Blog number 839.ಕಳೆ ಅಂತ ಬಾವಿಸಿದ್ದ ವಡೇಲಿಯಾ ಟ್ರಿಲೋಬಾಟ ಪ್ರಕೃತಿ ತಾನಾಗಿ ಬೆಳೆಸಿದ ಹೊಸ ತಳಿ, ಇದರ ಉಪಯೋಗದ ಬಗ್ಗೆ ರೈತ ಸಮುದಾಯದಲ್ಲಿ ಆರೋಗ್ಯಕರ ಚಚೆ೯ ಪ್ರಾರಂಭ ಆಗಿದೆ
#ವಡೇಲಿಯಾ_ಟ್ರಿಲೋಬಾಟ #ಪ್ರಕೃತಿ_ತಾನಾಗಿ_ಬೆಳೆಸಿದ_ಹೊಸ_ತಳಿ #ಕಳೆನಾ_ಅಥವ_ಉಪಯುಕ್ತ_ಬೆಳೆನಾ #ಅಡಿಕೆ_ಬೇರುಹುಳಕ್ಕೆ_ಇದು_ಔಷದಿಯಾ #ಕೋಳಿಗಳಿಗೆ_ಬಲು_ಪ್ರೀತಿ_ಇದು. ನಮ್ಮ ವಿಕ್ಟೋರಿಯಾ ಕಾಟೇಜ್ ನ ಗಾರ್ಡನ್ ನಲ್ಲಿ ತೆಂಗಿನ ಮರಗಳಿಗೆ ಸ್ಥಳಿಯ ಜಂಬಿಟ್ಟಿಗೆ ಕಲ್ಲಿನಿಂದ ವೃತ್ತಾಕಾರದ ಕಲ್ಲಿನ ಕಟ್ಟಿ ಕಟ್ಟಿ ಅದರಲ್ಲಿ ಮರಳು ತುಂಬಿದ್ದೇನೆ (ಮಣ್ಣಿದ್ದರ ತೆಂಗಿನ ಮರದ ಬೇರು ಬಿಡುತ್ತದೆಂದು. ಈ ಕಟ್ಟೆಯ ಸುತ್ತಾ ಈ ವಡೇಲಿಯಾ ಟ್ರಿಲೋಬಾಟ (wadelia trilobata) ಎಂಬ ಬೊಟಾನಿಕಲ್ ಹೆಸರಿನ, ಚಿಕ್ ಪೀ ಅಂತೆಲ್ಲ ಕರೆಯುವ ಇದನ್ನು ನಮ್ಮ ಆತ್ಮೀಯ ಕೆಲಸಗಾರ ಮಿತ್ರ #ಕಣ್ಣೂರಿನ_ನಾಗರಾಜ್ ನಾಟಿ ಮಾಡಿದ್ದರು. ಇದು ಹುಲುಸಾಗಿ ಬೆಳೆದು ಹಳದಿ ಹೂ ಬಿಟ್ಟಿದೆ ಮತ್ತು ಈ ತೆಂಗಿನ ಮರದ ಕಟ್ಟೆಗೆ ಸುಂದರವಾದ ಲುಕ್ ಕೊಟ್ಟಿದೆ. ಇತ್ತೀಚಿಗೆ ಇದನ್ನು ನೋಡಿದ ಪ್ರಸಿದ್ಧ ಜಲ ತಜ್ಞ, ಕಾಡಿನ ವಿಜ್ಞಾನಿ ಶಿವಾನಂದ ಕಲವೆ ಇದು ಬೆಳೆಯುವ ಹರಡುವ ಕ್ಷಿಪ್ರತೆಯ ಬಗ್ಗೆ ತಿಳಿಸಿದಾಗಲೇ ಗೊತ್ತಾಗಿದ್ದು. ಇದರ ಬೀಜ ಪ್ರಸಾರ ಮತ್ತು ವೇಗವಾಗಿ ಹರಡುವುದರಿಂದ ಇದೊಂದು ನಿವಾರಿಸಲು ಕಷ್ಟಸಾಧ್ಯವಾದ ಹೊಸ ರೀತಿಯ ಕಳೆ ಎಂದೇ ಬಾವಿಸಲಾಗಿದೆ ಇದರ ಸುಂದರ ನೋಟ ಇದನ್ನು ಕಿತ್ತು ತೆಗೆಯಲಾಗಲಿಲ್ಲ. ಮೊನ್ನೆ FB ಯಲ್ಲಿ #ಕಿಲಾರ_ಸತೀಷ್_ಹೆಗ್ಗಡೆ ಇದರ ಬಗ್ಗೆ ಉಲ್ಲೇಖಿಸ...