Skip to main content

Posts

Showing posts with the label Six years completed for chanting Vishnu Sahasra Nama

Blog number 2321. ವಿಷ್ಣು ಸಹಸ್ರನಾಮ ಪಠಣ ಆರು ವರ್ಷ ಮುಕ್ತಾಯ

#ವಿಷ್ಣು_ಸಹಸ್ರನಾಮ. ನನಗೆ ತುಂಬಾ ಸಂತೃಪ್ತಿ ತಂದ ದಿನ ಇವತ್ತು.  ವಿಷ್ಣು ಸಹಸ್ರನಾಮ ಪಾರಾಯಣ ಎಂಬ ಈ ಆದ್ಯಾತ್ಮಿಕ ಅಭ್ಯಾಸಕ್ಕೆ ಇವತ್ತಿಗೆ 6 ವರ್ಷ ಮುಕ್ತಾಯವಾಗಿ 7ನೇ ವರ್ಷದ ಮೊದಲ ದಿನ ಪ್ರಾರಂಭವಾಯಿತು. ನಿರಂತರ ಒಂದು ದಿನವೂ ತಪ್ಪದೇ ಪಠಣ ಮಾಡಿದೆ ಅನ್ನುವುದಕ್ಕಿಂತ ದೇವರ ಅನುಗ್ರಹದಿಂದ ಸಾಧ್ಯವಾಗಿದೆ. #vishnu #VishnuSahasranama #jothishi #drnsvishwapathishastri #abhimaniprakashana   #venkatesh #drrajkumarroad #AdiShankaracharya #Ramanujacharya #madvacharya #harekrishna #arunprasad    ದಿನಾಂಕ 23- ನವೆಂಬರ್ -2018ರಿಂದ ವಿಷ್ಣು ಸಹಸ್ರನಾಮ  ನಿತ್ಯ ಪಠಣ ಮಾಡುವ ಸಂಕಲ್ಪ ಮಾಡಿ ಪ್ರಾರಂಬಿಸಿದ್ದೆ.   ಈ ಪುಸ್ತಿಕೆ ತಂದು ಕೊಟ್ಟವರು ಖ್ಯಾತ ಜ್ಯೋತಿಷಿಗಳಾದ ಬೆಂಗಳೂರಿನ ವಿಜಯನಗರದ  ಡಾ.ಎನ್.ಎಸ್. ವಿಶ್ವಪತಿ ಶಾಸ್ತ್ರೀಗಳು.    ಇದನ್ನು ಮುದ್ರಿಸಿದವರು ಬೆಂಗಳೂರಿನ ಡಾ.ರಾಜಕುಮಾರ್ ರಸ್ತೆಯ ಪ್ರಖ್ಯಾತ ಮುದ್ರಣ ಸಂಸ್ಥೆ ಅಭಿಮಾನಿ ಪ್ರಕಾಶನದ ವೆಂಕಟೇಶ್ ಅವರು.   ಪ್ರಾರಂಭದಲ್ಲಿ ಉಚ್ಚರಿಸಲು ಹೆಚ್ಚು ಶ್ರಮ ಪಡಬೇಕಾಯಿತು (ಸಂಸ್ಕೃತ ಉಚ್ಚಾರಣೆ) ಇದಕ್ಕೆ ಪತ್ನಿ ಗುರುವಾಗಿ ತಿದ್ದಿದ್ದರಿಂದ ಉಚ್ಚಾರಣೆ ಸರಿ ಆಯಿತು.     ಮಹಾ ಭಾರತ ಯುದ್ಧ ಕಾಲದಲ್ಲಿ ಮರಣ ಶಯ್ಯೆಯಲ್ಲಿದ್ದ ಬೀಷ್ಮರಿಗೆ ಯುದಿಷ್ಟರ ಕೇಳ...