Skip to main content

Posts

Showing posts with the label Jangalwale Baba interview for local janahorata daily and He was our guest stayed in my kalyanamantapa

Blog number 1198. ಜಂಗಲ್ ವಾಲೆ ಬಾಬಾ ಜೈನ ಸಂತರು ನಮ್ಮಲ್ಲಿ ತಂಗಿದ್ದರು ಅವರ ಜೊತೆ ಸತ್ಸಂಗ ಮತ್ತು ಶಿವಮೊಗ್ಗ ಜಿಲ್ಲಾ ಪತ್ರಿಕೆ ಜನ ಹೋರಾಟಕ್ಕೆ ಸಂದರ್ಶನ ಮಾಡಿದ ಭಾಗ್ಯ ನನ್ನದು.

#ಜಂಗಲ್ ವಾಲೆ ಬಾಬ ಎಂದು ಪ್ರಖ್ಯಾತರಾಗಿದ್ದ ಜೈನ ಮುನಿ ರಾಷ್ಟ್ರ ಸಂತ 108 ಶ್ರೀ ಚಿನ್ಮಯ ಸಾಗರ ಮಹಾರಾಜರು ಅತ್ಯಂತ ಸಣ್ಣ ವಯಸ್ಸಿನಲ್ಲಿ ಸಲ್ಲೇಖನ ವೃತ (ಕೇವಲ ನೀರು ಮಾತ್ರ ಸೇವನೆ) ಕೈಗೊಂಡು ನಿನ್ನೆ ಶನಿವಾರದಿಂದ (12 ಅಕ್ಟೋಬರ್ 2019) ದಿಂದ ಯಮ ಸಲ್ಲೇಖನ ವೃತ ಅಂದರೆ ನೀರು ಸ್ವೀಕರಿಸದೆ ದೇಹ ತ್ಯಾಗಕ್ಕೆ ಮುಂದಾಗಿ ದೇಹ ತ್ಯಾಗ ಮಾಡಿದ್ದಾರೆ#.     ಇಂತಹ ಪುಣ್ಯಪುರುಷರು ನಮ್ಮ ಕಲ್ಯಾಣ ಮಂಟಪದಲ್ಲಿ ತಂಗಿದ್ದರು,ಇವರ ಜೊತೆ ಕೆಲಸಮಯ ಕಳೆದದ್ದು, ಪತ್ರಿಕಾ ಸಂದಶ೯ನ ಮಾಡಿದ್ದು ನನ್ನ ಸೌಬಾಗ್ಯ ಮತ್ತು ಪೂವ೯ಜನ್ಮದ ಪುಣ್ಯ ಎಂದು ಬಾವಿಸುತ್ತೇನೆ ಇವರ ಬಗ್ಗೆ ನಾನು ಬರೆದ ಬ್ಲಾಗ್ ಲೇಖನ ಯಥಾವತ್ತು ಇಲ್ಲಿ ಹಾಕಿದ್ದೇನೆ.  ಇಡೀ ದೇಶದಲ್ಲಿ ಜಂಗಲ್ ವಾಲೆ ಬಾಬ ಅಂತ ಚಿರಪರಿಚಿತರಾದ ಜೈನ ಮುನಿ ರಾಷ್ಟ್ರ ಸಂತ 108 ಮುನಿ ಶ್ರೀ ಚಿನ್ಮಯ ಸಾಗರ ಮಹರಾಜರು ನಮ್ಮಲ್ಲಿ ತ0ಗಿದ್ದರು ಮತ್ತು ಅವರನ್ನ ಶಿವಮೊಗ್ಗದ ಶೃ೦ಗೇಶ್ ರ ಜನ ಹೋರಾಟ ಪತ್ರಿಕೆಗೆ ಸಂದಶ೯ನ ಮಾಡಿದ್ದೆ ಅಂದರೆ ಅವರನ್ನ ಬಲ್ಲವರು ನಂಬುವುದಿಲ್ಲ.     ಯಾಕೆಂದರೆ ಅವರು ಆಚರಿಸುವ ಚಾತುಮಾ೯ಸಕ್ಕೆ ಅನೇಕ ರಾಜ್ಯದ ಮುಖ್ಯಮಂತ್ರಿಗಳು, ಕೇಂದ್ರ ಸಕಾ೯ರದ ಮಂತ್ರಿಗಳು, ಉನ್ನತ ಹುದ್ದೆಯ ಅಧಿಕಾರಿಗಳು ಅವರನ್ನ ಹುಡುಕಿಕೊಂಡು ಬರುತ್ತಾರೆ.       ರಾಜೀವ್ ಗಾ೦ದಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮನ್ಮೋಹನ್ ಸಿಂಗ್, ಮೋದಿ ಇವರ...