#ವರದಾ_ನದಿ #ಶಿವಮೊಗ್ಗ_ಜಿಲ್ಲೆಯ_ಸಾಗರ_ತಾಲ್ಲೂಕಿನ_ವರದಾಮೂಲದಲ್ಲಿ_ಉಗಮ. #ಬನವಾಸಿ_ಮೂಲಕ_ಹರಿದು_ಹಾವೇರಿ_ಜಿಲ್ಲೆಯ_ಗಳಗನಾಥದಲ್ಲಿ #ತುಂಗಭದ್ರ_ನದಿಗೆ_ಸಂಗಮ_ಅಗುತ್ತದೆ. #Varadariver #Shivamogga #Sagar #Uttarakannadadistrict #Banavasi #Galaganatha #Haveridistrict #Tungabadra ವರದಾ ನದಿ ತುಂಗಭದ್ರಾ ನದಿಯ ಪ್ರಮುಖ ಉಪನದಿ ಇದರ ಉದ್ಭವ ಸ್ಥಳ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವರದಾ ಮೂಲ. ಪುರಾಣದಲ್ಲಿ ವರದಾ ನದಿ ಉಗಮದ ಬಗ್ಗೆ ಎರೆಡು ಕಥೆಗಳಿದೆ... ಮೊದಲನೆಯದು ಶೃಂಗಋಷಿ ಒಮ್ಮೆ ತೀವ್ರ ತಪಸ್ಸಿನಲ್ಲಿದ್ದು, ಬ್ರಹ್ಮಹತ್ಯಾದೋಷ ಮಾಡಿದ್ದಕ್ಕಾಗಿ ವಿಷ್ಣುವಿನಿಂದ ಕ್ಷಮೆ ಕೇಳುತ್ತಿದ್ದನು. ಶ್ರೀಮನ್ನಾರಾಯಣನು ಅವನ ಮುಂದೆ ಪ್ರತ್ಯಕ್ಷನಾಗಿ ಋಷಿಯ ತಲೆಯ ಮೇಲೆ ಗಂಗಾಜಲವನ್ನು ಸುರಿದನು. ಈ ಗಂಗಾಜಲವು ವರದಾ ನದಿಯನ್ನು ರೂಪಿಸಿತು. ಇನ್ನೊಂದು ಪುರಾಣ ಕಥೆ ಶಿವ ರೌದ್ರವತಾರ ತಾಳಿದಾಗ ಅವನ ತಾಪವಿಳಿಸಲು ವಿಷ್ಣು ಶಂಖದಲ್ಲಿ ಭಾಗಿರಥಿ ಜಲ ಶಿವನಿಗೆ ಅಭಿಷೇಕ ಮಾಡಿದ ನೀರೆ ವರದಾ ನದಿ ಆಯಿತೆಂದು. ಸಾಗರ ಪಟ್ಟಣದಿಂದ ಆವಿನಹಳ್ಳಿ ರಸ್ತೆಯ ಇಕ್ಕೇರಿ ಅಘೋರೇಶ್ವರ ದೇವಾಲಯದ ವೃತ್ತದಲ್ಲಿ ಎಡಕ್ಕೆ ಸಾಗಿದರೆ ವರದಾ ನದಿ ಉಗಮ ಸ್ಥಳ ವರದಾ ಮೂಲ ಇದೆ. ಈ ನದಿಗೆ ಸಾಗರ ಪಟ್ಟಣದಲ್ಲಿ ಆಣೆಕಟ್ಟು ನಿರ್ಮಿಸಿ ಕೆಲ ದಶಕಗಳ ಕಾಲ ಸಾಗರದ ಪ...