ ಬೇಕಾಗಿತ್ತು, ಬೇರಿಯಾಟ್ರಿಕ್ ಸಜ೯ರಿ ಮಾಡಿಸಿಕೊಳ್ಳ...