Blog number 1220.ಕಿರಿಯ ಗೆಳೆಯ ಪತ್ರಕರ್ತ ಪವನ್ ಕುಮಾರ್ ಕಠಾರೆ ನನ್ನ ಕಾದಂಬರಿ ಬೆಸ್ತರ ರಾಣಿ ಚಂಪಕಾ ಬಗ್ಗೆ ಬರೆದದ್ದು
ಯುವಕರಿಗೆ ಉತ್ಸಾಹಿ ಮಾರ್ಗದರ್ಶಕರು ಹಾಗೂ ಸಂಕಷ್ಟದಲ್ಲಿರುವವರಿಗೆ ನೆರವನ್ನು ನೀಡುವ ಮಿತ್ರರು ಹಾಗೂ ನಮ್ಮೂರಿನ ಇತಿಹಾಸವನ್ನು ಮರಳಿ ನೆನಪಿಸಲು ಬರೆದ ಕೃತಿಯಾದ ಖ್ಯಾತ ರಾಜಾ ವೆಂಕಟಪ್ಪ ನಾಯಕ ಮತ್ತು ಚಂಪಕ ರಾಣಿ ದುರಂತ ಪ್ರೇಮಕಥೆಯ ಲೇಖಕರು ಶ್ರೀಯುತ ಕೆ ಅರುಣ್ ಪ್ರಸಾದ್. ಶ್ರೀಯುತ *ಕೆ.ಅರುಣ್ ಪ್ರಸಾದ್* ರವರು ಆನಂದಪುರ ಭಾಗದ ಜನರಲ್ಲಿ ಎಂದು ಅಚ್ಚಳಿಯದೆ ಉಳಿಯುವ ಮಹಾನ್ ವ್ಯಕ್ತಿ. ಇವರ ಹೆಸರು ಜಿಲ್ಲೆಯ ಸುತ್ತಮುತ್ತಲಿನ ಎಲ್ಲ ಗ್ರಾಮದ ಚಿಕ್ಕ ಪುಟ್ಟ ಮಕ್ಕಳಿಂದ ಹಿಡಿದು ವೃದ್ಧಾಪ್ಯದಲ್ಲಿ ರುವಂತಹ ಎಲ್ಲಾ ವ್ಯಕ್ತಿಗಳಿಗೂ ಕೂಡ ಚಿರ ಪರಿಚಿತ. ಇದಕ್ಕೆ ಕಾರಣ ಅವರು ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರ ಜೊತೆ ನಡೆದುಕೊಳ್ಳುವ ಉತ್ತಮ ಬಾಂಧವ್ಯ. ಇವರು ಬಡವ ಹಾಗೂ ಶ್ರೀಮಂತ ಎಂಬ ಭೇದ ಭಾವವಿಲ್ಲದೆ ತಮ್ಮ ಪಕ್ಕದಲ್ಲಿ ಎಲ್ಲಾ ವರ್ಗದ ಜನರನ್ನು ಕೂರಿಸಿಕೊಂಡು ಮಾತನಾಡುವ ಸೌಜನ್ಯಯುತ ವ್ಯಕ್ತಿ.ಇವರು ಜಿಲ್ಲಾ ಪಂಚಾಯತ್ ಸದಸ್ಯರಾದಗ ಮಾಡಿದ ಕೆಲಸ ಕಾರ್ಯಗಳು ಇನ್ನೂ ಕೂಡ ಜೀವಂತವಾಗಿದೆ. ಹಾಗೂ ಯಡೇಹಳ್ಳಿಯಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿ ದೇವಾಲಯವನ್ನು ಕೂಡ ಕಟ್ಟಿಸಿದವರು ಇವರೆ, ಯಾವುದೇ ವ್ಯಕ್ತಿಗಳು ತಮಗೆ ಕಷ್ಟವಿದೆ ಎಂದು ಅವರ ಬಳಿ ಹೋದಾಗ ತಮ್ಮ ಕೈಲಾದಷ್ಟು ಸಹಾಯವನ್ನೂ ಮಾಡಿ ಕಳಿಸುವಂತಹ ಮಹಾನ್ ದಾನಿಗಳು ಕೂಡ ಹೌದು. ತಮ್ಮ ಆತ್ಮೀಯರಿಗೆ ಏನಾದರೂ ಸಂಕಷ್ಟ ಒದಗಿದಾಗ ಇವರಷ್ಟು ಮರಗುವವ...