Skip to main content

Posts

Showing posts with the label Grampanchayat election Quite different election than parliament or Assembly

ಗ್ರಾಮ ಪಂಚಾಯತ್ ಚುನಾವಣೆ ಅಷ್ಟು ಸುಲಭವಲ್ಲ ಲೋಕಸಭೆ, ವಿದಾನ ಸಭೆ ಚುನಾವಣೆಯಷ್ಟು ಸುಲಭವೂ ಅಲ್ಲ

#ಗ್ರಾಮ_ಪಂಚಾಯಿತಿ_ಚುನಾವಣೆ_ಗೆಲ್ಲುವುದು_ಸುಲಭವೇನಲ್ಲ   ನನ್ನ ಊರು ಮನೆ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ಯಡೇಹಳ್ಳಿ, ರಾ.ಹೆ. 206 ಹೊನ್ನಾವರ ಬೆಂಗಳೂರು ಹೆದ್ದಾರಿಯಲ್ಲಿದೆ ಒಂದು ಕಾಲದಲ್ಲಿ ಆನಂದಪುರಂ, ಯಡೇಹಳ್ಳಿ ಮತ್ತು ಆಚಾಪುರ ಸೇರಿ ವಿಲೇಜ್ ಪಂಚಾಯತ್ ಆಗಿತ್ತು ಈ ಮೂರು ಪ್ರತ್ಯೇಕ ಗ್ರಾ.ಪಂ.ಮಾಡಿದ್ದಾರೆ, ಈ ಮೂರು ಗ್ರಾ.ಪಂ. ಸೇರಿಸಿ ಪಟ್ಟಣ ಪಂಚಾಯತ್ ಮಾಡುವ ಅಹ೯ತೆ ಇದ್ದರೂ ಆಳುವವರು ಯಾಕೋ ಮನಸ್ಸು ಮಾಡಿಲ್ಲ.    ಮೊನ್ನೆ ನನ್ನ ಶಿಷ್ಯ ನಾರೀ ಲೋಕಪ್ಪ ಬಂದಿದ್ದರು ಈ ಬಾರಿ ನಾಲ್ಕನೇ ಬಾರಿ ಗ್ರಾ.ಪಂ. ಆಯ್ಕೆ ಆಗಿದ್ದಾರೆ, ಸಿಹಿ ಕೊಟ್ಟು ಅಭಿನಂದಿಸಿದೆ.    1995ರಲ್ಲಿ ನಾನು ಜಿ.ಪ.ಸದಸ್ಯನಾಗುವಾಗ ನಾರೀ ಲೋಕಪ್ಪ ಚಿಕ್ಕ ಬಾಲಕ, ಇವರ ತಂದೆ ನಾರಿ ನಾರಾಯಣಪ್ಪ ನನ್ನ ಗೆಳೆಯರು, ಅವರು ಮಂಡಲ್ ಪಂಚಾಯಿತಿ ಸದಸ್ಯರಾಗಿದ್ದಾಗ ಇವರ ಈಡಿಗ ಸಮಾಜದ ಆ ಕಾಲದ ವಿದ್ಯಾವಂತ ಕೋವಿ ನಾರಾಯಣಪ್ಪರನ್ನ ಅಧ್ಯಕ್ಷರನ್ನಾಗಿಸದೆ ಬೇರೆಯವರನ್ನ ಆಯ್ಕೆ ಮಾಡುವ ಸಂದಭ೯ದಲ್ಲಿ ಇವರು ನನ್ನ ಸಹಾಯ ಬಯಸಿ ಬಂದಿದ್ದರು, ಬಹುಮತಕ್ಕೆ ಬೇಕಾಗಿದ್ದ 3 ಸದಸ್ಯರು ನನ್ನ ಹತ್ತಿರ ಇದ್ದರು ಆಗ ನಾನು, ಒಂದು ಕಾಲದ ದೀಘ೯ಕಾಲದ ಅಧ್ಯಕ್ಷರಾಗಿದ್ದ ಅಡೂರು ವಿಲೇಜ್ ಪಂಚಾಯತ್ ನ #ಜಮ್ಮಿನ_ಕೇವಿ_ಈರನಾಯ್ಕರು ಮತ್ತು ಒಂದು ಕಾಲದ ಸಾಗರ ತಾಲ್ಲೂಕ್ ಬೋಡ್೯ ಸದಸ್ಯರಾಗಿದ್ದ #ತಾರಸಿಕ್ಕೆ_ಹಿರಿಯಣ್ಣ_ನಾಯಕರು ನಾರೀ ನಾರಾಯಣಪ್ಪರ...