Skip to main content

Posts

Showing posts with the label Anandapuram A.R.Badarinarayana Iyangar and A.Ramarao arrested and jailed in MYSORE CHALO AGITATION

ಭಾಗ - 55, ಆನಂದಪುರಂ ಇತಿಹಾಸ, ಮೈಸೂರು ಚಲೋ ಚಳವಳಿಯಲ್ಲಿ ಆನಂದಪುರಂ ಬದರಿನಾರಾಯಣಯ್ಯ೦ಗಾರರು ಮತ್ತು ಎ.ರಾಮರಾವ್ ಬಾಗವಹಿಸಿ ಜೈಲಿಗೆ ಹೋದವರು, ಈ ಚಳವಳಿಯಲ್ಲಿ ಭಾಗವಹಿಸಿದ್ದ ಕಾಗೋಡು ಕೆ.ಜಿ.ಒಡೆಯರ್ ಪಾರ್ಲಿಮೆಂಟ್ ಸದಸ್ಯರಾಗಿದ್ದು ಮತ್ತು ಎ.ಆರ್. ಬದರಿನಾರಾಯಣ ಅಯ್ಯಂಗಾರರು ವಿದ್ಯಾ ಮಂತ್ರಿಗಳಾಗಿದ್ದು ಇತಿಹಾಸ.

#ಭಾಗ_55. #ಆನಂದಪುರಂ_ಇತಿಹಾಸ. #ಸ್ವಾತಂತ್ರ್ಯ_ನಂತರ_ನಡೆದ_ಮೈಸೂರು_ಚಲೋ_ಚಳವಳಿ #ಚಳವಳಿಯಲ್ಲಿ_ಭಾಗವಹಿಸಿ_ಜೈಲು_ಸೇರಿದವರಲ್ಲಿ_ಆನಂದಪುರಂನಿಂದ_ಇಬ್ಬರು. #ಬದರಿನಾರಾಯಣಯ್ಯಂಗಾರ್_ಮತ್ತು_ರಾಮರಾವ್.    1947 ಆಗಸ್ಟ್ 15ಕ್ಕೆ ಸ್ಟಾತಂತ್ರ್ಯ ಲಭಿಸಿ ಈಗ 75 ನೇ ವರ್ಷಾಚಾರಣೆಯಲ್ಲಿದ್ದೇವೆ ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಿ ಮತ್ತು ಆ ಕುಟುಂಬಗಳನ್ನು ಪ್ರೀತಿಯಿಂದ ಆಧರಿಸುವ ಈ ಸಂದರ್ಭದಲ್ಲಿ ಸಾಗರ ತಾಲ್ಲೂಕಿನಲ್ಲಿ ನಡೆದ ಮೈಸೂರು ಚಲೋ ಚಳವಳಿ ನೆನಪಿಸಿ ಕೊಳ್ಳಬೇಕಾಗಿದೆ.   ಇದು ಬ್ರಿಟಿಷರ ವಿರುದ್ದ ನಡೆದ ಸ್ವಾತಂತ್ರ್ಯ ಚಳವಳಿ ಅಲ್ಲ, ಮೈಸೂರು ಸರಕಾರವು ಸ್ವತಂತ್ರ ಭಾರತದಲ್ಲಿ ಐಕ್ಯವಾಗಿ ಅರಸೊತ್ತಿಗೆ ಅಳಸಿಹಾಕಲು ಮೀನಾ - ಮೇಷ ಎಣಿಸಿತ್ತು ಆದ್ದರಿಂದ ಕಾಂಗ್ರೇಸ್ #ಮೈಸೂರು_ಚಲೋ ಚಳವಳಿಗೆ ಕರೆ ಕೊಟ್ಟಿತ್ತು.   ಈ ಚಳವಳಿ ಮೈಸೂರು ರಾಜ್ಯದಲ್ಲಿ ಎಲ್ಲೆಡೆ ಹಬ್ಬಿ ಉಗ್ರ ರೂಪ ತಾಳಿತು, ಇದಕ್ಕೆ ಎಲ್ಲೆಲ್ಲೂ ರೈಲು ಚಳವಳಿ, ವಿದ್ಯಾರ್ಥಿ ಚಳವಳಿ, ಪೋಲಿಸರ ಮುಷ್ಕರಗಳಿಂದಲೂ ಚಳವಳಿಯ ಪರಿಣಾಮ ಪ್ರಚಂಡವಾಗಿ ಅರಮನೆ, ಆಳರಸರು ಅವರ ಸಕಾ೯ರ ಮತ್ತು ಅದರ ದಿವಾನ್ ಅರ್ಕಾಟ್ ಲಕ್ಷ್ಮಣ ಸ್ವಾಮಿ ಮೊದಲಿಯಾರ್ ಸಾಹೇಬರು ಮಣಿದರು.   13- ಅಕ್ಟೋಬರ್ -1947ರಲ್ಲಿ ಮಹಾರಾಜರು "ಪ್ರಜಾಪ್ರತಿನಿದಿಗಳ ಮಂತ್ರಿ ಮಂಡಲ ಸ್ಥಾಪನೆ ಆಗಿದೆ" ಎಂದು ಘೋಷಿಸಿದರು, 24- ಅ...