Skip to main content

Posts

Showing posts with the label Condolence to Sri Chippali Gopala krishnsa Rayaru

ಮಲೆನಾಡಿನ ಸಜ್ಜನ ವಿಶಿಷ್ಟ ವ್ಯಕ್ತಿತ್ವದ ಸಿದ್ಧಿ ವಿನಾಯಕ ಅಡಿಕೆ ಮ೦ಡಿ ಮಾಲಿಕರಾದ ಶ್ರೀ ಚಿಪ್ಪಳಿ ಗೊಪಾಲಕೃಷ್ಣ ರಾಯರಿಗೆ ಶ್ರದ್ದಾ೦ಜಲಿಗಳು

             ಶ್ರದ್ದಾ೦ಜಲಿಗಳು ಸಜ್ಜನ ಸಂಪನ್ನ ಮರೆಯಲಾರದ ವ್ಯಕ್ತಿತ್ವದ ಚಿಪ್ಪಳಿ ಗೋಪಾಲಕೃಷ್ಣರಾವ್      1991ರಲ್ಲಿ ಆನಂದಪುರಂ ಕನ್ನಡ ಯುವಕ ಸಂಘ ಡಾಕ್ಟರ್ ಮೋದಿಯವರ ಉಚಿತ ಕಣ್ಣಿನ ಚಿಕಿತ್ಸಾ ಶಿಭಿರ ಹಮ್ಮಿಕೊಂಡಿತ್ತು ಅದಕ್ಕಾಗಿ ಪೂರ್ವ ತಯಾರಿ ಸಭೆಯಲ್ಲಿ ಮುಂಬಾಳಿನ ಗೋಕುಲ್ ಪಾರಂನ ಪಾದರ್ ಜೋಸ್ ಅಧ್ಯಕ್ಷರನ್ನಾಗಿ ನನ್ನನ್ನ ಉಪಾಧ್ಯಕ್ಷ ನಾಗಿ ಆಯ್ಕೆ ಮಾಡಿ ಶಿಬಿರದ ಯಶಸ್ವಿಗೆ ಬೇಕಾದ ಸಂಪನ್ಮೂಲ ಕ್ರೂಡಿಕರಿಸುವ ಜವಾಬ್ದಾರಿ ಕೊಟ್ಟಿದ್ದರು.    ಆಗೆಲ್ಲ ಕಣ್ಣಿನ ಪೊರೆ ಬಂದು ಹತ್ತು ಇಪ್ಪತ್ತು ವರ್ಷ ಆದವರು ಇರುತ್ತಿದ್ದರು ಅವರು ಅವರ ಜೊತೆ ಇಬ್ಬರು ಬರುತ್ತಿದ್ದರು ಅವರಿಗೆ ಊಟ ವಸತಿ ವ್ಯವಸ್ಥೆ ಸುಮಾರು 7 ದಿನ ಮಾಡಬೇಕಾಗಿತ್ತು ಮತ್ತು ಮೋದಿಯವರ ಕಣ್ಣಿನ ಆಪರೇಷನ್ ಅಂದರೆ ತಮ್ಮ ಕಣ್ಣು ಸೇಪ್ ಎನ್ನುವಷ್ಟು ನಂಬಿಕೆ ಆದ್ದರಿಂದ ಶಿಬಿರಕ್ಕೆ ಪರೀಕ್ಷಿಸಿಕೊಳ್ಳಲು ಬರುವವರು ಎರೆಡು ಸಾವಿರದ ಹತ್ತಿರ ಇರುತ್ತಿದ್ದರು.    ಇವರಲ್ಲಿ ಪೊರೆ ತೆಗೆಯಬಹುದಾದ ಸುಮಾರು 300 ರಿಂದ 400 ಜನರಿಗೆ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡುತ್ತಿದ್ದರು ಸುಮಾರು ಸಾವಿರ ಜನರಿಗೆ ಉಟೋಪಚಾರ ಅನಿವಾಯ೯.   ಈ ನೇತ್ರ ಚಿಕಿತ್ಸೆಗಾಗಿ ದಾನಿಗಳನ್ನ ಸಂಪಕಿ೯ಸುವ ಸಂದಭ೯ದಲ್ಲಿ ಪಾದರ್ ಜೋಸ್ ನನ್ನನ್ನ ಅನೇಕ ಶ್ರೀಮಂತರ ಹತ್ತಿರ ಕರೆದೊಯ್ದಿದ್ದರು ನಾನು ರಾಜಕೀಯ ಕ್ಷೇತ...